ಬಾದಾಮಿಯಲ್ಲಿ ನಡೆದ ಅಂಗವಾಡಿ ಕಾರ್ಯಕರ್ತರ ಮುಷ್ಕರಕ್ಕೆ ವಿದೇಶಿ ಮಹಿಳೆಯರ ಸಾಥ್​

ಬಾಗಲಕೋಟೆ: ವಿವಿಧ ಸಂಘಟನೆಗಳು ಕರೆ ನೀಡಿರುವ ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರ ಹಿನ್ನೆಲೆಯಲ್ಲಿ ಬಾದಾಮಿಯಲ್ಲಿ ನಡೆದ ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆಗೆ ವಿದೇಶಿ ಮಹಿಳೆಯರು ಸಾಥ್ ನೀಡಿದರು.

ಪ್ರವಾಸಕ್ಕೆ ಬಂದಿದ್ದ ಕೆನಾಡದ ವಿದೇಶಿ ಮಹಿಳೆಯರು ಬಾದಾಮಿಯ ಬಸ್ ನಿಲ್ದಾಣದ ಬಳಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಈ ವೇಳೆ ಕಾರ್ಮಿಕ ಸಂಘಟನೆಯ ಬಾವುಟ ಹಿಡಿದು ಧರಣಿ ಕುಳಿತು ಕ್ಯಾಮರಾಗೆ ಪೋಸ್​ ನೀಡಿ, ಮತ್ತೆ ಅಲ್ಲಿಂದ ತೆರಳಿದರು.

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ವಿವಿಧ ಕಾರ್ಮಿಕ ಸಂಘಟನೆಗಳು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಮೊದಲ ದಿನವಾದ ಇಂದು ಬಂದ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಲ್ಲಲ್ಲಿ ಕೆಲವು ಸೇವೆಗಳಲ್ಲಿ ವ್ಯತ್ಯಯವಾಗಿದೆ. (ದಿಗ್ವಿಜಯ ನ್ಯೂಸ್​)

One Reply to “ಬಾದಾಮಿಯಲ್ಲಿ ನಡೆದ ಅಂಗವಾಡಿ ಕಾರ್ಯಕರ್ತರ ಮುಷ್ಕರಕ್ಕೆ ವಿದೇಶಿ ಮಹಿಳೆಯರ ಸಾಥ್​”

Comments are closed.