
ಮಾಯಕೊಂಡ: ವಿದೇಶಗಳಲ್ಲೂ ಕನ್ನಡ ಕಲಿಕೆ ಬಗ್ಗೆ ಆಸಕ್ತಿ ಹೆಚ್ಚುತ್ತಿದೆ ಎಂದು ನಿವೃತ್ತ ಶಿಕ್ಷಕ ಪಾರಿ ಮಹಾದೇವಪ್ಪ ತಿಳಿಸಿದರು.
ಇಲ್ಲಿನ ಆಂಜನೇಯ ವೃತ್ತದಲ್ಲಿ ಕನ್ನಡ ಯುವ ಶಕ್ತಿ ಕೇಂದ್ರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ದುಬೈ ಇನ್ನಿತರ ದೇಶಗಳಲ್ಲಿ ಕನ್ನಡ ಶಾಲೆಗಳು ತಲೆ ಎತ್ತುತ್ತಿವೆ. ಈ ರೀತಿಯಾಗಿ ಕನ್ನಡದ ಕಂಪು ವಿಶ್ವಾದ್ಯಂತ ಕಂಪ ಸೂಸುತ್ತಿದೆ. ಆದರೆ ಕರ್ನಾಟಕದಲ್ಲಿ ಕನ್ನಡವನ್ನು ಕಡೆಗಣಿಸುತ್ತಿರುವುದು ವಿಷಾದನೀಯ. ಪಾಲಕರು ಆಂಗ್ಲ ವ್ಯಾಮೋಹ ಬಿಟ್ಟು ಮಕ್ಕಳಿಗೆ ಕನ್ನಡ ಕಲಿಕೆಗೆ ಆಸಕ್ತಿ ತೋರಬೇಕು ಎಂದು ಮನವಿ ಮಾಡಿದರು.
ಗ್ರಾಪಂ ಸದಸ್ಯ ರಾಜಶೇಖರ ಸಂಡೂರ್, ಮಾಜಿ ಅಧ್ಯಕ್ಷ ನಾಗರಾಜಪ್ಪ, ಅಧ್ಯಕ್ಷೆ ರೂಪಾ ರಘುರಾಮ, ಮಾಜಿ ಸದಸ್ಯರಾದ ಎಲ್.ಜೆ.ಉಮಾಶಂಕರ್, ಶರಣಪ್ಪ ಮಾತನಾಡಿದರು. ಕೆನರಾ ಬ್ಯಾಂಕ್ ವ್ಯವಸ್ಥಾಪಕ ಶೀತಲ್ ಧ್ವಜಾರೋಹಣ ನೆರವೇರಿಸಿದರು.
ಗ್ರಾಪಂ ಉಪಾಧ್ಯಕ್ಷೆ ಸುರಾವತಿ, ಮಾಜಿ ಅಧ್ಯಕ್ಷ ಲಕ್ಷ್ಮಣ್, ಸದಸ್ಯರಾದ ದಾಕ್ಷಾಯಣಮ್ಮ, ಮಮತಾ, ಗಂಗಾಧರಪ್ಪ, ಮಲ್ಲಿಕಾರ್ಜುನಪ್ಪ, ಜಯ್ಯಪ್ಪ, ಕನ್ನಡ ಯುವಶಕ್ತಿ ಕೇಂದ್ರದ ಅಧ್ಯಕ್ಷ ರೇವಣಸಿದ್ದಪ್ಪ, ಪದಾಧಿಕಾರಿಗಳು, ಮುಖಂಡ ರಾಮಕೃಷ್ಣಪ್ಪ ಇತರರಿದ್ದರು.