23.9 C
Bangalore
Friday, December 6, 2019

ಆತಂಕದಲ್ಲಿ ವಿದೇಶಿ ವೈದ್ಯ ಪದವಿ

Latest News

ಹಲವು ನಿಗೂಢ ಅಪರಾಧ ಪ್ರಕರಣ ಪತ್ತೆ ಮಾಡಿದ್ದ ಪೊಲೀಸ್​ ಶ್ವಾನ ರೂಬಿ ಸಾವು

ರಾಯಚೂರು : ಅಪರಾಧಿಗಳ ಪತ್ತೆಗೆ ತರಬೇತಿ ಪಡೆದಿದ್ದ ರೂಬಿ ಹೆಸರಿನ ಪೊಲೀಸ್​ ಶ್ವಾನ ಮೃತಪಟ್ಟಿದೆ.ಪೊಲೀಸ್​ ಇಲಾಖೆಯಲ್ಲಿ 13 ವರ್ಷ 6 ತಿಂಗಳು ಸೇವೆ...

ಗ್ರಹಣವು ಅಚ್ಚರಿಗಳ ಸಂಗಮ

ದಾವಣಗೆರೆ: ಗ್ರಹಣವು ಅಚ್ಚರಿಗಳ ಸಂಗಮವಾಗಿದ್ದು ಅದರ ಬಗ್ಗೆ ತಿಳಿಯುವ ಕುತೂಹಲ ಬೆಳೆಸಿಕೊಳ್ಳಬೇಕು ಎಂದು ವಿಜ್ಞಾನ ಸಂವಹನಕಾರ ಪ್ರೊ.ಎಂ.ಆರ್. ನಾಗರಾಜು ಹೇಳಿದರು. ಡಿ. 26ರಂದು ಸಂಭವಿಸುವ ಕಂಕಣ ಸೂರ್ಯ...

ಎನ್​ಕೌಂಟರ್​ಗೆ ಮಾನವಹಕ್ಕುಗಳ ಕಾರ್ಯಕರ್ತರಿಂದ ಅಸಮಾಧಾನ: ಸಿಎಂ ಕೆ ಚಂದ್ರಶೇಖರ್ ವಿರುದ್ಧ ಆರೋಪ

ನವದೆಹಲಿ: ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ ನಂತರ ಹತ್ಯೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಶುಕ್ರವಾರ ಮುಂಜಾನೆ ಎನ್​ಕೌಂಟರ್​ನಲ್ಲಿ ಕೊಂದಿದ್ದಕ್ಕೆ ಮಾನವ ಹಕ್ಕುಗಳ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ನ್ಯಾಯಾಲಯದಲ್ಲಿ ತಪ್ಪಿತಸ್ಥರೆಂದು...

ಸೀತಾರಾಮನ್​ ಅವರ ಈರುಳ್ಳಿ ಹೇಳಿಕೆ ತಿರುಚಿ ಟ್ರೆಂಡಿಂಗ್ ಮಾಡಲಾಗಿದೆ: ಫ್ಯಾಕ್ಟ್​​ಚೆಕ್​ನಲ್ಲಿ ಬಹಿರಂಗ

ನವದೆಹಲಿ: ಈರುಳ್ಳಿ ಬೆಲೆ ಏರಿಕೆ ಸಂಬಂಧ ಸಂಸತ್ತಿನಲ್ಲಿ ನಡೆದ ಚರ್ಚೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದ ಹೇಳಿಕೆ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು....

ಭಾರತೀಯ ಯುವಜನರಿಗೆ ವಿದೇಶಿ ಪದವಿಗಳ ಬಗ್ಗೆ ಒಂದು ರೀತಿಯ ಕ್ರೇಜ್. ತಮ್ಮ ಪದವಿಯ ಮುಂದೆ ಬ್ರ್ಯಾಕೆಟ್​ನಲ್ಲಿ ವಿದೇಶಿ ಪದವಿಯ ಹೆಸರು ಬರೆದುಕೊಳ್ಳಲು ತುಂಬಾ ಹೆಮ್ಮೆ. ಆದರೆ ಈ ಪದವಿ ಗಳಿಸುವ ಅವಸರದಲ್ಲಿ ತೆಗೆದುಕೊಳ್ಳುವ ದುಡುಕಿನ ನಿರ್ಧಾರ ಶೈಕ್ಷಣಿಕ ಭವಿಷ್ಯಕ್ಕೆ ಕುತ್ತು ತರಬಹುದು!

| ರಮಾನಂದ ಶರ್ಮಾ

ಬಹುತೇಕ ವೈದ್ಯರು ತಮ್ಮ ಡಿಗ್ರಿಯ ಮುಂದೆ ಬ್ರ್ಯಾಕೆಟ್​ನಲ್ಲಿ ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್, ಲಂಡನ್ ಇತ್ಯಾದಿ ಬರೆಯುವುದನ್ನು ಕಾಣಬಹುದು. ಇತ್ತೀಚಿನ ದಿನಗಳಲ್ಲಂತೂ ಇದೊಂದು ರೀತಿಯಲ್ಲಿ ಕ್ರೇಜ್ ಎನಿಸಿಬಿಟ್ಟಿದೆ. ಇದಕ್ಕೆ ಕಾರಣವೂ ಇದೆ. ಅದೇನೆಂದರೆ, ವಿದೇಶಿ ಪದವಿಗಳಿಗೆ ನಮ್ಮ ದೇಶದಲ್ಲಿ ವಿದೇಶಿ ವಸ್ತುಗಳಿಗೆ ಇರುವಷ್ಟೇ ಬೆಲೆ ಮತ್ತು ಮಹತ್ವ ಇದೆ. ಜನರಲ್ಲಿಯೂ ವಿದೇಶದಲ್ಲಿ ಕಲಿತು ಬಂದವನೆಂದರೆ, ಅವನನ್ನು ನೋಡುವ ದೃಷ್ಟಿಯೇ ಬೇರೆ ಇರುತ್ತದೆ. ಮದುವೆ ಮಾರುಕಟ್ಟೆಯಲ್ಲೂ ವಿದೇಶಿ ಪದವೀಧರರಿಗೆ ಬೇಡಿಕೆ ಹೆಚ್ಚು ಎನ್ನುವ ತಮಾಷೆಯ ಮಾತು ಇದ್ದರೂ ಇದು ನಿಜವೂ ಹೌದು! ಭಾರತದಲ್ಲಿ ಖಾಸಗಿ ವೈದ್ಯ ಕಾಲೇಜುಗಳಲ್ಲಿ -ಠಿ; 50 ಲಕ್ಷದಷ್ಟು ಹಣ ಕೊಡಲು ಸಾಧ್ಯವಾಗದ ಕಾರಣ,

ಹಾಸ್ಟೆಲ್ ಶುಲ್ಕ ಸಹಿತ 20-25 ಲಕ್ಷ ರೂಪಾಯಿಗಳಲ್ಲಿ ವೈದ್ಯಕೀಯ ಕೋರ್ಸ್ ನೀಡುವ ರಷ್ಯನ್, ಫಿಲಿಪ್ಪೀನ್ಸ್, ನೇಪಾಳ, ಅಮೇನಿಯಾ, ಉಕ್ರೇನ್ ಮತ್ತು ಕಜಕಸ್ತಾನ ದೇಶಗಳ ಕಾಲೇಜುಗಳಲ್ಲಿ ವೈದ್ಯಕೀಯ ಕೋರ್ಸ್ ಮಾಡುತ್ತಾರೆ. ಉತ್ತರ ಭಾಗದ ಹಿಂದಿ ರಾಜ್ಯಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ದೇಶದ ಕಾಲೇಜುಗಳಲ್ಲಿ ವೈದ್ಯಕೀಯ ಕೋರ್ಸ್ ಮಾಡುವುದನ್ನು ನೋಡಬಹುದು.

ಪ್ರತಿ ವರ್ಷ ಸುಮಾರು ಐದು ಸಾವಿರ ಭಾರತೀಯ ವಿದ್ಯಾರ್ಥಿಗಳು ವಿದೇಶಿ ವೈದ್ಯಕೀಯ ಪದವಿ ಪಡೆಯುತ್ತಾರೆ. ಭಾರತದ ಮೆಡಿಕಲ್ ಕಾಲೇಜುಗಳಲ್ಲಿ ವಾರ್ಷಿಕ ಹೊಸ ಪ್ರವೇಶಗಳು ಸುಮಾರು 67 ಸಾವಿರ ಮಾತ್ರ. ವೈದ್ಯಕೀಯ ಸೀಟಿಗಾಗಿ ಸ್ಪರ್ಧೆ ತುರುಸಿನದಾಗಿದ್ದು, ಬೇಡಿಕೆ ಮತ್ತು ಪೂರೈಕೆ ಸಮೀಕರಣದಲ್ಲಿ ಇಲ್ಲಿ ಸೀಟು ದೊರಕದೇ ಹೊರದೇಶಗಳಲ್ಲಿ ಪ್ರಯತ್ನಿಸುವವರ ಸಂಖ್ಯೆಯೂ ಹೆಚ್ಚಿದೆ. ಕೆಲವರಿಗೆ ವಿದೇಶದಲ್ಲಿ ಕಲಿಯುವ ಕ್ರೇಜ್ ಬೇರೆ. ಹಾಗೆಯೇ ಕೆಲವು ಪೋಷಕರಿಗೆ ಮಕ್ಕಳನ್ನು ವಿದೇಶದಲ್ಲಿ ಓದಿಸುತ್ತೇನೆನ್ನುವ ಸಾಮಾಜಿಕ ಸ್ಟೇಟಸ್ ಬೇರೆ. ಎಂ.ಬಿ.ಎ, ಎಮ್ ಎಸ್ ನಂತರ ವಿದೇಶಿ ವೈದ್ಯಕೀಯ ಪದವಿಗಳ ಗೀಳು ಕೂಡ ನಮ್ಮದೇಶದಲ್ಲಿ ಹೆಚ್ಚು.

ಕೆಲವು ದೇಶಗಳ ವೈದ್ಯಕೀಯ ಕಾಲೇಜುಗಳಲ್ಲಿ ಓದಿ ಪದವಿ ಪಡೆದು ಬಂದವರು ಭಾರತದಲ್ಲಿ ಪ್ರಾಕ್ಟೀಸ್ ಮಾಡುವಂತಿಲ್ಲ. ಈ ಪದವಿಗಳಿಗೆ ಈ ದೇಶದಲ್ಲಿ ತಕ್ಷಣ ಮಾನ್ಯತೆ ಇರುವುದಿಲ್ಲ. ಅವರು ಭಾರತದಲ್ಲಿ ಪ್ರಾಕ್ಟೀಸ್ ಮಾಡಬೇಕಾದರೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದವರು ನಡೆಸುವ ಸ್ಕ್ರೀನಿಂಗ್ ಟೆಸ್ಟ್​ನಲ್ಲಿ ಉತ್ತೀರ್ಣರಾಗಬೇಕು. ಈ ಪರೀಕ್ಷೆ ವರ್ಷದಲ್ಲಿ ಎರಡು ಬಾರಿ, ಜೂನ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ನಡೆಯುತ್ತಿದ್ದು, ಉತ್ತೀರ್ಣ ಹೊಂದಲು ಕನಿಷ್ಠ ಶೇ. 50 ಅಂಕವನ್ನು ಪ್ರತಿ ಪೇಪರ್​ನಲ್ಲಿಯೂ ಗಳಿಸಬೇಕಾಗುತ್ತದೆ. ಇಂಥ ಪರೀಕ್ಷೆಗಳಿಗೆ ಕೇವಲ ಮೂರು ಬಾರಿ ಯತ್ನಿಸಬಹುದು. ಅಕಸ್ಮಾತ್ ಮೂರುಬಾರಿಯೂ ವಿಫಲರಾದರೆ, ಭಾರತದಲ್ಲಿ ಮೆಡಿಕಲ್ ಪ್ರಾಕ್ಟೀಸ್ ಮಾಡುವ ಅವಕಾಶ ತಪ್ಪುವ ಸಂಭವ ಹೆಚ್ಚು. ವಿದೇಶಿ ವೈದ್ಯ ಪದವಿ ಪಡೆಯುವವರಲ್ಲಿ ಎಷ್ಟೋ ಜನರಿಗೆ ಈ ಅಡೆತಡೆಯ ಬಗೆಗೆ ಮಾಹಿತಿ ಇರುವುದಿಲ್ಲ. ಕೆಲವರು ಮಾಹಿತಿ ಇದ್ದರೂ, ‘ಆಮೇಲೆ ನೋಡೋಣ’ ಎನ್ನುವ ಮನೋಭಾವ ತೋರಿಸುತ್ತಾರೆ. ಕೆಲವರಂತೂ ನಾವೇನೂ ಸರ್ಕಾರಿ ಉದ್ಯೋಗ ಬೇಡುತ್ತೇವೆಯೇ ಎನ್ನುವ ಉಡಾಫೆ ತೋರಿಸುತ್ತಾರೆ. ಇದೇ ಕೊನೆಗೆ ಅವರನ್ನು ಸಂಕಷ್ಟಕ್ಕೆ ತಳ್ಳಬಹುದು. ಆದರೆ, ವಿಚಿತ್ರವೆಂದರೆ ಆಸ್ಟ್ರೇಲಿಯಾ, ಇಂಗ್ಲೆಂಡ್, ಅಮೆರಿಕ, ಕೆನಡಾ ಮತ್ತು ನ್ಯೂಜಿಲ್ಯಾಂಡ್​ಗಳಲ್ಲಿ ವೈದ್ಯ ಪದವಿ ಪಡೆದ ಭಾರತೀಯರಿಗೆ ಈ ಪರೀಕ್ಷೆ ಕಡ್ಡಾಯವಿಲ್ಲ ಮತ್ತು ನಿಬಂಧನೆಯೂ ಇರುವುದಿಲ್ಲ. ಈ ದೇಶಗಳ ಕಾಲೇಜುಗಳಲ್ಲಿನ ಶಿಕ್ಷಣ ಮಟ್ಟ ಇನ್ನಿತರ ದೇಶಗಳಿಗಿಂತ ಉನ್ನತ ದರ್ಜೆಯಲ್ಲಿದೆ ಎನ್ನುವ ಸಾಮಾನ್ಯ ತಿಳಿವಳಿಕೆ ಮೇಲೆ ಈ ವಿನಾಯಿತಿ ಇರಬಹುದು. ವಿದೇಶಗಳಿಂದ ವೈದ್ಯ ಪದವಿ ಪಡೆದು ಬಂದ ಇಂಥ ಸುಮಾರು ಒಂದು ಸಾವಿರ ವೈದ್ಯರು ಪ್ರತಿ ವರ್ಷ ಈ ಅರ್ಹತಾ ಪರೀಕ್ಷೆಗೆ ಹಾಜರಾಗುತ್ತಿದ್ದು, ತುಂಬಾ ಕಠಿಣ ಇರುವ ಈ ಪರೀಕ್ಷೆಯಲ್ಲಿ ತೇರ್ಗಡೆ ಪ್ರಮಾಣ ಎರಡಂಕಿ ತಲುಪುವುದಿಲ್ಲ ಎಂದು ಹೇಳಲಾಗುತ್ತದೆ. 2014 ರಲ್ಲಿ ಶೇ. 5ರಷ್ಟು ಉತ್ತೀರ್ಣ ಪ್ರಮಾಣವಿತ್ತು, 2016 ರಲ್ಲಿ ಅತಿ ಹೆಚ್ಚು ಎಂದರೆ ಶೇ. 26ರಷ್ಟು ಉತ್ತೀರ್ಣದ ಪ್ರಮಾಣ ಇತ್ತು. ಬಾಂಗ್ಲಾ ದೇಶದಲ್ಲಿ ವೈದ್ಯ ಪದವಿ ಪಡೆದು ಬಂದವರ ತೇರ್ಗಡೆ ಪ್ರಮಾಣ ಶೇ. 31ರಷ್ಟು ಮಾತ್ರ. ಈಗ , ಈ ಪರೀಕ್ಷೆ ಬರೆಯಲು, ಈ ವೈದ್ಯ ಪದವೀಧರರು ಕೋಚಿಂಗ್ ಸೆಂಟರ್ ಮೊರೆ ಹೋಗುತ್ತಿದ್ದಾರೆ.

ಎಂಸಿಐ ವಿರುದ್ಧ ಪ್ರತಿಭಟನೆ: ಭಾರತೀಯ ವೈದ್ಯಕೀಯ ಪರಿಷತ್ತು, ಈ ಪರೀಕ್ಷೆ ಮೂಲಕ ವಿದೇಶಿ ವೈದ್ಯ ಪದವಿ ಪಡೆದವರ ವಿರುದ್ಧ ತಾರತಮ್ಯ ಮಾಡುತ್ತಿ್ತೆ ಎಂದು, ಕೆಲ ವೈದ್ಯರ ಸಂಘ ಪ್ರತಿಭಟಿಸಿದವು. ಈ ಕಾರಣದಿಂದಾಗಿ ‘ನ್ಯಾಷನಲ್ ಬೋರ್ಡ್ ಫಾರ್ ಎಕ್ಸಾಮಿನೇಷನ್ ’ ಕೆಲವು ಸ್ಥಳೀಯ ವೈದ್ಯ ಕಾಲೇಜು ವಿದ್ಯಾರ್ಥಿಗಳಿಗೆ ಇದೇ ಪರೀಕ್ಷೆಯನ್ನು ನಡೆಸಿತು. ಆಗ ಶೇ. 80ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾದರು. ಆ ಪೈಕಿ ವಿದೇಶಿ ಪದವೀಧರರ ಸಂಖ್ಯೆ ಶೆ. 20ಕ್ಕಿಂತಲೂ ಕಮ್ಮಿ ಇತ್ತು. ಈ ವೈದ್ಯ ಪದವೀಧರರಿಗೆ ಕಡಿಮೆ ಸಂಬಳ ಸೌಲಭ್ಯ ನೀಡಲಾಗುತ್ತಿದೆ ಎಂಬ ಆಪಾದನೆ ಇರುವ ಕಾರಣ, ಈ ಗೊಂದಲವನ್ನು ನಿವಾರಿಸಲು ಸರ್ಕಾರವು ಈ ದೇಶದಲ್ಲಿ ಮತ್ತು ಹೊರ ದೇಶಗಳಲ್ಲಿ ವೈದ್ಯ ಪದವಿ ಪಡೆಯಲು ಬಯಸುವವರು ‘ನೀಟ್’ ಪರೀಕ್ಷೆ ಪಾಸಾಗಲೇಬೇಕು ಎನ್ನುವ ನಿಬಂಧನೆ ಹಾಕಿದೆ. (ಇತ್ತೀಚಿನ ಮಾಹಿತಿ ಪ್ರಕಾರ ಈ ನಿಬಂಧನೆಯನ್ನು ಒಂದು ವರ್ಷ ಅಮಾನತಿನಲ್ಲಿ ಇಡಲಾಗಿದೆಯಂತೆ). ಎಲ್ಲಾ ಕಾಲೇಜುಗಳನ್ನು ಒಂದೇ ತಕ್ಕಡಿಯಲ್ಲಿ ತೂಗಲು ಸಾಧ್ಯವಿಲ್ಲ. ನಮ್ಮ ದೇಶದ ಕಾಲೇಜುಗಳಿಗೆ ಇರುವ ಸಮಸ್ಯೆಗಳು ವಿದೇಶಗಳಲ್ಲೂ ಇರಬಹುದು. ಆಸಲಿ ಪದವಿಗಳ ಅಸ್ತಿತ್ವವನ್ನೇ ಪ್ರಶ್ನಿಸುವಷ್ಟು ನಕಲಿ ಹಾವಳಿ ಇರುವಾಗ ಇವುಗಳ ಸತ್ಯಾಸತ್ಯತೆ ತಿಳಿಯಲು ಅರ್ಹತಾ ಪರೀಕ್ಷೆ ಅವಶ್ಯಕ ಎನ್ನುವ ಮೆಡಿಕಲ್ ಕೌನ್ಸಿಲ್ ಅಫ್ ಇಂಡಿಯಾ ವಾದದಲ್ಲಿ ಅರ್ಥವಿದೆ. ವಿದೇಶಗಳಲ್ಲಿ ನಮ್ಮನ್ನು ಇಂಥ ಅರ್ಹತಾ ಅಗ್ನಿ ಪರೀಕ್ಷೆಗಳಿಗೆ ಮುಲಾಜಿಲ್ಲದೇ ಒಳಪಡಿಸುವಾಗ, ನಮ್ಮ ಅರ್ಹತೆಯನ್ನು ಮಗದೊಮ್ಮೆ ಪರೀಕ್ಷಿಸುವಾಗ, ನಾವು ಇಂಥ ಕ್ರಮಗಳನ್ನು ತೆಗೆದುಕೊಳ್ಳುವಾಗ ಅಕ್ಷೇಪಿಸುವುದು ನ್ಯಾಯವಲ್ಲ ಎನ್ನುವ ವಾದದಲ್ಲಿ ಹುರುಳಿದೆ.

ಆಳವಾಗಿ ಯೋಚಿಸಿ ಹೆಜ್ಜೆಯಿಡಿ

ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾವನ್ನು (ಎಂಸಿಐ) ಖಳನಾಯಕರನ್ನಾಗಿ ಬಿಂಬಿಸುವುದು ಸರಿಯಲ್ಲ. ಅಂತಾರಾಷ್ಟ್ರೀಯವಾಗಿ ಚಾಲ್ತಿಯಲ್ಲಿರುವ ವ್ಯವಸ್ಥೆಯನ್ನು ಇದು ಪಾಲಿಸುತ್ತಿದ್ದೆಯೇ ವಿನಾ ಹೊಸ ನಿಯಮಾವಳಿಗಳನ್ನು ಅಳವಡಿಸುತ್ತಿಲ್ಲ. ಅದಕ್ಕೂ ಒಂದು ಹೊಣೆಗಾರಿಕೆ ಇದೆ. ಅದರ ಆಧಾರದ ಮೇಲಷ್ಟೇ ನಿಯಮಾವಳಿಗಳನ್ನು ರೂಪಿಸುವ ಅವಶ್ಯಕತೆ ಎಂಸಿಐಗೆ ಇದೆ.

ಇಂದಿನ ವಿದ್ಯಾರ್ಥಿಗಳು ವಿದೇಶಿ ವೈದ್ಯ ಪದವಿಗೆ ದಾಖಲಿಸುವ ಮೊದಲು ಪೂರ್ವಪರಗಳನ್ನು ಆಳವಾಗಿ ಯೋಚಿಸಬೇಕು ಮತ್ತು ಸರಿಯಾದ ಮಾರ್ಗದರ್ಶನ ಪಡೆದುಕೊಳ್ಳಬೇಕು. ದುಡುಕಿನ ನಿರ್ಧಾರ ಅಮೂಲ್ಯ ಸಮಯವನ್ನು ಹಾಳುಮಾಡುವುದರೊಂದಿಗೆ, ಹಣವೂ ವ್ಯರ್ಥವಾಗುತ್ತದೆ. ವಿದ್ಯಾರ್ಥಿಗಳ ವಿದೇಶಿ ವೈದ್ಯ ಪದವಿ ಗೀಳೇನೋ ಸರಿ. ಆದರೆ, ಇದು ಅವರ ಭವಿಷ್ಯಕ್ಕೆ ಮಾರಕವಾಗದಂತೆ ಎಚ್ಚರಿಕೆ ವಹಿಸುವುದು ಕೂಡ ಅಗತ್ಯವಾಗಿದೆ.

ಅರ್ಹತಾ ಪರೀಕ್ಷೆ ಹೊಸತಲ್ಲ

ವೈದ್ಯಕೀಯ ಪದವೀಧರರಿಗೆ ಹೊರ ದೇಶಗಳಲ್ಲಿ ಪ್ರಾಕ್ಟೀಸ್ ಮಾಡಲು ಆ ದೇಶಗಳಲ್ಲಿ ನಡೆಸುವ ಅರ್ಹತಾ ಪರೀಕ್ಷಾ ಪದ್ಧತಿ ಹೊಸ ಬೆಳವಣಿಗೆಯಲ್ಲ. ಭಾರತೀಯ ವೈದ್ಯ ಪದವೀಧರರು ಹೊರದೇಶಕ್ಕೆ ಉದ್ಯೋಗ ಅರಸಿ ಹೋದಾಗ ಇಂಥ ಅರ್ಹತಾ ಪರೀಕ್ಷೆಯನ್ನು ಬರೆಯುವುದು ಲಾಗಾಯ್ತಿನಿಂದ ಇದೆ. ಭಾರತದಲ್ಲಿ ಒಂದು ಮೆಡಿಕಲ್ ಕಾಲೇಜು ಪ್ರತಿಷ್ಠಿತವಾಗಿರಬಹುದು, ಜನಪ್ರಿಯವಾಗಿರಬಹುದು. ಆದರೆ, ವಿದೇಶದಲ್ಲಿ ಅದು ನಗಣ್ಯ. ಅವರಿಗೆ ಅವರದೇ ಆದ ಮಾನದಂಡ ಇದೆ. ಅವರು ನಿಗದಿ ಪಡಿಸಿದ ಮಾನದಂಡವನ್ನು ಪಾಲಿಸಲೇಬೇಕು. ದೇಶಗಳ ಪಠ್ಯ ಕ್ರಮಗಳಲ್ಲಿನ ವ್ಯತ್ಯಾಸ ಇರಬಹುದು ಅಥವಾ ಕೆಲವು ದೇಶಗಳು ಇತರ ದೇಶಗಳ ಪದವಿ ತಮ್ಮ ದೇಶದ ಪದವಿಯ ಶೈಕ್ಷಣಿಕ ಮಟ್ಟಕ್ಕೆ ಇರದಿರಬಹುದು ಎನ್ನುವ ಚಿಂತೆಯಲ್ಲಿ ಇರಬಹುದು. ಒಂದು ದೇಶದವರು ಇನ್ನೊಂದು ದೇಶದ ವಿದ್ಯಾರ್ಥಿಗಳ ಮೆಡಿಕಲ್ ಪ್ರಾಕ್ಟೀಸ್ ಮಾಡುವ ಅರ್ಹತೆಯನ್ನು ಕಠಿಣ ಪರೀಕ್ಷೆಯ ಮೂಲಕ ಪರೀಕ್ಷಿಸಿಯೇ ಅನುಮತಿ ಕೊಡಬೇಕಾಗುತ್ತದೆ. ಅದೇ ರೀತಿ ನಕಲಿ ಪದವಿಗಳ ಹಾವಳಿಯೂ ಇದರ ಹಿಂದೆ ಇರಬಹುದು. ವೈದ್ಯ ಪದವಿ ಮನುಷ್ಯನ ಜೀವದೊಡನೆ ವ್ಯವಹರಿಸುವ ವೃತ್ತಿ ಆಗಿರುವುದರಿಂದ ಹೆಚ್ಚಿನ ಎಚ್ಚರಿಕೆ ಮತ್ತು ಕಾಳಜಿಯನ್ನು ಈ ನಿಟ್ಟಿನಲ್ಲಿ ವಹಿಸಬೇಕು.

(ಪ್ರತಿಕ್ರಿಯಿಸಿ : [email protected])

Stay connected

278,732FansLike
580FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...