ವ್ಯಾಯಾಮ ಶಾಲೆ, ಹೆಣ್ಣುಮಕ್ಕಳ ಶಾಲೆಗೆ ಓಬವ್ವ ಹೆಸರಿಡುವಂತೆ ಒತ್ತಾಯ

blank

ಬೆಂಗಳೂರು: ವಸತಿ ಶಾಲೆಗಳಿಗೆ ಕಿತ್ತೂರು ರಾಣಿ ಚೆನ್ನಮ್ಮ ಹೆಸರಿಟ್ಟಿರುವಂತೆ ವ್ಯಾಯಾಮ ಶಾಲೆಗಳು ಹಾಗೂ ಹೆಣ್ಣುಮಕ್ಕಳ ಶಾಲೆಗಳಿಗೆ ‘ಒನಕೆ ಓಬವ್ವ’ ಹೆಸರಿಡಬೇಕೆಂದು ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಕನ್ನಡ ಭವನದ ನಯನ ಸಭಾಂಗಣದಲ್ಲಿ ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ವೀರ ವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ. ಅಧಿಕೃತವಾಗಿ ಆದೇಶ ಹೊರಡಿಸಬೇಕೆಂದು ಪುನರುಚ್ಚಿಸಿದರು.

ಹೆಣ್ಣನ್ನು ನಿಕೃಷ್ಟವಾಗಿ ಕಾಣುತ್ತಿದ್ದ ಕಾಲದಲ್ಲಿಯೇ ದೇಶಕ್ಕಾಗಿ, ರಾಜ್ಯಕ್ಕಾಗಿ ಹೋರಾಟ ಮಾಡಿದ ಓಬವ್ವನ ಘನತೆ, ಶೌರ್ಯ ಮತ್ತು ಸಾಹಸ ಯಾರಿಗೂ ಕಡಿಮೆ ಇಲ್ಲ. ದೇಶವನ್ನು ಆಳುವ ಯಾವುದೇ ರಾಜನಿಗೆ ಓಬವ್ವ ಪ್ರೇರಣಾ ಶಕ್ತಿಯಾಗಿದ್ದಾರೆ ಎಂದು ಹೇಳಿದರು.

ಹೆಣ್ಣನ್ನು ಹೆರಿಗೆ ಕಾರ್ಖಾನೆ ಮಾಡಿಕೊಂಡಿದ್ದ ಕಾಲದಲ್ಲಿ ಹೆಣ್ಣನ್ನು ಎಸ್‌ಪಿ, ಡಿಸಿಯಾಗಬೇಕೆಂದು ಅಪೇಕ್ಷೆ ಪಟ್ಟವರು ಡಾ ಬಿ.ಆರ್. ಅಂಬೇಡ್ಕರ್. ದೇಶದಲ್ಲಿನ ಹೆಣ್ಣುಮಕ್ಕಳ ಅಭಿವೃದ್ಧಿಯ ಆಧಾರದ ಮೇಲೆ ದೇಶದ ಅಭಿವೃದ್ಧಿ ನಿರ್ಧಾರವಾಗಲಿದೆ ಎಂದು ಹೆಣ್ಣಿಗೆ ಕಾನೂನಾತ್ಮಕವಾಗಿ ಸಮಾನ ಹಕ್ಕು ನೀಡಿದವರು ಅಂಬೇಡ್ಕರ್. ಆದ್ದರಿಂದ ಸಂವಿಧಾನ ಮತ್ತು ಅಂಬೇಡ್ಕರ್ ಅವರನ್ನು ದೇಶದ ಪ್ರತಿ ಹೆಣ್ಣುಮಕ್ಕಳು ನೆನೆಯಲೇ ಬೇಕು ಎಂದು ತಿಳಿಸಿದರು.

ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಎಚ್.ಎಲ್. ಪುಷ್ಪಾ ಮಾತನಾಡಿ, ದೇಶಕ್ಕಾಗಿ ಹೋರಾಟ ಮಾಡುವವರಿಗೆ ಜಾತಿ, ಧರ್ಮ, ಮತ ಮತ್ತು ಹುದ್ದೆ ಮುಖ್ಯವಲ್ಲ ಎಂಬದಕ್ಕೆ ಓಬವ್ವ ಸಾಕ್ಷಿಯಾಗಿದ್ದಾರೆ. ಒಬ್ಬ ಕಾವಲುಗಾರನ ಹೆಂಡತಿಯಾಗಿದ್ದುಕೊಂಡು ಮಾಡಿದ ಕೆಲಸ ಮಾದರಿಯಾಯಿತು ಎಂದರು.

ಓಬವ್ವ ಸಾವಿನ ಕುತೂಹಲ:

ಸಿನಿಮಾಗಳಲ್ಲಿ ತೋರಿಸಿರುವಂತೆ ಹೈದರಾಲಿ ಸೈನ್ಯದ ವಿರುದ್ಧದ ಹೋರಾಟದಲ್ಲಿಯೇ ಓಬವ್ವ ವೀರಮರಣ ಹೊಂದಿದಳು ಎಂಬ ಮಾಹಿತಿ ಇದೆ. ಮತ್ತೆ ಕೆಲವು ಸಂಶೋಧನಾ ಕೃತಿಗಳಲ್ಲಿ ಹೋರಾಟದ 2 ವರ್ಷಗಳ ನಂತರ ಮರಣ ಹೊಂದಿದಳು ಎಂಬ ಮಾಹಿತಿ ಇದೆ. ಒಟ್ಟಾರೆ ಅವಳ ಮರಣಕ್ಕೆ ಸಂಬಂಧಿಸಿದ ಸ್ಪಷ್ಟತೆ ಇಲ್ಲ ಎಂದರು.

ಕಾರ್ಯಕ್ರಮದಲ್ಲಿ ಇಲಾಖೆ ನಿರ್ದೇಶಕಿ ಡಾ. ಧರಣೀದೇವಿ ಮಾಲಗತ್ತಿ ಹಾಗೂ ಬಂಜಾರ ಅಕಾಡೆಮಿ ಅಧ್ಯಕ್ಷ ಎ.ಆರ್. ಗೋವಿಂದಸ್ವಾಮಿ ಸೇರಿ ಹಲವರು ಉಪಸ್ಥಿತರಿದ್ದರು.

ಸಾಕಷ್ಟು ಸೌಲಭ್ಯಗಳು ಹಾಗೂ ಕಾನೂನು ಜಾರಿಯಾಗಿರುವ ಹೊರತಾಗಿಯೂ ಹೆಣ್ಣಿನ ಮೇಲೆ ಶೋಷಣೆ ನಡೆಯುತ್ತಿದೆ ಎಂದರೆ ನಮ್ಮ ಮನಸ್ಥಿತಿ ಎಂತಹದ್ದಿದೆ ಎಂದು ಅರಿಯಬೇಕಿದೆ. ಇಂತಹ ಶೋಷಣೆಗಳ ವಿರುದ್ಧ ಮಹಿಳೆಯರು ಹೋರಾಡಲು ಓಬವ್ವ ಪ್ರೇರಣೆಯಾಗಬೇಕು.
– ಎನ್. ಮಂಜುಳಾ, ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

Share This Article

ಉಡುಗೆಗೆ ಮ್ಯಾಚ್​ ಆಗುವ ಲಿಪ್​ಸ್ಟಿಕ್​​​ ಆಯ್ಕೆ ಮಾಡುವುದೇಗೆ?; ಇಲ್ಲಿದೆ ಸಿಂಪಲ್​ ಟಿಪ್ಸ್​​ | Beauty Tips

ನಾವು ಮದುವೆಗೆ ಚೆಂದದ ಬಟ್ಟೆಗಳನ್ನು ಆಯ್ಕೆ ಮಾಡುತ್ತೇವೆ. ಆದ್ದರಿಂದ ಯಾರೂ ನಮಗಿಂತ ಹೆಚ್ಚು ಸುಂದರವಾಗಿ ಕಾಣುವುದಿಲ್ಲ.…

ಚಳಿಗಾಲದಲ್ಲಿ ವಿಟಮಿನ್​​ ಡಿ ಕೊರತೆಯೇ?; ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಈ ಬದಲಾವಣೆ ಮಾಡಿ | Health Tips

ಚಳಿಗಾಲದಲ್ಲಿ ಸೂರ್ಯನ ಬೆಳಕಿನ ಕೊರತೆಯಿಂದ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ. ಆದರೆ ಈ ಪೋಷಕಾಂಶವು ಅನೇಕ…

Mushrooms for Cancer: ಅಣಬೆ ತಿಂದರೆ ಯಾವುದೇ ಕ್ಯಾನ್ಸರ್ ಇದ್ರು ಕಂಟ್ರೋಲ್…!

Mushrooms for Cancer : ಕ್ಯಾನ್ಸರ್ ರೋಗ ಅಪಾಯಕಾರಿ. ಕ್ಯಾನ್ಸರ್ ಚಿಕಿತ್ಸೆಯು ತುಂಬಾ ದುಬಾರಿಯಾಗಿದೆ. ಕ್ಯಾನ್ಸರ್​​ನಲ್ಲಿ…