ಬೆಂಗಳೂರು
ಮೊದಲ ಬಾರಿಗೆ ಬಿಎಸ್ಸಿ ನರ್ಸಿಂಗ್ ಕೋರ್ಸ್‌ಗಳಿಗೆ ಸರ್ಕಾರವೇ ಶುಲ್ಕ ನಿಗದಿ ಮಾಡಿದ್ದು, ಅಧಿಕ ಶುಲ್ಕ ವಸೂಲಿ ಮಾಡುವ ನರ್ಸಿಂಗ್ ಕಾಲೇಜುಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ.
ರಾಜ್ಯ ಸರ್ಕಾರವು 2024-25ರ ಶೈಕ್ಷಣಿಕ ವರ್ಷದಿಂದ ಖಾಸಗಿ ನರ್ಸಿಂಗ್ ಕಾಲೇಜುಗಳಲ್ಲಿ ಶೇ.20 ಬಿಎಸ್ಸಿ ನರ್ಸಿಂಗ್ ಸೀಟುಗಳನ್ನು ಮ್ಯಾನೇಜ್‌ಮೆಂಟ್ ಕೋಟಾ ಸೀಟುಗಳಾಗಿ ನಿಗದಿಪಡಿಸಿದೆ. ಶೇ.80 ಸೀಟುಗಳನ್ನು ಕೆಇಎ ಮೂಲಕ ಭರ್ತಿ ಮಾಡಲಿದೆ.
ಕರ್ನಾಟಕ ರಾಜ್ಯ ನರ್ಸಿಂಗ್ ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟ ಮತ್ತು ಅಲೈಡ್ ಹೆಲ್ತ್ ಸೈನ್ಸ್ ವಿದ್ಯಾಸಂಸ್ಥೆ, ನವ ಕಲ್ಯಾಣ ಕರ್ನಾಟಕ ನರ್ಸಿಂಗ್ ಇನ್ಸಿಟ್ಯೂಟ್ ಮ್ಯಾನೇಜ್‌ಮೆಂಟ್ ಆಸೋಸಿಯೇಷನ್ ಇವರೊಂದಿಗೆ ಮಾತುಕತೆ ನಡೆಸಿದ ವೈದ್ಯಕೀಯ ಶಿಕ್ಷಣ ಇಲಾಖೆ ಶುಲ್ಕ ನಿಗದಿ ಮಾಡಿದೆ.
ಶುಲ್ಕದ ವಿವಿವರ
ಕೋಟಾ ಸೀಟು ಹಂಚಿಕೆ ಶುಲ್ಕ
ಸರ್ಕಾರಿ ಶೇ.100 10,000 ರೂ.
ಖಾಸಗಿ ಕಾಲೇಜಿನಲ್ಲಿ ಸರ್ಕಾರಿ ಕೋಟಾ ಶೇ.20 10,000 ರೂ.
ಖಾಸಗಿ ಕಾಲೇಜಿನಲ್ಲಿ ಕೆಇಎ ಪಾಲು ಶೇ.60 1 ಲಕ್ಷ ರೂ.
ಮ್ಯಾನೇಜ್‌ಮೆಂಟ್ ಸೀಟು ಶೇ.20 1.40 ಲಕ್ಷ ರೂ.