ಬೋರಗಾಂವ: ನಿಪ್ಪಾಣಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ಸಮೀಪದ ಮಾಂಗೂರ ಗ್ರಾಮದಲ್ಲಿ ಈಚೆಗೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿ, ಗ್ರಾಮದ ಭೈರವನಾಥ ಮಂದಿರದ ಆವರಣದಲ್ಲಿ ನೆಲಹಾಸು ಕಾಮಗಾರಿಗೆ 5 ಲಕ್ಷ ರೂ., 1008 ಆದಿನಾಥ ಭಗವಾನ ಜೈನ ಮಂದಿರದ ನೆಲಹಾಸು ಕಾಮಗಾರಿಗೆ 4 ಲಕ್ಷ ರೂ., ಸಿದ್ಧಿವಿನಾಯಕ ಮಂದಿರ ನಿರ್ಮಾಣಕ್ಕೆ 3.5 ಲಕ್ಷ ರೂ., ನೆರ್ಲೇ ತೋಟದ ರಸ್ತೆ ನಿರ್ಮಾಣಕ್ಕೆ 2.5 ಲಕ್ಷ ರೂ. ಸೇರಿ ವಿವಿಧ ಕಾಮಗಾರಿಗಳಿಗೆ ಒಟ್ಟು 20 ಲಕ್ಷ ರೂ. ಅನುದಾನ ಮಂಜೂರಾಗಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಒತ್ತು ನೀಡಬೇಕು ಎಂದು ಸೂಚಿಸಿದರು.
ತಾಪಂ ಸದಸ್ಯ ವೀರೇಂದ್ರ ಮಾನೆ, ಬಿಜೆಪಿ ಗ್ರಾಮೀಣ ಅಧ್ಯಕ್ಷ ಪವನ ಪಾಟೀಲ, ಸ್ವಪ್ನಿಲ್ ಮಾನೆ, ವೀರೇಂದ್ರ ಮಾನೆ, ವಿನಯ ಭೋದಲೆ, ಆನಂದ ಐನಾಪುರೆ, ಸಂಗೀತಾ ಸಂಗವಾಡೆ, ಸಂದೀಪ ಪಾಟೀಲ, ರಾಕೇಶ ಪಾಟೀಲ, ಪ್ರದೀಪ ಚೌಗುಲೆ, ಜಿಪಂ ಅಭಿಯಂತ ಎಸ್.ಟಿ.ಕಳಸಪ್ಪಗೋಳ, ವಿಜಯ ಮೋಗಲೆ, ರಾಕೇಶ ಪಾಟೀಲ, ಆನಂದ ಆವಟೆ, ಅಣ್ಣಾಸೋ ಕೋಗನೊಳೆ, ಭರತ ಪಾಟೀಲ ಇದ್ದರು.
ಆಡಿ ಗ್ರಾಮದಲ್ಲಿ: ಆಡಿ ಗ್ರಾಮದ ಮಹಾಲಕ್ಷ್ಮಿ ಮಂದಿರ ನಿರ್ಮಾಣ, ಮರಗುಬಾಯಿ ಮಂದಿರ ನಿರ್ಮಾಣ ಸೇರಿ ತೋಟದ ರಸ್ತೆಗಳ ನಿರ್ಮಾಣ, ನೆಲಹಾಸು ಕಾಮಗಾರಿಗಳಿಗೆ ಸ್ಥಳೀಯ ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಡಿ 19 ಲಕ್ಷ ರೂ. ಮಂಜೂರಾಗಿದೆ ಎಂದು ಮಾಹಿತಿ ನೀಡಿದರು.
ಆಡಿ ಗ್ರಾಮದಲ್ಲಿ ಈಚೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಲಾಕ್‌ಡೌನ್ ಅವಧಿಯಲ್ಲಿ ನಿಪ್ಪಾಣಿ ತಾಲೂಕು ಆಡಳಿತ ಜನರ ಸುರಕ್ಷತೆಗೆ ಕಾಳಜಿ ವಹಿಸಿದ್ದರಿಂದ ಗ್ರಾಮೀಣ ಭಾಗದಲ್ಲಿ ಯಾವುದೇ ಆತಂಕವಿಲ್ಲ. ಸಾರ್ವಜನಿಕರು ಕೂಡ ತಾಲೂಕು ಆಡಳಿತಕ್ಕೆ ಸಹಕರಿಸಿದ್ದರಿಂದ ಕರೊನಾ ನಿಯಂತ್ರಿಸಲು ಸಾಧ್ಯವಾಗಿದೆ ಎಂದರು. ಆಡಿ ಗ್ರಾಮಕ್ಕೆ ಮೂಲ ಸೌಕರ್ಯ ಪೂರೈಸಲು ಪ್ರಯತ್ನಿಸಲಾಗುತ್ತಿದ್ದು. ಮಂದಿರ ನಿರ್ಮಾಣದ ಬಹುದಿನದ ಬೇಡಿಕೆ ಈಗ ಈಡೇರಿದೆ. ಗ್ರಾಮದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ತಾಲೂಕು ಪಂಚಾಯಿತಿ ಸದಸ್ಯೆ ಸಂಗೀತಾ ಪಾಟೀಲ, ಮಲಗೌಡ ಪಾಟೀಲ, ರೇಖಾ ಪಾಟೀಲ, ಬಾಳಾಸಾಬ ಪಾಟೀಲ, ಎನ್.ಕೆ. ವರಾಳೆ, ಸಿದ್ಧೇಶ್ವರ ಪಾಟೀಲ, ಸುಖದೇವ ಕುಂಬಾರ, ಅಪ್ಪಾಸಾಬ ಯೇಡುರೆ, ಪ್ರಕಾಶ ಪಾಟೀಲ, ಸಂಜಯ ಗುರವ, ಜಿ.ಪಂ. ಅಭಿಯಂತ ಎಸ.ಟಿ. ಕಳಸಪ್ಪಗೋಳ, ವಿಜಯ ಮೋಗಲೆ, ವಿಶ್ವನಾಥ ಪಾಟೀಲ ಇದ್ದರು.