blank

ಬಣ್ಣದಾಟಕ್ಕೆ ಕುಂದಾನಗರಿ ಸಜ್ಜು!

blank

ಎಂ.ಎಸ್​.ಹಿರೇಮಠ ಬೆಳಗಾವಿ
ಒಂದೆಡೆ ನೆತ್ತಿ ಸುಡುವ ಬಿಸಿಲು, ಇನ್ನೊಂದೆಡೆ ವಿದ್ಯಾರ್ಥಿಗಳಿಗೆ ಪರೀೆ ಕಾವು. ಈ ಮಧ್ಯೆ ಹೋಳಿ ಹಬ್ಬಕ್ಕೆ ಕುಂದಾನಗರಿ ಸಜ್ಜುಗೊಂಡಿದ್ದು, ಬಣ್ಣದೋಕುಳಿಯಲ್ಲಿ ಮಿಂದೇಳಲು ಯುವಪಡೆ ಕಾತರರಾಗಿದ್ದಾರೆ.

ನಗರದಲ್ಲಿ ಹೋಳಿ ಹಬ್ಬವು ವಿಶಿಷ್ಠವಾಗಿದ್ದು, ಭೌಗೋಳಿಕ ವ್ಯತ್ಯಾಸದಿಂದಾಗಿ ಹೋಳಿಯ ಮಾರನೆದಿನ ನಗರದಲ್ಲಿ ಹಬ್ಬದಾಚರಣೆ ಮಾಡಿದರೆ ಶಹಾಪುರ, ವಡಗಾಂವ, ಅನಗೋಳ ಹಾಗೂ ಪ್ರದೇಶಗಳಲ್ಲಿ ಐದನೇ ದಿನ ರಂಗಪಂಚಮಿಯಂದು ಬಣ್ಣದಾಟ ಆಡುವುದು ಸಂಪ್ರದಾಯವಾಗಿದೆ.

ಹೋಳಿ ಹಬ್ಬದ ಅಂಗವಾಗಿ ನಗರದ ವ್ಯಾಕ್ಸಿನ್​ ಡಿಪೋ, ರಾಜಹಂಸಗಡ ಸೇರಿ ವಿವಿಧೆಡೆ ವರ್ಣರಂಜಿತ ಬಣ್ಣ ಸಿಂಪಡಿಸುವ ಸ್ಪಿಂಕ್ಲರ್​ ನಿರ್ಮಿಸಲಾಗಿದ್ದು, ಸ್ನೇಹಿತರೊಡನೆ ಸಂಗೀತಕ್ಕೆ ಹೆಜ್ಜೆ ಹಾಕುವ ಮೂಲಕ ಹಬ್ಬದ ಸಂಭ್ರಮವನ್ನು ಇಮ್ಮುಡಿಗೊಳಿಸಲು ಬರದ ಸಿದ್ಧತೆ ನಡಿದಿದೆ.

ಕಳೆಗಟ್ಟಿದ ವ್ಯಾಪಾರ: ನಗರದ ಗಣಪತಿ ಗಲ್ಲಿ, ರವಿವಾರ ಪೇಟೆ, ಖಡೇ ಬಜಾರ್​ ಸೇರಿ ವಿವಿಧ ಮಾರುಕಟ್ಟೆ ಅಂಗಡಿಗಳಲ್ಲಿ ಯುದ್ಧ ವಿಮಾನ, ರಾಕೆಟ್​, ತಲವಾರ್​, ಡ್ರ್ಯಾಗನ್​, ಪಿಸ್ತೂಲ್​ ಸೇರಿ ತರೇಹವಾರಿ ಬಣ್ಣದ ಪಿಚಕಾರಿಗಳು, ಮಕ್ಕಳು ಮತ್ತು ಯುವಕರು ಬಳಸುವ ವೈವಿಧ್ಯಮಯ ಮುಖವಾಡಗಳು ಲಗ್ಗೆ ಇಟ್ಟಿವೆ. ಪಾಲಕರು ಮಕ್ಕಳನ್ನು ಮಾರುಕಟ್ಟೆಗೆ ಕರೆದುಕೊಂಡು ಬಂದು ಅವರ ಇಷ್ಟದ ಬಣ್ಣ, ಮುಖವಾಡ ಹಾಗೂ ಪಿಚಕಾರಿಗಳ ಖರೀದಿಯಲ್ಲಿ ತೊಡಗಿದ್ದ ದೃಶ್ಯಗಳು ಎಲ್ಲೆಡೆ ಕಂಡು ಬಂದವು.

ಹಲಗೆ ಖರೀದಿಗೆ ಮುಗಿಬಿದ್ದ ಯುವಕರು: ಮೊದಲೆಲ್ಲ ಚರ್ಮದ ಹಲಗೆಗಳು ಬಳಕೆಯಲ್ಲಿದ್ದವು. ಆದರೆ, ಆಧುನಿಕತೆ ಸ್ಪರ್ಶ ಹೋಳಿ ಹುಣ್ಣಿಮೆಯನ್ನೂ ಬಿಟ್ಟಿಲ್ಲ. ಅನಾದಿ ಕಾಲದ ಚರ್ಮದ ಹಲಗೆಗಳ ಬಳಕೆ ಕಣ್ಮರೆಯಾಗಿ ೆಬರ್​ ಹಲಗೆಗಳು ಲಗ್ಗೆ ಇಟ್ಟಿವೆ. ೈಬರ್​ ಹಲಗೆ ನಾದಕ್ಕೆ ಮಾರು ಹೋಗಿ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರೂ 150 ರಿಂದ 1,500 ರೂ. ವರೆಗೆ ಲಭ್ಯವಿರುವ ೈಬರ್​ ಹಲಗೆಗಳ ಖರೀದಿಗೆ ಮುಗಿಬಿದ್ದಿದ್ದಾರೆ.

ಶಾಪ ವಿಮೋಚನೆಗೆ ಉರುಳುಸೇವೆ: ಬೆಳಗಾವಿಯ ಪಾಂಗುಳ ಗಲ್ಲಿಯ ಅಶ್ವತ್ಥಾಮ ಮಂದಿರದ ಆವರಣ ಹೋಳಿ ಹುಣ್ಣಿಮೆಯಂದು ವಿಶಿಷ್ಟ ಆಚರಣೆಗೆ ಸಾಯಾಗುತ್ತದೆ. ಇಲ್ಲಿ ಹಬ್ಬದಂದು ಉರುಳುಸೇವೆ ಮಾಡಿದರೆ ಶಾಪದಿಂದ ಮುಕ್ತರಾಗುತ್ತೇವೆ ಎಂಬುದು ಭಕ್ತರ ನಂಬಿಕೆಯಾಗಿದೆ. ಹೀಗಾಗಿ, ಬೆಳಗ್ಗೆಯಿಂದ ಬಣ್ಣವಾಡುವ ಜನರು ಮಧ್ಯಾಹ್ನ ಜೈನ ಮಂದಿರದಿಂದ ಅಶ್ವತ್ಥಾಮ ಮಂದಿರವರೆಗೆ ಉರುಳು ಸೇವೆ ಮಾಡಿ ಭಕ್ತಿಸೇವೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ. ಐತಿಹಾಸಿಕ ಈ ಪರಂಪರೆ ಮುಂದುವರಿದುಕೊಂಡು ಬಂದಿದೆ.

ಬಣ್ಣದಾಟದ ಅಂಗವಾಗಿ ನಗರದಾದ್ಯಂತ ಪೊಲೀಸ್​ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ನಗರ ಪೊಲೀಸ್​ ಆಯುಕ್ತಾಲಯದ ವ್ಯಾಪ್ತಿಯ ಎಲ್ಲ ಪೊಲೀಸ್​ ಅಧಿಕಾರಿ, ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. 7 ಕೆಎಸ್​ಆರ್​ಪಿ ತುಕಡಿ, 250 ಗೃಹರಕ ದಳದ ಸಿಬ್ಬಂದಿ ನಿಯೋಜಿಸಲಾಗಿದೆ. ಶಾಂತಿ ಸಭೆ ಮಾಡಿ ಯಾವುದೇ ಅಹಿತಕರ ನಡೆಯದಂತೆ ಸಹಕರಿಸಲು ಮುಖಂಡರು ಮತ್ತು ಜನರಲ್ಲಿ ಕೋರಿದ್ದೇವೆ. ನಗರದ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಪ್ರತಿ ಚಟುವಟಿಕೆ ಮೇಲೂ ನಿಗಾ ಇರಿಸಿದ್ದೇವೆ.
> ಇಡಾ ಮಾರ್ಟಿನ್​ ಮಾರ್ಬನ್ಯಾಂಗ್​ ಬೆಳಗಾವಿ ಪೊಲೀಸ್​ ಆಯುಕ್ತ

ಪ್ರತಿ ವರ್ಷ ನಗರದಲ್ಲಿ ಅದ್ದೂರಿಯಾಗಿ ಹೋಳಿ ಹಬ್ಬ ಆಚರಿಸಲಾಗುತ್ತದೆ. ಹೀಗಾಗಿ, ತರೇಹವಾರಿ ಪಿಚಕಾರಿ ಸೇರಿ ವೈವಿಧ್ಯಮಯ ಬಣ್ಣ ಮಾರಾಟ ಮಾಡಲಾಗುತ್ತಿದೆ. ಜನರು ಉತ್ಸಾಹದಿಂದ ಖರೀದಿಸುತ್ತಿದ್ದು, ವ್ಯಾಪಾರ ಉತ್ತಮವಾಗಿದೆ.
> ಸುನೀಲ ಮತ್ಕೆಕರ್​, ಬಣ್ಣದ ವ್ಯಾಪಾರಿ

 

Share This Article

ಬಸ್ಸು ಅಥವಾ ಕಾರಿನಲ್ಲಿ ಪ್ರಯಾಣಿಸುವಾಗ ವಾಂತಿ ಬರೊದೇಕೆ ಗೊತ್ತೆ!; ತಡೆಗಟ್ಟೊದೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ | Vomit

Vomit : ಕೆಲವರಿಗೆ ಬಸ್​ ಮತ್ತು ಕಾರಿನಲ್ಲಿ ಪ್ರಯಾಣ ಮಾಬೇಕಾದರೆ ಸಲ್ಪ ದೂರು ಪ್ರಯಾಣಿಸಿದ ಬಳಿಕ…

ನಕಲಿ vs ಅಸಲಿ ಕಲ್ಲಂಗಡಿ ಹಣ್ಣು: ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…

ಬೇಸಿಗೆಯಲ್ಲಿ ಬಿರುಕು ಬಿಟ್ಟ ಪಾದಗಳು ಸುಂದರವಾಗಲು ಇಲ್ಲಿದೆ ಅಲ್ಟಿಮೇಟ್ ಟಿಪ್ಸ್! cracked heels

cracked heels: ಬೇಸಿಗೆಯಲ್ಲಿ ಪಾದಗಳಲ್ಲಿ ಬಿರುಕುಗಳು ಸಾಮಾನ್ಯ ಸಮಸ್ಯೆಯಾಗುತ್ತವೆ. ಸರಿಯಾದ ಆರೈಕೆಯ ಕೊರತೆಯು ಒಣ ಚರ್ಮ…