ರಾಣೆಬೆನ್ನೂರ: 2024&-25ನೇ ಸಾಲಿನ ಹಾಸ್ಟೆಲ್ ಪ್ರವೇಶ ಆಯ್ಕೆ ಪಟ್ಟಿ ಬಿಡುಗಡೆ ವಿಳಂಬ ನೀತಿ ಖಂಡಿಸಿ ಹಾಗೂ ಕೂಡಲೇ ಆಯ್ಕೆ ಪಟ್ಟಿ ಬಿಡುಗಡೆಗಾಗಿ ಆಗ್ರಹಿಸಿ ಭಾರತ ವಿದ್ಯಾಥಿರ್ ಫೆಡರೇಷನ್ (ಎಸ್ಎಫ್ಐ) ತಾಲೂಕು ಸಮಿತಿ ನೇತೃತ್ವದಲ್ಲಿ ವಿದ್ಯಾಥಿರ್ಗಳು ನಗರದ ಬಿಸಿಎಂ ಕಾರ್ಯಾಲಯದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಸಂಟನೆಯ ಜಿಲ್ಲಾ ಸಹ ಕಾರ್ಯದಶಿರ್ ಬಸವರಾಜ ಎಸ್. ಮಾತನಾಡಿ, ಶಾಲಾ&ಕಾಲೇಜ್ ಆರಂಭವಾಗಿ ಎರಡ್ಮೂರು ತಿಂಗಳು ಕಳೆದರೂ ಹಾಸ್ಟೆಲ್ಗಳು ಆರಂಭಗೊಂಡಿಲ್ಲ. ಇದರಿಂದ ಗ್ರಾಮೀಣ ಭಾಗದಿಂದ ಬರುವ ವಿದ್ಯಾಥಿರ್ಗಳಿಗೆ ತೀವ್ರ ತೊಂದರೆ ಉಂಟಾಗಿದೆ.
ವಿದ್ಯಾಥಿರ್ಗಳು ನಿತ್ಯವೂ ಬಸ್ಗೆ ಬಂದು ಹೋಗಲು ಆಥಿರ್ಕ ಸಂಕಷ್ಟ ಎದುರಿಸುವಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳಿಯ ಶಾಸಕರು ಕೂಡಲೇ ವಿದ್ಯಾಥಿರ್ಗಳ ಅನುಕೂಲಕ್ಕಾಗಿ ಹಾಸ್ಟೆಲ್ಗಳಲ್ಲಿ ವಿದ್ಯಾಥಿರ್ಗಳ ಆಯ್ಕೆಪಟ್ಟಿ ಬಿಡುಗಡೆ ಮಾಡಬೇಕು. ಅಜಿರ್ ಹಾಕಿದ ಎಲ್ಲ ವಿದ್ಯಾಥಿರ್ಗಳಿಗೂ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು. ಬಿಸಿಎಂ ತಾಲೂಕು ಅಧಿಕಾರಿ ವಿ.ಎಸ್. ಹಿರೇಮಠ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರಮುಖರಾದ ಶೃತಿ ಆರ್.ಎಂ., ಬಸವರಾಜ ಕೊಣಸಾಲಿ, ಕರಬಸಪ್ಪ ತೋಟಗೇರ, ಖಲಂದರ ಬಿ.ಎಂ., ಜೀವನಕುಮಾರ ನಾಯಕ, ಸಂಜೀವ ಮತ್ತೂರ, ಸಚಿನ ಹರಿಜನ, ಪವನ ಕುಮಾರ ಸೇರಿ ನೂರಾರು ವಿದ್ಯಾಥಿರ್ಗಳು ಪಾಲ್ಗೊಂಡಿದ್ದರು.
ವಸತಿ ನಿಲಯಗಳ ವಿದ್ಯಾಥಿರ್ ಆಯ್ಕೆ ಪಟ್ಟಿ ಬಿಡುಗಡೆಗೊಳಿಸಿ
You Might Also Like
ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….
ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…
ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್!
ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…
ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ
ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು…