ಮುಗಿಯುತ್ತಾ ಬಂತು ಪೃಥ್ವಿ, ಮಿಲನಾ ಅಭಿನಯದ ‘ಫಾರ್​ ರಿಜಿಸ್ಟ್ರೇಶನ್​’

1 Min Read

ಬೆಂಗಳೂರು: ಕಳೆದ ವರ್ಷವೇ ಪ್ರಾರಂಭವಾಗಿತ್ತು ‘ಫಾರ್​ ರಿಜಿಸ್ಟ್ರೇಶನ್​’ ಎಂಬ ಚಿತ್ರ. ‘ದಿಯಾ’ ಚಿತ್ರದ ನಾಯಕ ಪೃಥ್ವಿ ಅಂಬರ್​ ಹಾಗೂ ‘ಲವ್ ಮಾಕ್ಟೇಲ್’ ನಾಯಕಿ ಮಿಲನಾ ನಾಗರಾಜ್​ ಮೊದಲ ಬಾರಿಗೆ ಒಟ್ಟಾಗಿ ನಟಿಸಿದ ಈ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಇನ್ನು ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಆ ಹಾಡುಗಳ ಚಿತ್ರೀಕರಣ ಮುಗಿದರೆ ಚಿತ್ರ ಸಂಪೂರ್ಣವಾಗಲಿದೆ.

ಇದನ್ನೂ ಓದಿ: ರಾಗಿಣಿ 2.0!; ಜನ್ಮದಿನದ ಸಂಭ್ರಮ

ಈ ಮಧ್ಯೆ, ಚಿತ್ರದ ನಿರ್ದೇಶಕ ನವೀನ್​ ದ್ವಾರಕಾನಾಥ್​ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಚಿತ್ರತಂಡವು ಮೇಕಿಂಗ್ ವಿಡಿಯೋ ಬಿಡುಗಡೆ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ.

ನಿಶ್ಚಲ್ ಫಿಲಂಸ್ ಮೂಲಕ ಎನ್ .ನವೀನ್ ರಾವ್ ನಿರ್ಮಿಸುತ್ತಿರುವ ಈ ಚಿತ್ರವನ್ನು ನವೀನ್ ದ್ವಾರಕನಾಥ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಆರ್.ಕೆ.ಹರೀಶ್ ಸಂಗೀತ, ಅಭಿಷೇಕ್ ಕಲ್ಲತ್ತಿ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಇದನ್ನೂ ಓದಿ: PHOTOS| ಬಿಕಿನಿ ಫೋಟೋಗಳನ್ನು ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆ ಕದ್ದ ಸಂಯುಕ್ತಾ ಹೊರನಾಡು!

‘ಫಾರ್​ ರಿಜಿಸ್ಟ್ರೇಶನ್​’ ಚಿತ್ರವು ಒಂದು ರೊಮ್ಯಾಂಟಿಕ್​ ಕಾಮಿಡಿಯಾಗಿದ್ದು, ಪೃಥ್ವಿ ಮತ್ತು ಮಿಲನಾ ಪ್ರೇಮಿಗಳಾಗಿ ನಟಿಸುತ್ತಿದ್ದಾರೆ. ಮಿಕ್ಕಂತೆ ಈ ಚಿತ್ರದಲ್ಲಿ ರಘು ರಾಮಪ್ಪ, ಸುಧಾ ಬೆಳವಾಡಿ, ಸುಧಾರಾಣಿ, ಅರವಿಂದ್​ ಬೋಳಾರ್​, ತಬಲಾ ನಾಣಿ ಮುಂತಾದವರು ನಟಿಸಿದ್ದಾರೆ. ಬೆಂಗಳೂರು, ಉಡುಪಿ, ಕಾರವಾರ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ.

ಲವ್ ಬರ್ಡ್ಸ್​ಗೆ ಮಿಲನಾ; ಮದುವೆ ಆದ ಮೇಲಿನ ಪ್ರೀತಿಯ ಕಥೆ..

Share This Article