ನವದೆಹಲಿ: ಭಾರತದ ನವೀಕರಿಸಬಹುದಾದ ಇಂಧನ (ಆರ್ಇ) ವಲಯ 2030ರ ವೇಳೆಗೆ 32.45 ಲಕ್ಷ ಕೋಟಿ ರೂ. ಹೂಡಿಕೆಗೆ ತೆರೆದುಕೊಳ್ಳಲಿದೆ ಎಂದು ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ನವೀಕರಿಸಬಹುದಾದ ಇಂಧನ ಯೋಜನೆಯ ಡೆವಲಪರ್ಗಳು ಮತ್ತು ಉಪಕರಣ ತಯಾರಕರು ಮಹತ್ವಾಕಾಂಕ್ಷೆಯ ವಿಸ್ತರಣಾ ಯೋಜನೆಗಳನ್ನು ಹೊಂದುವ ಕೇಂದ್ರ ಸರ್ಕಾರದ ಗುರಿಗೆ ನೆರವಾಗಲಿದ್ದಾರೆ. ಹಸಿರು ಇಂಧನ ಕಂಪನಿಗಳು 570 ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದನೆ, 338 ಗಿ.ವ್ಯಾ. ಸೌರ ಘಟಕ ಉತ್ಪಾದನಾ ಸಾಮರ್ಥ್ಯ, 239 ಗಿ.ವ್ಯಾ. ಸೌರಕೋಶ ಉತ್ಪಾದನಾ ಸಾಮರ್ಥ್ಯ, 22 ಗಿ.ವ್ಯಾ. ಪವನಶಕ್ತಿ ಉತ್ಪಾದನಾ ಸಾಮರ್ಥ್ಯ ಮತ್ತು 10 ಮೆ.ವ್ಯಾ. ಎಲೆಕ್ಟ್ರೋ ಟರ್ಬೆನ್ ಉತ್ಪಾದನಾ ಸಾಮರ್ಥ್ಯದ ಮೂಲಕ ನಮ್ಮ ಚಿಂತನೆಗಳನ್ನು 2030ರ ಒಳಗಾಗಿ ಜಾರಿಗೆ ತರಲು ಭರವಸೆ ನೀಡಿವೆ ಎಂದು ಸಚಿವರು ಹೇಳಿದ್ದಾರೆ.
2030ರ ವೇಳೆಗೆ 500 ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನ ಹೊಂದುವ ಭಾರತದ ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಪೂರಕವಾಗಿ 24.8 ಲಕ್ಷ ಕೋಟಿ ರೂ. ಮೌಲ್ಯದ ಸಾಲಗಳನ್ನು ನೀಡಲು ಬ್ಯಾಂಕ್ಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳು ತಮ್ಮ ಬದ್ಧತೆ ನೀಡಿವೆ ಎಂದು ಸಚಿವರು ತಿಳಿಸಿದ್ದಾರೆ.
ಗುಜರಾತ್ನ ಗಾಂಧಿ ನಗರದಲ್ಲಿ ನಡೆಯುತ್ತಿರುವ ರಿ-ಇನ್ವೆಸ್ಟ್ 2024 ಹೂಡಿಕೆ ಸಮಾವೇಶದ ವೇಳೆ ಸರ್ಕಾರಿ ಸ್ವಾಮ್ಯದ ಆರ್.ಇ.ಸಿ. ಲಿಮಿಟೆಡ್ ಕಂಪನಿ ರೂ. 6 ಟ್ರಿಲಿಯನ್ ಮೌಲ್ಯದ ಸಾಲ ನೀಡಲು ಮುಂದೆ ಬಂದಿದೆ. ಇಂಡಿಯನ್ ರಿನ್ಯೂವೇಬಲ್ ಎನರ್ಜಿ ಡೆವಲಪ್ವೆುಂಟ್ ಏಜೆನ್ಸಿ ಲಿಮಿಟೆಡ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ತಲಾ 5 ಲಕ್ಷ ಕೋಟಿ ರೂ. ಸಾಲದ ವಾಗ್ದಾನ ಮಾಡಿವೆ.
2030ರ ವೇಳೆಗೆ ರಿಲಯನ್ಸ್ ಇಂಡಸ್ಟ್ರೀಸ್ 100 ಗಿ.ವ್ಯಾ. ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಮತ್ತು ಸರ್ಕಾರಿ ಸ್ವಾಮ್ಯದ ಎನ್ಟಿಪಿಸಿ ಸಂಸ್ಥೆ 41.3 ಗಿ.ವ್ಯಾ. ಇಂಧನ ಹೊಂದುವ ಭರವಸೆ ನೀಡಿದೆ ಎಂದು ಸಚಿವಾಲಯ ಮಾಹಿತಿ ಹಂಚಿಕೊಂಡಿದೆ.
ಗುಜರಾತ್ ಮೂಲದ ಟೊರೆಂಟ್ ಪವರ್ ಲಿ. 57 ಸಾವಿರ ಕೋಟಿ ರೂ. ಹೂಡಿಕೆಯೊಂದಿಗೆ 2030ರ ವೇಳೆಗೆ 10 ಗಿ.ವ್ಯಾ. ಸ್ಥಾಪಿತ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೊಂದುವುದಕ್ಕೆ ಬದ್ಧ ಎಂದು ತಿಳಿಸಿದೆ. ಅದರ ಭಾಗವಾಗಿ, ಟೊರೆಂಟ್ ಪವರ್ ಗುಜರಾತ್ನ ದ್ವಾರಕಾ ಜಿಲ್ಲೆಯಲ್ಲಿ 5 ಗಿ.ವ್ಯಾ. ಸೌರ, ಪವನ ಅಥವಾ ಸೌರ-ಮಾರುತ ಹೈಬ್ರಿಡ್ ಯೋಜನೆಗಾಗಿ ಗುಜರಾತ್ ಸರ್ಕಾರದ ಜತೆ ತಿಳುವಳಿಕೆ ಪತ್ರಕ್ಕೆ ಕೂಡ ಸಹಿ ಹಾಕಿದೆ.
ಸಚಿವಾಲಯದ 100 ದಿನದ ಸಾಧನೆ
* 4.5 ಗಿ.ವ್ಯಾ. ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೊಂದಬೇಕೆಂಬ ಜೂನ್, ಜುಲೈ ತಿಂಗಳ ಗುರಿಗೆ ಪೂರಕವಾಗಿ 6 ಗಿ.ವ್ಯಾ. ಸ್ಥಾಪಿತ ಇಂಧನ ಸಾಮರ್ಥ್ಯ ಹೊಂದಲಾಗಿದೆ.
* ಕಚ್ಚಾ ಅಲ್ಲದ ಇಂಧನಗಳ ಸ್ಥಾಪಿತ ಸಾಮರ್ಥ್ಯ 207.76 ಗಿ.ವ್ಯಾ.ಗೆ ತಲುಪಿದೆ
* ಎರಡು ಸೋಲಾರ್ ಪಾರ್ಕ್ಗಳು ಪೂರ್ಣ ್ಝ ಪಿಎಂ ಕುಸುಮ್ ಯೋಜನೆ ಅಡಿ1 ಲಕ್ಷ ಸೌರ ಪಂಪ್ಗಳ ಸ್ಥಾಪನೆ
* ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿ 3.56 ಲಕ್ಷ ರೂಫ್ಟಾಪ್ ಸೋಲಾರ್ ವ್ಯವಸ್ಥೆಗಳ ಸ್ಥಾಪನೆ
* ಸಂಚಿತ 13.8 ಗಿ.ವ್ಯಾ. ಸೋಲಾರ್ ಮಾಡ್ಯೂಲ್ ಉತ್ಪಾದನೆ ಪ್ರಾರಂಭ
* ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅಡಿ 2ನೇ ಹಂತದ ಎಲೆಕ್ಟ್ರೋಲೈಸರ್ ತಯಾರಿಕೆಗೆ 11 ಕಂಪನಿಗಳ ಆಯ್ಕೆ
* ಕಡಲಾಚೆಯ ಪವನಶಕ್ತಿ ಯೋಜನೆಗೆ ಜೂನ್ 19ರಂದು ಕೇಂದ್ರ ಕ್ಯಾಬಿನೆಟ್ ಅನುಮೋದನೆ
* ಇಂಡಿಯನ್ ರಿನಿವೇಬಲ್ ಎನರ್ಜಿ ಡೆವಲಪ್ವೆುಂಟ್ ಏಜೆನ್ಸಿಯಿಂದ ಐಆರ್ಇಡಿಎ ಗ್ಲೋಬಲ್ ಗ್ರೀನ್ ಎನರ್ಜಿ ಫೈನಾನ್ಸ್- ಐಎಫ್ಎಸ್ಸಿ ಲಿಮಿಟೆಡ್ ಎಂಬ ಅಂಗಸಂಸ್ಥೆ ಆರಂಭ
ವಕ್ಫ್ ಬೋರ್ಡ್ನಿಂದ ಸ್ಥಾಪನೆಯಾಗಲಿವೆ ಮಹಿಳಾ ಪದವಿ ಪೂರ್ವ ಕಾಲೇಜು? ಸಚಿವ ಜಮೀರ್ ಅಹಮದ್ ಹೇಳಿದ್ದೇನು ?