ಹುಕ್ಕೇರಿ: ತಾಲೂಕಿನ ಯರನಾಳ ಗ್ರಾಮದ ಪಿಕೆಪಿಎಸ್ ಆಡಳಿತ ಮಂಡಳಿಗೆ ಸೋಮವಾರ ಜರುಗಿದ ಚುನಾವಣಾ ಪ್ರಕ್ರಿಯೆಯಲ್ಲಿ 12 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಚೇತನ ಹಂಜಿ ಘೋಷಿಸಿದರು.
ನಿರ್ದೇಶಕರಾಗಿ ಧನ್ಯಕುಮಾರ ಪಾಟೀಲ, ಬಸವರಾಜ ತೇರಣಿ, ವಾಸೀಮ್ ನದಾಫ್, ವಿದ್ಯಾಧರ ರಾಮನ್ನವರ, ಶ್ರೀಕಾಂತ ಪಾಟೀಲ, ಶಾಂತವ್ವ ಪಾಟೀಲ, ಶೈಲಾ ದೇಸಾಯಿ, ಸಂತೋಷ ಕಾನೋಜಿ, ರಾಜಕುಮಾರ ದೇಸಾಯಿ, ಕಾಡಪ್ಪ ತಳವಾರ, ಅನಿಲ ಘಸ್ತಿ, ಕಲ್ಲಪ್ಪ ಕಗ್ಗೂಡಿ ಆಯ್ಕೆಯಾದರು.
ಹಿರಿಯರಾದ ಕೆಂಪಣ್ಣ ದೇಸಾಯಿ, ಚಿದಾನಂದ ಡಬ್ಬು, ಕಲ್ಲಪ್ಪ ಉಪಾಧ್ಯೆ, ಬಾಬಾಸಾಹೇಬ ಸನದಿ, ಸಣ್ಣಪ್ಪ ಪಾಟೀಲ, ಭರಮಪ್ಪ ಲಠ್ಠೆ, ಸುಕುಮಾರ ಪಾಟೀಲ, ಕಾಕಾಸಾಹೇಬ ವರ್ಧಮಾನೆ, ಟಿ.ಡಿ.ಪಾಟೀಲ, ವೆಂಕಪ್ಪ ಪೂಜೇರಿ, ರಾಜೇಂದ್ರ ಹುಣಚ್ಯಾಳೆ, ಗಂಗಾಧರ ದೇಸಾಯಿ, ಬಾಹುಬಲಿ ರಾಮಣ್ಣವರ, ಸಂಘದ ಮುಖ್ಯ ಕಾರ್ಯ ನಿರ್ವಾಹಕ ಬಸವರಾಜ ಡಬ್ಬು ಇತರರಿದ್ದರು.