More

    ಇ-ತ್ಯಾಜ್ಯಕ್ಕೂ ಹಣದ ಬೇಡಿಕೆ!

    ಬೆಳಗಾವಿ: ಪರಿಸರಕ್ಕೆ ಹಾನಿಯುಂಟು ಮಾಡುವ ಇ-ತ್ಯಾಜ್ಯ ನೀಡಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ. ಹಣ ನೀಡಿದರಷ್ಟೇ ಇ-ತ್ಯಾಜ್ಯ ಕೊಡುತ್ತೇವೆ ಎಂದು ಕಸ ಸಂಗ್ರಹಕಾರರಿಗೆ ಪೀಡಿಸುತ್ತಿದ್ದಾರೆ. ಇದರಿಂದ ಇ- ತ್ಯಾಜ್ಯ ವಿಲೇವಾರಿ ಮಾಡುವುದೇ ಅಧಿಕಾರಿಗಳಿಗೆ ತಲೆನೋವಾಗಿದೆ.

    ಕಸ ವಿಂಗಡಣೆ ಹಾಗೂ ಇ- ತ್ಯಾಜ್ಯದ ಬಗ್ಗೆ ಪಾಲಿಕೆ ಪರಿಸರ ವಿಭಾಗದ ಅಧಿಕಾರಿಗಳು ಕೈಗೊಂಡ ಅರಿವು ಕಾರ್ಯಕ್ರಮಕ್ಕೆ ನಗರ ನಿವಾಸಿಗಳು ನಿಷ್ಕಾಳಜಿ ತೋರಿಸುತ್ತಿದ್ದಾರೆ.

    ಪ್ರತ್ಯೇಕ ವಾಹನ: ಇ- ತ್ಯಾಜ್ಯಗಳ ರಾಸಾಯನಿಕಗಳು ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಇ-ತ್ಯಾಜ್ಯ ಸಂಗ್ರಹಕ್ಕೆ ಪ್ರತ್ಯೇಕ ವಾಹನ ಹಾಗೂ ಸಿಬ್ಬಂದಿ ನೇಮಿಸಿದೆ. ಅವರು ಇ-ತ್ಯಾಜ್ಯ ಸಂಗ್ರಹಿಸುವುದಕ್ಕೆ ವಾರ್ಡ್‌ಗಳಿಗೆ ಅಲೆದಾಡುತ್ತಿದ್ದಾರೆ. ಆದರೆ, ಸಾರ್ವಜನಿಕರು ಇ-ತ್ಯಾಜ್ಯ ನೀಡಲು ಮುಂದೆ ಬರುತ್ತಿಲ್ಲ. ಹಾಳಾದ ಇಲೆಕ್ಟ್ರಾನಿಕ್ಸ್ ವಸ್ತುಗಳ ಕಸವನ್ನು ಮನೆಯಲ್ಲೇ ಇಟ್ಟುಕೊಂಡು ಕುಳಿತಿದ್ದಾರೆ.

    ಸಿಬ್ಬಂದಿ ನೇಮಕ: ಇ- ತ್ಯಾಜ್ಯ ಸಂಗ್ರಹಣೆಗೆ ಪ್ರತ್ಯೇಕ ವಾಹನ, ಪ್ರತ್ಯೇಕ ಸ್ಥಳ, ಪ್ರತ್ಯೇಕ ಸಿಬ್ಬಂದಿ ನಿಯೋಜಿಸಿದ್ದರೂ ಅಧಿಕಾರಿಗಳ ಶ್ರಮಕ್ಕೆ ಜನರು ಸ್ಪಂದಿಸುತಿಲ್ಲ. ಹಾಳಾದ ಬಲ್ಬ್, ಟ್ಯೂಬ್‌ಲೈಟ್, ಗ್ಲಾಸ್, ಇತರ ವಸ್ತುಗಳನ್ನು ನೀಡುವಂತೆ ಮನೆ ಬಾಗಿಲಿಗೆ ಹೋದರೆ ಜನರು, ಅವುಗಳಿಗೂ ಬೆಲೆ ಕಟ್ಟುತ್ತಿದ್ದಾರೆ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

    ಕ್ಯಾರೆ ಎನ್ನದ ಜನತೆ: ಒಣ ಕಸ, ಹಸಿ ತ್ಯಾಜ್ಯ ಹಾಗೂ ಇ-ತ್ಯಾಜ್ಯಗಳನ್ನು ಪ್ರತ್ಯೇಕ ಮಾಡಿದರೆ ಕಸ ನಿರ್ವಹಣೆ ಮಾಡುವುದಕ್ಕೆ ಪೌರ ಕಾರ್ಮಿಕರಿಗೆ ಅನುಕೂಲವಾಗುತ್ತದೆ. ಜತೆಗೆ ಪರಿಸರಕ್ಕೆ ಮಾರಕವಾಗುವ ವಸ್ತುಗಳನ್ನು ಬರುಬಳಕೆ ಮಾಡಬಹುದು. ಆದರೆ, ಕಸ ವಿಂಗಡಣೆ ಮಾಡಿ ಎಂಬ ಅಧಿಕಾರಿಗಳಿಗೆ ಕೂಗಿಗೆ ಸ್ಥಳೀಯ ನಿವಾಸಿಗಳು ಕ್ಯಾರೆ ಎನ್ನುತ್ತಿಲ್ಲ. ಕಸ ವಿಂಗಡಣೆ ಮಾಡದೆ ಹಾಗೆಯೇ ನೀಡುತ್ತಿದ್ದಾರೆ. ಇದು ಕಸ ನಿರ್ವಹಣೆಕಾರರಿಗೆ ಸಮಸ್ಯೆಯಾಗುತ್ತಲಿದೆ.

    ಮಹಾನಗರದ 58 ವಾರ್ಡ್‌ಗಳಿಗೆ ಪ್ರತ್ಯೇಕ ವಾಹನ ಸಂಚಾರ

    ಇ-ತ್ಯಾಜ್ಯ ವಿಲೇವಾರಿಯನ್ನು ಪಾಲಿಕೆ ಅಧಿಕಾರಿಗಳು ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ. ಹೀಗಾಗಿಯೇ 58 ವಾರ್ಡ್‌ಗಳಿಗೆ ಆರೋಗ್ಯ ನಿರೀಕ್ಷಕರ ನೇಮಕ ಮಾಡಿ ವಾಹನ ಕಳುಹಿಸುತ್ತಿದ್ದಾರೆ. ವಾರ್ಡ್ ನಂಬರ್ 2, 3, 16, 17, 18, 19 ವಾರ್ಡ್‌ಗಳ ಇ-ತ್ಯಾಜ್ಯ ವಿಲೇವಾರಿಗೆ ಆರೋಗ್ಯ ನಿರೀಕ್ಷಕ ಯು.ಎ. ಗಣಾಚಾರಿ (ಮೊಬೈಲ್- 9448304724) ಅವರನ್ನು ನೇಮಿಸಲಾಗಿದೆ. 1,4,5,6 ವಾರ್ಡ್‌ಗಳಿಗೆ ಎಸ್.ಪಿ. ತಾಶಿಲ್ದಾರ (ಮೊ. 9900588445), 7ರಿಂದ 12ನೇ ವಾರ್ಡ್‌ಗೆ ಅನಿಲ್ ಬೋರಗಾವಿ (ಮೊ. 9632605358), 13, 14, 15, 20, 21ನೇ ವಾರ್ಡ್‌ಗೆ ಕಲಾವತಿ ಅಡ್ಮನಿ (ಮೊ. 8496044180), 22ರಿಂದ 25ನೇ ವಾರ್ಡ್‌ವರೆಗೆ ರುಕ್ಸಾರ್ ಮುಲ್ಲಾ (ಮೊ. 9686222312), 26ರಿಂದ 29ನೇ ವಾರ್ಡ್‌ಗೆ ಶಿವಾನಂದ ಭೋಸಲೆ (ಮೊ.8892865133), 30, 31, 33 ವಾರ್ಡ್‌ಗೆ ಬಾಬು ಮಾಳಣ್ಣವರ (ಮೊ. 9448857314), 32, 34ನೇ ವಾರ್ಡ್‌ಗೆ ಬಸವರಾಜ ಹೊಸಮನಿ (ಮೊ.7795120447), 35, 37, 38ನೇ ವಾರ್ಡ್‌ಗೆ ಶೀತಲ್ ರಾಮತೀರ್ಥ (ಮೊ. 7795762838) 36, 39ನೇ ವಾರ್ಡ್‌ಗೆ ಸುವರ್ಣಾ ಪವಾರ (ಮೊ.9448055669), 40ರಿಂದ 44 ಹಾಗೂ 55ನೇ ವಾರ್ಡ್‌ಗೆ ಎಸ್.ವಿ. ಕಾಂಬಳೆ (ಮೊ.9886431331), 45ರಿಂದ 48ನೇ ವಾರ್ಡ್‌ಗೆ ಪುಂಡಲೀಕ ಲಮಾಣಿ (ಮೊ. 9900680087), 49,50,51,54ನೇ ವಾರ್ಡ್‌ಗೆ ಎಂ.ಎಂ. ಧಾರವಾಡ (ಮೊ. 8861215371), 52,53ನೇ ವಾರ್ಡ್‌ಗೆ ಸುಶೀಲಾ ದೇಶಣ್ಣವರ (ಮೊ.8904893370), 56ರಿಂದ 58ನೇ ವಾರ್ಡ್‌ನವರು ಎಂ.ಎನ್. ಆದಿವಾಸಿ (ಮೊ. 9844290349) ಅವರಿಗೆ ಕರೆ ಮಾಡಿ ಇ-ತ್ಯಾಜ್ಯ ನೀಡಬಹುದು.

    ಇ-ತ್ಯಾಜ್ಯ ಸಂಗ್ರಹಕ್ಕೆ ಪ್ರತ್ಯೇಕ ವಾಹನ ವಾರ್ಡ್‌ಗಳಿಗೆ ಬರಲಿದೆ. ಸಾರ್ವಜನಿಕರು ಪಾಲಿಕೆಯೊಂದಿಗೆ ಕೈ ಜೋಡಿಸಬೇಕು. ಮನೆಗಳಲ್ಲಿರುವ ಹಾಳಾದ ಬಲ್ಬ್, ಟ್ಯೂಬ್‌ಲೈಟ್, ಶಲ್‌ಗಳು ಹಾಗೂ ಇತರೆ ಇಲೆಕ್ಟ್ರಾನಿಕ್ಸ್ ವಸ್ತಗಳನ್ನು ಕಸ ಸಂಗ್ರಹಕಾರರಿಗೆ ನೀಡಿ ಸಹಕರಿಸಬೇಕು.
    | ರಾಜಶೇಖರ ಚಿತ್ತವಾಡಗಿ
    ಎಇಇ, ಪರಿಸರ ವಿಭಾಗ,
    ಮಹಾನಗರ ಪಾಲಿಕೆ ಬೆಳಗಾವಿ

    | ಜಗದೀಶ ಹೊಂಬಳಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts