For children Utama Sanskara Avashya

ಕಕ್ಕೇರಿ: ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದಲ್ಲಿ ಮನೆಯ ಕೀರ್ತಿ ಬೆಳಗಲು ಸಾಧ್ಯ ಎಂದು ಹಿಡಕಲ್ ಅಡವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಸ್ಥಳೀಯ ಶ್ರೀ ವೀರಭದ್ರಸ್ವಾಮಿ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ಪ್ರಜೆಗಳು, ಸಂಸ್ಕಾರಯುತ ಯುವಕರೆ ದೇಶದ ಆಸ್ತಿ ಎಂದರು.
ಶಿರಕೋಳ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಯಾರನ್ನೂ ಕೀಳಾಗಿ ಕಾಣಬಾರದು ಎನ್ನುವುದಕ್ಕೆ ಮೀನು ಮಾರುವವರ ಮಗನಾದ ಅಬ್ದುಲ್ ಕಲಾಂ ಹಾಗೂ ವಿಜ್ಞಾನಿಯಾದ ಥಾಮಸ್ ಅಲ್ವಾ ಎಡಿಸನ್ ಅವರೇ ನಿದರ್ಶನ. ಮಕ್ಕಳ ಪರಿಶ್ರಮದಲ್ಲಿ ಪಾಲಕರ ಪಾತ್ರ ಮಹತ್ವದ್ದಾಗಿದೆ ಎಂದರು.
ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಪ್ರವಚನ ನೀಡಿದರು. ರಮೇಶ ವೀರಾಪುರ, ಮಲ್ಲಯ್ಯ ಹಿರೇಮಠ, ಶಿವಾನಂದ ಅಂಬಡಗಟ್ಟಿ, ನಾಗಪ್ಪ ಕುಕುಡೊಳ್ಳಿ, ಶಿವರಾಯಿ ಕುಂಬಾರಕೊಪ್ಪ, ಪ್ರಭು ಅಂಬಡಗಟ್ಟಿ, ನಾಗಪ್ಪ ಅಂಬೋಜಿ, ಹಾಜಿಭಾಷಾ ಮುಲ್ಲಾ, ಚರಂತಯ್ಯ ಹಿರೇಮಠ, ಅದೃಶ್ಯ ಕುಂಬಾರ, ನಿವೃತ್ತ ಶಿಕ್ಷಕ ಆರ್.ವೈ. ಬೆನ್ನೂರು ಹಾಗೂ ಇತರರಿಗೆ ಸತ್ಕಾರ ಮಾಡಲಾಯಿತು.