ಬೆಳಗಾವಿ: ಕೈಗಾರಿಕೆಗಾಗಿ ಭೂ ಬ್ಯಾಂಕ್ ಸ್ಥಾಪನೆ

ಬೆಳಗಾವಿ: ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲ ಮಾಡಿಕೊಡಲು ಭೂ ಬ್ಯಾಂಕ್ ಸ್ಥಾಪನೆ ಮಾಡಲಾಗುವುದು. ಜತೆಗೆ ಡಿಸೆಂಬರ್‌ನಲ್ಲಿ ಕೈಗಾರಿಕಾ ಸ್ನೇಹಿ 2019-2024 ಹೊಸ ಕೈಗಾರಿಕಾ ನೀತಿ ಜಾರಿಗೆ ತರಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.

ನಗರದಲ್ಲಿ ಬುಧವಾರ ನಡೆದ ಕೈಗಾರಿಕೋದ್ಯಮಿಗಳ ಮತ್ತು ಹೂಡಿಕೆದಾರರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ 2ನೇ ಹಂತದ ನಗರಗಳು, ತಾಲೂಕು ಮಟ್ಟದಲ್ಲಿ ಕೈಗಾರಿಕೆ ಸ್ಥಾಪನೆಗಾಗಿ ಅಗತ್ಯ ಭೂಮಿಯನ್ನು ಮೊದಲೇ ಸ್ವಾೀನ ಪಡಿಸಿಕೊಂಡು ಕಾಯ್ದಿರಿಸಿಕೊಳ್ಳುವ ಸಲುವಾಗಿ ಭೂ ಬ್ಯಾಂಕ್ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು. ಈಗಾಗಲೇ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ವತಿಯಿಂದ ಕೈಗಾರಿಕೆಗಳ ಸ್ಥಾಪನೆಗೆಂದು ಸರ್ಕಾರದಿಂದ ಭೂಮಿ ಪಡೆದಿರುವ ಹಲವರು ಅದನ್ನು ಬಳಕೆ ಮಾಡದೆ ಹಾಗೆಯೇ ಉಳಿಸಿಕೊಂಡಿದ್ದಾರೆ.

ಬಳಕೆಯಾಗದ ಭೂಮಿಯನ್ನು ಗುರುತಿಸಿ ವಾಪಸ್ ಪಡೆಯಲು ಮತ್ತು ದುರುಪಯೋಗ ಪಡಿಸಿಕೊಂಡವರ ವಿರುದ್ಧ ಕ್ರಮ ಜರುಗಿಸುವ ಉದ್ದೇಶದಿಂದಲೇ ಕೈಗಾರಿಕೆ ಪ್ರದೇಶದ ಭೂಮಿಯನ್ನು ಪರಿಶೀಲನೆ ನಡೆಸಿ ಮಾಹಿತಿ ನೀಡಲು ಅಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಬೆಳಗಾವಿ, ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಮಹಾರಾಷ್ಟ್ರದ ಉದ್ಯಮಿಗಳು ಆಸಕ್ತಿ ತೋರಿಸಿದ್ದಾರೆ.

ಕೈಗಾರಿಕೆಗಳಿಗೆ ಮಹಾರಾಷ್ಟ್ರದಲ್ಲಿ ನೀಡುತ್ತಿರುವ ಸಬ್ಸಿಡಿ ಸೌಲಭ್ಯಗಳು ಮತ್ತು ಕರ್ನಾಟದಲ್ಲಿ ಸಬ್ಸಿಡಿ ಯೋಜನೆಗಳ ಕುರಿತು ಕೈಗಾರಿಕೆ ಉದ್ಯಮಿಗಳಿಗೆ ಮನವರಿಕೆಯಾದ ಬಳಿಕವೇ ೌಂಡ್ರಿ, ಆಟೋಮೊಬೈಲ್ಸ್, ಟೆಕ್ಸ್‌ಟೈಲ್ಸ್ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿದ್ದಾರೆ ಎಂದು ತಿಳಿಸಿದರು.

2014-19ರ ಕೈಗಾರಿಕಾ ನೀತಿ ಇದೇ ನವೆಂಬರ್ ನಲ್ಲಿ ಕೊನೆಯಾಗಲಿದೆ. 2019-2024 ಹೊಸ ಕೈಗಾರಿಕಾ ನೀತಿ ರೂಪಿಸಬೇಕಿರುವುದರಿಂದ ಕೈಗಾರಿಕೋದ್ಯಮಿಗಳ ಜತೆ ಚರ್ಚಿಸಿ, ಅಭಿಪ್ರಾಯ ಪಡೆಯಲಾಗುವುದು. ಗುಜರಾತ್, ಮಧ್ಯಪ್ರವೇಶ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಕೈಗಾರಿಕಾ ನೀತಿ ಅಧ್ಯಯನ ಮಾಡಿ ಒಂದು ಉತ್ತಮ ಹಾಗೂ ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾದ ನೀತಿ ಜಾರಿಗೆ ತರಲಾಗುವುದು. ಹೊಸ ಕೈಗಾರಿಕೆ ನೀತಿಯಿಂದ ಹೂಡಿಕೆದಾರರಿಗೆ ಅನುಕೂಲವಾಗಲಿದೆ ಎಂದು ಸಚಿವರು ಭರವಸೆ ನೀಡಿದರು.

ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ, ಶಾಸಕ ಅಭಯ ಪಾಟೀಲ, ಶಾಸಕ ಅನಿಲ ಬೆನಕೆ, ಮಾಜಿ ಸಂಸದ ಅಮರಸಿಂಹ ವಸಂತರಾವ್ ಪಾಟೀಲ, ಸಂಜಯ ಪಾಟೀಲ, ಇತರರು ಇದ್ದರು.

ಅಭಿವೃದ್ಧಿಗೆ ಪೂರಕ ಕಾರಿಡಾರ್

ಕೇಂದ್ರ ಸರ್ಕಾರ ಮುಂಬೈ- ಚೆನ್ನೆ ನಡುವೆ ಕಾರಿಡಾರ್ ನಿರ್ಮಾಣ ಕೈಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೈಗಾರಿಕೆ ಕ್ಷೇತ್ರದ ಬೆಳವಣಿಗೆ ಆಗಲಿದೆ. ಬೆಂಗಳೂರು ನಗರ ಹೊರತು ಪಡಿಸಿ ಬೆಳಗಾವಿ, ಹುಬ್ಬಳ್ಳಿ ನಗರದಲ್ಲಿ ಹೂಡಿಕೆ ಮಾಡುವವರಿಗೆ ರೈಲ್ವೆ, ವಿಮಾನ, ರಸ್ತೆ ಸಾರಿಗೆ ಸೇರಿದಂತೆ ಸಾಕಷ್ಟು ಅನುಕೂಲಗಳಿವೆ. ಎರಡನೇ ಹಂತದ ನಗರ ಪ್ರದೇಶಗಳಲ್ಲಿ ಹೂಡಿಕೆ ಮಾಡುವವರಿಗೆ ಆದ್ಯತೆ ನೀಡಲಾಗುವುದು ಎಂದು
ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.

ಕೈಗಾರಿಕೆ ಪ್ರದೇಶ ರಿಯಲ್ ಎಸ್ಟೇಟ್‌ಗೆ?

ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆಂದು ಸರ್ಕಾರದಿಂದ ಭೂಮಿ ಪಡೆದಿರುವ ಹಲವರು ಅದನ್ನು ಬಳಕೆ ಮಾಡದೆ ಹಾಗೆಯೇ ಉಳಿಸಿಕೊಂಡು ರಿಯಲ್ ಎಸ್ಟೇಟ್ ಮಾಡುತ್ತಿರುವುದು ಮತ್ತು ಆ ಭೂಮಿಯನ್ನು ಇನ್ನೊಬ್ಬರಿಗೆ ಹೆಚ್ಚಿನ ದರಕ್ಕೆ ಬಾಡಿಗೆ ನೀಡುತ್ತಿದ್ದಾರೆ. ಇದಕ್ಕೆ ಅಕಾರಿಗಳು ಸಹಕಾರ ನೀಡುತ್ತಿದ್ದಾರೆ. ಕೈಗಾರಿಕೆಗಳಿಗೆ ಬಳಕೆ ಮಾಡದ ಭೂಮಿ ವಾಪಸ್ ಪಡೆದುಕೊಳ್ಳುತ್ತಿಲ್ಲ. ಹೊಸ ಹೂಡಿಕೆದಾರರಿಗೆ ಭೂಮಿ ನೀಡುತ್ತಿಲ್ಲ. ಸದ್ಯ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕೆ ಪ್ರದೇಶಗಳಿಗೆ ಯಾವುದೇ ಸೌಲಭ್ಯ ಕಲ್ಪಿಸುತ್ತಿಲ್ಲ ಎಂದು ಉದ್ಯಮಿಗಳು ದೂರಿದರು.

Leave a Reply

Your email address will not be published. Required fields are marked *