ಪಾಣತ್ತಲೆ ತಂಡ ಕ್ವಾರ್ಟರ್ ಫೈನಲ್ ಪ್ರವೇಶ

ಮಡಿಕೇರಿ: ಕೊಡಗು ಗೌಡ ಫುಟ್‌ಬಾಲ್ ಅಕಾಡೆಮಿ ವತಿಯಿಂದ ಮರಗೋಡಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ನಡೆಯುತ್ತಿರುವ 4ನೇ ವರ್ಷದ ಗೌಡ ಫುಟ್ಬಾಲ್ ಟ್ರೋಫಿಯಲ್ಲಿ ಪಾಣತ್ತಲೆ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಗುರುವಾರ ನಡೆದ ಪಾಣತ್ತಲೆ ‘ಬಿ’ ಹಾಗೂ ಪರಿಚನ ನಡುವಿನ ಹಣಾಹಣಿಯಲ್ಲಿ ಪಾಣತ್ತಲೆ ‘ಬಿ’ ತಂಡ 5-0 ಅಂತರದಿಂದ ಜಯ ಸಾಧಿಸಿತು. ತಂಡದ ಪರ ವಿಕ್ರಮ್ 2, ಜಗ 3 ಗೋಲು ದಾಖಲಿಸಿದರು. ಬಡುವಂಡ್ರ ಹಾಗೂ ಬಳಪದ ನಡುವಣಾ ಪಂದ್ಯದಲ್ಲಿ ಬಡುವಂಡ್ರ ತಂಡ 6-0 ಗೋಲುಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು. ತಂಡದ ಪರ ದುಶ್ಯಂತ್ 1, ಸುಜಯ್ 4 ಹಾಗೂ ಭರತ್ ಒಂದು ಗೋಲು ದಾಖಲಿಸಿದರು.
ಕೊಳಂಬೆ ಹಾಗೂ ಪರಿಚನ ನಡುವಿನ ಪಂದ್ಯಾವಳಿಯಲ್ಲಿ ಪರಿಚನ ತಂಡ ಕೊಳಂಬೆ ತಂಡದ ವಿರುದ್ಧ 3-0 ಅಂತರದಲ್ಲಿ ಗೆಲುವು ಸಾಧಿಸಿತು. ಪರಿಚನ ತಂಡದ ಪರ ಹವಿನ್ 1, ವೇತನ್ 1 ಹಾಗೂ ಸೆಲ್ಫ್ ಗೋಲ್ ದಾಖಲಾಯಿತು.
ಕರ್ಣಯನ ಹಾಗೂ ಕೊಟ್ಟಕೇರಿಯನ ನಡುವಣ ಪಂದ್ಯಾವಳಿಯಲ್ಲಿ ಕರ್ಣಯನ ತಂಡ 2-0 ಗೋಲುಗಳಿಂದ ಜಯ ದಾಖಲಿಸಿತು. ಕರ್ಣಯನ ತಂಡದ ಪರ ಭರತ್ ಹಾಗೂ ಪ್ರತೀಕ್ ತಲಾ ಒಂದೋಂದು ಗೋಲು ದಾಖಲಿಸುವ ಮೂಲಕ ತಂಡದ ಗೆಲುವಿನ ರೂವಾರಿಯಾದರು.
ಬಳಪದ ಹಾಗೂ ತಳೂರು ತಂಡದ ನಡುವಿನ ಹಣಾಹಣಿಯಲ್ಲಿ ನಿಗಧಿತ ಸಮಯದಲ್ಲಿ ಇತ್ತಂಡಗಳು 1-1 ಗೋಲುಗಳಿಂದ ಸಲಬಲ ಸಾಧಿಸಿತು. ಟ್ರೈಬ್ರೇಕರ್‌ನಲ್ಲಿ ಬಳಪದ ತಂಡ 4-2 ಅಂತರದಿಂದ ಜಯ ಸಾಧಿಸಿತು. ಪೊಕ್ಕುಳಂಡ್ರ ಹಾಗೂ ಕೂಡಕಂಡಿ ನಡುವಿನ ಹಣಾಹಣಿಯಲ್ಲಿ ಪೊಕ್ಕುಳಂಡ್ರ ತಂಡ 4-0 ಅಂತರದಿಂದ ಗೆಲುವಿನ ನಗೆ ಬೀರಿತು. ತಂಡದ ಪರ ವಿನೋದ್, ಯೋಜನ್ ಒಂದೊಂದು ಗೋಲು ದಾಖಲಿಸಿದರೆ, ಪ್ರವೀಣ್ 2 ಗೋಲು ದಾಖಲಿಸಿದರು.
ಅಯ್ಯಂಡ್ರ ಹಾಗೂ ಸೂದನ ನಡುವಿನ ಪಂದ್ಯಾಟದಲ್ಲಿ ಅಯ್ಯಂಡ್ರ ತಂಡ 1-0 ಗೋಲುಗಳಿಂದ, ಕೋಳಿಬೈಲು ಹಾಗೂ ಕುಡೆಕಲ್ಲು ನಡುವಿನ ಪಂದ್ಯದಲ್ಲಿ ಕೋಳಿಬೈಲು ತಂಡ 1-0 ಗೋಲುಗಳಿಂದ ಜಯ ಸಾಧಿಸಿತು.
ಚಂಡೀರ ಹಾಗೂ ಪೊಕ್ಕುಳಂಡ್ರ ನಡುವಿನ ಪಂದ್ಯದಲ್ಲಿ ಪೊಕ್ಕುಳಂಡ್ರ ತಂಡ ಜಯ ಸಾಧಿಸಿತು. ತಂಡದ ಪರ ವಿನೋದ್, ಯೋಗೇಶ್ ಹಾಗೂ ಸುಜಿತ್ ತಲಾ ಒಂದೊಂದು ಗೋಲು ದಾಖಲಿಸಿದರು. ಮತ್ತೊಂದು ಪಂದ್ಯದಲ್ಲಿ ಬಡುವಂಡ್ರ ತಂಡ, ಕರ್ಣಯ್ಯನ ತಂಡದ ವಿರುದ್ಧ 2-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ತಂಡದ ಪರ ಸುಜಯ್, ಭರತ್ ತಲಾ ಒಂದೊಂದು ಗೋಲು ದಾಖಲಿಸಿದರು.
ಗುರುವಾರದ ಪಂದ್ಯಾವಳಿಯಲ್ಲಿ ಪೊಕ್ಕುಳಂಡ್ರ, ಬಡುವಂಡ್ರ ತಂಡಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆದವು.

Leave a Reply

Your email address will not be published. Required fields are marked *