More

  ಕ್ಯಾನ್ಸರ್ ತಡೆಗಟ್ಟುವ ಆಹಾರಗಳು

  ‘ಸೂಪರ್​ಫುಡ್’ನಿಂದ ಕ್ಯಾನ್ಸರ್ ರೋಗವನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ; ಬದಲಿಗೆ, ಸರಿಯಾದ ಆಹಾರ ವಿಧಾನವು ಈ ರೋಗವನ್ನು ತಡೆಗಟ್ಟುವ ಉತ್ತಮ ವಿಧಾನವಾಗಿದೆ. ಇದು ಕ್ಯಾನ್ಸರ್ ರೋಗವನ್ನು ಶೇ. 70ರಷ್ಟು ಕಡಿಮೆ ಮಾಡುತ್ತದೆ ಎಂದಿದ್ದಾರೆ ವಿಜ್ಞಾನಿಗಳು. ಕ್ಯಾನ್ಸರ್ ನಿಯಂತ್ರಣದಲ್ಲಿ ಸಹಕಾರಿಯಾಗಿಡುವ ಹಲವು ಅಹಾರಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ

  ಆಹಾರದ ಬಗ್ಗೆ ಯೋಜನೆ ರೂಪಿಸಿ: ವಿವಿಧ ರೀತಿಯ ಕ್ಯಾನ್ಸರ್ ಮತ್ತು ಇತರ ಕಾಯಿಲೆಗಳಿಂದ ಆರೋಗ್ಯ ಕಾಪಾಡಿಕೊಳ್ಳಲು ಆಂಟಿಯಾಕ್ಸಿಡೆಂಟ್ ಅಂಶಗಳುಳ್ಳ ಹಣ್ಣು, ತರಕಾರಿ, ಬೀನ್ಸ್, ಧಾನ್ಯಗಳನ್ನು ಹೆಚ್ಚಾಗಿ ಸೇವಿಸಿ. ಸಂಸ್ಕರಿಸಿದ ಮತ್ತು ಹುರಿದ ಆಹಾರಗಳು, ಅನಾರೋಗ್ಯಕರ ಕೊಬ್ಬುಗಳನ್ನು ಉಂಟುಮಾಡುವ ಆಹಾರ, ಅತಿ ಹೆಚ್ಚು ಸಕ್ಕರೆ ಅಂಶವಿರುವ ಪದಾರ್ಥಗಳ ಬಳಕೆ ಕಡಿಮೆ ಮಾಡಿ.

  ಆಂಟಿಯಾಕ್ಸಿಡೆಂಟ್: ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಸ್ಯಾಹಾರ ಸೇವನೆ ಅಧಿಕವಾಗಿರಲಿ. ಇದರಲ್ಲಿ ಆಂಟಿಯಾಕ್ಸಿಡೆಂಟ್ ಸಮೃದ್ಧವಾಗಿರುವ ಕಾರಣ, ಕ್ಯಾನ್ಸರ್ ಕೋಶದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ‘ವಿಟಮಿನ್ ಸಿ’ ಎಂದು ಕರೆಯಲ್ಪಡುವ ಆಸ್ಕೋರ್ಬಿಕ್ ಆಮ್ಲ ಮತ್ತು ಆಲ್ಪಾ-ಟೊಕೊಫೆರಾಲ್ (ವಿಟಮಿನ್ ಇ) ಜೀವಕೋಶದ ಪೊರೆಗಳಿಗೆ ಹಾನಿಯಾಗದಂತೆ ರಕ್ಷಿಸುತ್ತದೆ. ಕ್ಯಾರೆಟ್, ಬ್ರಸೆಲ್ಸ್ ಸ್ಪೌ›ಟ್​ತಿನ್ನುವುದರಿಂದ ಶ್ವಾಸಕೋಶ, ಬಾಯಿ, ಗಂಟಲಕುಳಿ ಮತ್ತು ಧ್ವನಿಪೆಟ್ಟಿಗೆಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು. ಕಿತ್ತಳೆ, ಬಟಾಣಿ, ಹಸಿರು ತರಕಾರಿ ಮತ್ತು ವಿಟಮಿನ್ ಸಿ ಅಧಿಕವಾಗಿರುವ ಆಹಾರ ಸೇವಿಸುವುದರಿಂದ ಅನ್ನನಾಳದ ಕ್ಯಾನ್ಸರ್ ನಿಂದ ರಕ್ಷಿಸಿಕೊಳ್ಳಬಹುದು ಟೊಮ್ಯಾಟೋ, ಸೀಬೆ ಮತ್ತು ಕಲ್ಲಂಗಡಿ ಹಣ್ಣುಗಳಲ್ಲಿ ಲೈಕೋಪೀನ್ ಅಂಶ ಅಧಿಕವಾಗಿರುವ ಕಾರಣ, ಇವು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

  ಪೂರ್ವಸಿದ್ಧ ಆಹಾರ, ಜ್ಯೂಸ್ ಬದಲು ತಾಜಾ ಸೇವಿಸಿ.ಇವು ಕ್ಯಾನ್ಸರ್ ವಿರುದ್ಧ ಹೋರಾಡುವ ಜತೆ, ತೂಕವನ್ನು ಕಾಪಾಡಿಕೊಳ್ಳಲೂ ಸಹಕರಿಸುತ್ತದೆ. ಅಧ್ಯಯನದ ಪ್ರಕಾರ ಪಿಷ್ಟರಹಿತ ತರಕಾರಿಗಳು ಮತ್ತು ಹಣ್ಣುಗಳು ಬಾಯಿ, ಗಂಟಲಕುಳಿ, ಧ್ವನಿಪೆಟ್ಟಿಗೆ, ಅನ್ನನಾಳ, ಗುದನಾಳ ಮತ್ತು ಹೊಟ್ಟೆಯ ಕ್ಯಾನ್ಸರ್​ಗಳಿಂದ ರಕ್ಷಣೆ ಒದಗಿಸುತ್ತವೆ.

  ಫೈಬರ್ ಭರಿತ ಆಹಾರ: ಫೈಬರ್ ಅಂಶ ಇರುವ ಆಹಾರಗಳು ಕರುಳಿನ ಕ್ಯಾನರ್, ಸ್ತನ, ಅಂಡಾಶಯ ಮತ್ತು ಎಂಡೊಮೆಟ್ರಿಯಂನ ಕ್ಯಾನ್ಸರ್​ಗಳನ್ನು ನಿಯಂತ್ರಣದಲ್ಲಿ ಇಡುತ್ತವೆ. ಅಕ್ಕಿ, ಓಟ್ಸ್​ನಂಥ ಹೆಚ್ಚಿನ ಫೈಬರ್ ಹೊಂದಿರುವ ಆಹಾರಗಳನ್ನು ಸೇವಿಸುವುದರಿಂದ ಮಲಬದ್ಧತೆಯನ್ನೂ ತಪ್ಪಿಸಬಹುದು. ಫೈಬರ್ ಭರಿತ ಆಹಾರವು ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುವುದರಿಂದ, ಇದು ಒಟ್ಟಾರೆ ಕ್ಯಾಲೊರಿ ಸೇವನೆಯನ್ನು ಕಡಿಮೆ ಮಾಡುತ್ತದೆ, ಇದರಿಂದ ತೂಕವನ್ನು ಕಾಪಾಡಿಕೊಳ್ಳಬಹುದು. ಇವು ಕರುಳಿನಲ್ಲಿ ಗಡ್ಡೆಗಳು ಬೆಳೆಯುವ ಸಾಧ್ಯತೆ ಕಡಿಮೆಯಾಗಿಸುತ್ತವೆ.

  ಆರೋಗ್ಯಕರ ಕೊಬ್ಬುಗಳು: ಪ್ಯಾಕೇಜ್ ಮಾಡಿದ ಮತ್ತು ಹುರಿದ ಆಹಾರಗಳಾದ ಕುಕೀಸ್, ಕೇಕ್, ಮಫಿನ್, ಪಿಜ್ಜಾ, ಫ್ರೆಂಚ್ ಫ್ರೖೆಸ್, ಫ್ರೖೆಡ್ ಚಿಕನ್, ಚಿಪ್ಸ್ ಇವುಗಳ ಸೇವನೆ ಮಾಡದಿರಿ. ಕೆಂಪು ಮಾಂಸ ಮತ್ತು ಡೈರಿಯಿಂದ ಸ್ಯಾಚುರೇಟೆಡ್ ಕೊಬ್ಬನ್ನು ನಿಮ್ಮ ದೈನಂದಿನ ಕ್ಯಾಲೊರಿಗಳಲ್ಲಿ ಶೇಕಡ 10ಕ್ಕಿಂತ ಹೆಚ್ಚು ಸೇವನೆ ಮಾಡಬೇಡಿ. ಒಮೆಗಾ -3 ಕೊಬ್ಬಿನಾಮ್ಲಗಳು ಉರಿಯೂತದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ಮೆದುಳು ಮತ್ತು ಹೃದಯದ ಆರೋಗ್ಯವನ್ನೂ ಕಾಪಾಡುತ್ತದೆ. ಪ್ರತಿದಿನ ಸುಮಾರು 50 ಗ್ರಾಂ ಸಂಸ್ಕರಿಸಿದ ಮಾಂಸವನ್ನು ತಿನ್ನುವುದರಿಂದ ನಿಮ್ಮ ಕ್ಯಾನ್ಸರ್ ಅಪಾಯವನ್ನು ಶೇಕಡ 18ರಷ್ಟು ಹೆಚ್ಚಿಸುತ್ತದೆ. ಗೋಮಾಂಸ, ಹಂದಿಮಾಂಸ, ಕುರಿಮರಿ ಮತ್ತು ಮೇಕೆ ಮುಂತಾದ ಕೆಂಪು ಮಾಂಸವನ್ನು ತಿನ್ನುವುದರಿಂದ ಕ್ಯಾನ್ಸರ್ ಅಪಾಯಕಾರಿ ಅಂಶಗಳು ಹೆಚ್ಚಾಗುತ್ತವೆ. ಅರಿಶಿಣ, ಈರುಳ್ಳಿ, ಬೆಳ್ಳುಳ್ಳಿ, ಗ್ರೀನ್ ಟೀ, ದ್ರಾಕ್ಷಿ, ಎಲೆಕೋಸು, ಹೂಕೋಸು, ಕೋಸುಗಡ್ಡೆ ಸೇರಿದಂತೆ ಅನೇಕ ಆಹಾರಗಳು ಕ್ಯಾನ್ಸರ್ ತಡೆಗಟ್ಟುವಲ್ಲಿ ಪರಿಣಾಮಕಾರಿ ಕೆಲಸ ನಿರ್ವಹಿಸುತ್ತಿದ್ದರೂ, ಈ ಕುರಿತು ಇನ್ನಷ್ಟು ಸಂಶೋಧನೆಗಳು ನಡೆಯುತ್ತಿವೆ.

  ಸಂಪರ್ಕಕ್ಕೆ: 080 22040400

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts