More

    ಆರೋಗ್ಯಕರ ಜೀವನಕ್ಕಾಗಿ ಸಕ್ಕರೆ ಬದಲು ಬಳಸಬಹುದಾದ ಆಹಾರ ಪದಾರ್ಥಗಳು

    ಬೆಂಗಳೂರು: ಕೇಕ್‌ಗಳಿಂದ ಹಿಡಿದು ಮಿಠಾಯಿವರೆಗೆ ಸಕ್ಕರೆಯನ್ನು ಪ್ರತಿ ಸಿಹಿ ಖಾದ್ಯದಲ್ಲಿ ಬಳಸಲಾಗುತ್ತದೆ. ನಾವು ಸಕ್ಕರೆಯನ್ನು ತಿನ್ನುವಾಗ ಇದಕ್ಕೆ ಸಂಬಂಧಿಸಿದ ಅಡ್ಡಪರಿಣಾಮಗಳನ್ನು ಮರೆತು ಬಿಡುತ್ತೇವೆ. ಇದರಿಂದಾಗಿ ಸ್ಥೂಲಕಾಯತೆ, ಕೊಬ್ಬು, ಮಧುಮೇಹ ಮುಂತಾದ ರೋಗಗಳು ನಮ್ಮ ದೇಹವನ್ನು ಪ್ರವೇಶಿಸಿ ಬಿಡುತ್ತವೆ. ಆದರೆ ಸಕ್ಕರೆಗೆ ಪರ್ಯಾಯವಾಗಿ ಈ ಕೆಳಗಿನ ಆಹಾರ ಪದಾರ್ಥಗಳನ್ನು ಉಪಯೋಗಿಸಿಬಹುದಾಗಿದೆ.

    ಖರ್ಜೂರ ಅತ್ಯುತ್ತಮ ನೈಸರ್ಗಿಕ ಸಿಹಿಕಾರಕಗಳಲ್ಲಿ ಒಂದಾಗಿದ್ದು, ಇದು ಫ್ರಕ್ಟೋಸ್‌ನ ಮೂಲವಾಗಿದೆ. ಅಂದರೆ ಹಣ್ಣಿನಲ್ಲಿ ಕಂಡುಬರುವ ನೈಸರ್ಗಿಕ ಸಕ್ಕರೆಯಂಶವನ್ನು ಹೊಂದಿದೆ. ಖರ್ಜೂರದಲ್ಲಿ ಫೈಬರ್, ಪೋಷಕಾಂಶಗಳು, ಪೊಟ್ಯಾಸಿಯಮ್, ಕಬ್ಬಿಣ ಮತ್ತು ಮೆಗ್ನೀಸಿಯಮ್ ಅಧಿಕವಾಗಿದೆ.

    ಇದನ್ನೂ ಓದಿ: ಸಾಧನೆಗೆ ಇನ್ನೊಂದು ಹೆಸರು ಡಾ. ವಜ್ರಕುಮಾರ

    ಜೇನುತುಪ್ಪವು ಸಮೃದ್ಧವಾದ ಕ್ಯಾಲೋರಿಗಳನ್ನು ಹೊಂದಿದ್ದು ಕ್ಯಾಲ್ಸಿಯಂ, ಪೊಟ್ಯಾಸಿಯಮ್, ವಿಟಮಿನ್ C, B1, B2, B3, B5 ಮತ್ತು B6 ನಂತಹ ಪ್ರಮುಖ ಖನಿಜ ಮತ್ತು ಜೀವಸತ್ವ ಹೊಂದಿದೆ. ಇದು ಬ್ಯಾಕ್ಟೀರಿಯಾ ವಿರೋಧಿ, ಆಂಟಿಫಂಗಲ್ ಅಂಶಗಳನ್ನು ಒಳಗೊಂಡಿದೆ. ಜೇನುತುಪ್ಪವು ತುಂಬಾ ಸಿಹಿಯಾಗಿರುವುದರಿಂದ ಸಕ್ಕರೆಗೆ ಹೋಲಿಸಿದರೆ ಇದನ್ನು ಕಡಿಮೆ ಬಳಸಬಹುದಾಗಿದೆ. 

    ಬೆಲ್ಲವು ಸಕ್ಕರೆಗಿಂತ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದೆ ಏಕೆಂದರೆ ಅದರಲ್ಲಿ ಕಾಕಂಬಿ ಅಂಶವಿದೆ. ಕಾಕಂಬಿಯು ಪೌಷ್ಟಿಕಾಂಶದ ಉಪ-ಉತ್ಪನ್ನವಾಗಿದೆ. ಇದನ್ನು ಸಂಸ್ಕರಿಸಿದ ಸಕ್ಕರೆಯನ್ನು ತಯಾರಿಸುವಾಗ ಹೆಚ್ಚಾಗಿ ತೆಗೆದುಹಾಕಲಾಗುತ್ತದೆ. ಆದರೆ ಬೆಲ್ಲ ಇದನ್ನು ಒಳಗೊಂಡಿದೆ.

    ಕಂದು ಸಕ್ಕರೆಯು ದೇಹಕ್ಕೆ ಬಹಳ ಮುಖ್ಯವಾದ ಕ್ಯಾಲ್ಸಿಯಂ, ಕಬ್ಬಿಣ, ಸತು, ಪೊಟ್ಯಾಸಿಯಮ್, ರಂಜಕ, ತಾಮ್ರ ಮತ್ತು ವಿಟಮಿನ್ ಬಿ -6 ನಂತಹ ವಿವಿಧ ಸೂಕ್ಷ್ಮ ಪೋಷಕಾಂಶಗಳನ್ನು ಒಳಗೊಂಡಿದೆ. ಇದರಲ್ಲಿನ ಮೊಲಾಸಿಸ್ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts