ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಇತ್ತೀಚಿಗೆ ಬಿಡುಗಡೆ ಮಾಡಿರುವ ನಿಯಮಗಳನ್ನು ಮೀರಿ ತನ್ನ ಸಿಬ್ಬಂದಿಯಿಂದ(ಮ್ಯಾನೇಜರ್) ಹೊರಗಿನ ಊಟ(ಫುಡ್ ಸಪ್ಲೈ) ತರಿಸಿಕೊಂಡಿದ್ದು, ನಿಯಮಗಳ ಉಲ್ಲಂಘನೆ ಮಾಡಿದ್ರಾ ವಿರಾಟ್ ಕೊಹ್ಲಿ? ಎಂಬ ಪ್ರಶ್ನೆ ಇದೀಗ ಮೂಡಿದೆ.
ಹೌದು, ಕಳೆದ ಕೆಲ ದಿನಗಳಿಂದೆ ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಕಳಪೆ ಪ್ರದರ್ಶನ ಹಿನ್ನೆಲೆ, ಆಟಗಾರರಿಗೆ ಪ್ರವಾಸಗಳ ಸಂದರ್ಭದಲ್ಲಿ ಪತ್ನಿಯರನ್ನು ಕರೆದೊಯ್ಯಬಾರದು ಎಂಬ ನಿಯಮ ಸೇರಿದಂತೆ ಕೆಲ ಕಠಿಣ ನಿರ್ಧಾರಗಳನ್ನು ಬಿಸಿಸಿಐ ಜಾರಿ ಮಾಡಿದೆ. ಅದರಲ್ಲಿ ‘ವೈಯಕ್ತಿಕ ಅಡುಗೆದಾರರು ಬೇಡ’ ಎಂಬ ನಿಯಮವಿದೆ. ಆದರೆ, ದುಬೈನಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ 2025ರ ಪ್ರವಾಸದ ವೇಳೆ ವಿರಾಟ್ಗೆ ಇದೀಗ ತಮ್ಮ ಲೋಕಲ್ ಮ್ಯಾನೇಜರ್ ಹೊರಗಿನಿಂದ ಕವರ್ವೊಂದನ್ನು ತಂದುಕೊಟ್ಟಿದೆ. ಅದರಲ್ಲಿ ಆಹಾರ ಇರುವುದು ಗೊತ್ತಾಗಿದೆ. ಹೀಗಾಗಿ,ವಿರಾಟ್ ಹೊರಗಿನಿಂದ ಊಟ ತರಿಸಿಕೊಳ್ಳುವ ಮೂಲಕ ಬಿಸಿಸಿಐ ಕೆಂಗಂಣ್ಣಿಗೆ ಗುರಿಯಾಗಿದ್ದಾರೆ. ಅಲ್ಲದೆ, ಇತರರ ಆಟಗಾರರಾದ ಹಾರ್ದಿಕ್ ಪಾಂಡ್ಯ ಮತ್ತು ಶ್ರೇಯಸ್ ಅಯ್ಯರ್ ಅವರಿಗೆ ಸಹಾಯ ಮಾಡಲು ಮುಂದಾದ ಸಿಬ್ಬಂದಿಗಳ ಮೇಲೆ ಕೂಡ ಬಿಸಿಸಿಐ ಕಿಡಿ ಕಾರಿದೆ.
ಇದನ್ನೂ ಓದಿ:ಬ್ಯೂಟಿ ಅಂದರೆ ಅರೆಬರೆ ಬಟ್ಟೆ ಧರಿಸಿ ದೇಹ… ಹಾಟ್ ಹನಿ ರೋಸ್ಗೆ ಹಿಗ್ಗಾಮುಗ್ಗಾ ತರಾಟೆ! Honey Rose
ಭಾರತ ತಂಡವು ಭಾನುವಾರ ದುಬೈನ ಐಸಿಸಿ ಅಕಾಡೆಮಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಅಭ್ಯಾಸ ಅವಧಿಯನ್ನು ಪ್ರಾರಂಭಿಸಿತು. ರೋಹಿತ್ ಶರ್ಮಾ ನೇತೃತ್ವದ ತಂಡವು ಗುರುವಾರ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧದ ತನ್ನ ಗ್ರೂಪ್ ಎ ಪಂದ್ಯದಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ, ನಂತರ ಅದೇ ಸ್ಥಳದಲ್ಲಿ ಪಾಕಿಸ್ತಾನ ವಿರುದ್ಧದ ರೋಮಾಂಚಕಾರಿ ಪಂದ್ಯ ನಡೆಯಲಿದೆ.(ಏಜೆನ್ಸೀಸ್)
IPL2025 ಸೀಸನ್ 18ಕ್ಕೆ ಮುಹೂರ್ತ ಫಿಕ್ಸ್; ಮೊದಲ ದಿನವೇ KKR VS RCB ಸೆಣಸಾಟ: ಎಲ್ಲಾ ಮ್ಯಾಚ್ಗಳ ಪಟ್ಟಿ ಇಲ್ಲಿದೆ..