22.8 C
Bengaluru
Monday, January 20, 2020

ಅನ್ನದೊಳಗಿನ ಬಗೆಯನು ಕಾಣಿರಣ್ಣ

Latest News

ಚುನಾವಣಾ ರಾಜಕೀಯದಿಂದ ನಿವೃತ್ತಿ ಬಗ್ಗೆ ಸಿಎಂ ನಮಗೇನೂ ಹೇಳಿಲ್ಲ: ಜೆ.ಸಿ.ಮಾಧುಸ್ವಾಮಿ

ಹಾಸನ: ಮೂರೂವರೆ ವರ್ಷದ ಬಳಿಕ ಸಿಎಂ ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವ ಬಗ್ಗೆ ನಮ್ಮೊಟ್ಟಿಗೆ ಯಾವುದೇ ವಿಚಾರ ಹೇಳಿಕೊಂಡಿಲ್ಲ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ...

ಬೆಣಕಲ್ ಗ್ರಾಮದಲ್ಲಿ ಹಳೆ ಮೂರ್ತಿ ಸ್ಥಾಪಿಸಿ

ವಿಜಯವಾಣಿ ಸುದ್ದಿಜಾಲ ಬಳ್ಳಾರಿ ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಶ್ರೀ ದುರುಗಮ್ಮ ಹಾಗೂ ಶ್ರೀ ಮರಿಗಮ್ಮ ದೇವಿಯವರ ಹಳೆ ಮೂರ್ತಿಗಳನ್ನು...

VIDEO| ನೃತ್ಯಗಾತಿಗೆ ಕೇವಲ 91 ವರ್ಷ, ಈ ವಿಡಿಯೋ ನೋಡಿದರೆ ವಯಸ್ಸು ಎನ್ನುವುದು ಬರಿ ನಂಬರ್​ ಮಾತ್ರ ಅನ್ನಿಸದೇ ಇರದು!

60 ಆಗುತ್ತಿದ್ದಂತೆ ಕೆಲವರು ನಮ್ಮದೇನು ಎಲ್ಲ ಮುಗಿಯಿತು. ಜೀವನ ನಿಂತೇ ಬಿಟ್ಟಿದೆ ಎನ್ನುತ್ತಾರೆ. ಕೆಲವೊಮ್ಮೆ ದೇಹ ಸಹಕರಿಸಲ್ಲ. ಆದರೆ ಕೆಲವೊಮ್ಮೆ ಇವರಿಗೆ ಮನಸ್ಸಿರುವುದಿಲ್ಲ! ಫೇಸ್​ಬುಕ್​ನಲ್ಲಿ ಅಮೆರಿಕದ ಗೋಲ್ಡನ್​...

LIVE| ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭ

ಭಾರತೀಯ ಜನತಾ ಪಾರ್ಟಿ(ಬಿಜೆಪಿ)ಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ಸೋಮವಾರ ಆರಂಭವಾಗಿದೆ. ಬಿಜೆಪಿಯ ಕಾರ್ಯಾಧ್ಯಕ್ಷರಾಗಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಜೆ.ಪಿ.ನಡ್ಡಾ ಅವರು ರಾಷ್ಟ್ರೀಯ...

ಬೆಕ್ಕು ಅಡ್ಡ ಬಂದರೆ ಕೆಲ ಹೊತ್ತು ನಿಲ್ಲುತ್ತೇವೆ, ಮೆಟ್ರೋಗೇ ಅಡ್ಡ ಬಂದರೆ; ನಾಲ್ಕು ದಿನಗಳಿಂದ ಅಲ್ಲೆ ಇದ್ದ ಬೆಕ್ಕಿಗೆ ಏನಾಯಿತು?

ತಿರುವನಂತಪುರ: ಎಲ್ಲಿಗಾದರೂ ಹೊರಟಾಗ ಬೆಕ್ಕು ಅಡ್ಡ ಬಂದರೆ ಸ್ವಲ್ಪ ಹೊತ್ತು ನಿಂತು ಹೋಗುವುದು ವಾಡಿಕೆ. ಆದರೆ ತಿರುವನಂತಪುರದಲ್ಲಿ ಮೆಟ್ರೋಗೆ ಬೆಕ್ಕು ಅಡ್ಡ ಬಂದಾಗ ಏನು ಮಾಡಬೇಕು...

ಅಕ್ಕಿಯೊಳಗನ್ನವನು ಮೊದಲಾರು ಕಂಡವರು? ಎಂದು ಡಿ.ವಿ.ಜಿಯವರು ಪ್ರಶ್ನಿಸಿದ್ದಾರೆ.ನಿಜ. ಅಕ್ಕಿಯಿಂದ ಅನ್ನವನ್ನು ಮಾಡುವ ಕೌಶಲವನ್ನು ಕಂಡವರಿಗೆ ಮೊದಲು ಶರಣೆನ್ನುತ್ತಾ, ಬಗೆ ಬಗೆಯ ಅನ್ನವನ್ನು ಹೇಗೆ ಮಾಡುವುದು ಎನ್ನುವುದನ್ನು ಇಲ್ಲಿ ನೋಡೋಣ.

ಪಾಲಕ್ ರೈಸ್

ಬೇಕಾಗುವ ಸಾಮಗ್ರಿ: ಕೆ.ಜಿ ಅಕ್ಕಿ, ಕಟ್ಟು ಪಾಲಕ್ ಸ್ವಲ್ಪ ಪುದಿನ ಸೊಪ್ಪು, 100 ಗ್ರಾಂ ಹಸಿ ಮೆಣಸಿನಕಾಯಿ, ಕಟ್ಟು ಕೊತ್ತಂಬರಿ, ಒಂದೂವರೆ ಚಮಚ ಅಡುಗೆ ಎಣ್ಣಿ, ಒಂದೂವರೆ ಇಂಚು ಹಸಿ ಶುಂಠಿ (ಅಲ್ಲಾ), 6 ರಿಂದ 8 ಲವಂಗ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಉಗುರು ಬೆಚ್ಚಗಿನ ನೀರಿನಲ್ಲಿ ಅರ್ಧ ಟೀ ಚಮಚ ಉಪ್ಪನ್ನು ಹಾಕಿ ಪಾಲಕ್ ಸೊಪ್ಪನ್ನು ತೊಳೆಯಬೇಕು. ನಂತರ ಹಸಿ ಮೆಣಸಿನಕಾಯಿ, ಪುದೀನಾ ಸೊಪ್ಪು ತುಸು ಬಿಸಿ ಮಾಡಿಕೊಂಡು ತೊಳೆದ ಪಾಲಕ್ ಸೊಪ್ಪಿನೊಂದಿಗೆ ಮಿಕ್ಸಿ ಜಾರಿನಲ್ಲಿ ಹಾಕಿಕೊಂಡು ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು.

ಒಂದು ಅಡುಗೆ ಪಾತ್ರೆಯನ್ನು ಒಲೆಯ ಮೇಲಿಟ್ಟು ಒಂದೂವರೆ ಚಮಚ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ ಲವಂಗ, ಹಸಿ ಶುಂಠಿಯ ಕತ್ತರಿಸಿದ ತುಂಡುಗಳನ್ನು ಹಾಕಿ, ನಂತರ ಪೇಸ್ಟ್ ಮಾಡಿದ ಪಾಲಕ್ ಸೊಪ್ಪನ್ನು ಹಾಕಿ ಚೆನ್ನಾಗಿ ತಾಳಿಸುವುದು. ತದನಂತರ ಅಕ್ಕಿಯ ಪ್ರಮಾಣಕ್ಕೆ ತಕ್ಕಂತೆ ನೀರು, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ನೀರು ಕುದಿಯಲು ಬಿಡುವುದು. ನಂತರ ಅಕ್ಕಿಯನ್ನು ಹಾಕಿ ಅನ್ನ ತಯಾರಿಸಿದಾಗ ರುಚಿಕರ ಪಾಲಕ್ ರೈಸ್ ತಿನ್ನಲು ಸಿದ್ಧವಾಗುತ್ತದೆ.

ಬೆಂಡೆ ರೈಸ್

ಬೇಕಾಗುವ ಸಾಮಗ್ರಿ:  1 ಕೆ ಜಿ ಅಕ್ಕಿ, 50 ಗ್ರಾಂ ಬೆಂಡೆಕಾಯಿ, ಈರುಳ್ಳಿ, ಸ್ವಲ್ಪ ಪುದಿನ ಸೊಪ್ಪು, 100 ಗ್ರಾಂ ಹಸಿ ಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ, ಜೀರಿಗೆ, 2 ಟೀ ಚಮಚ ಜೀರಿಗೆ ಪುಡಿ, 2ಟೀ ಚಮಚ ಖಾರದ ಪುಡಿ, 2 ಟೀ ಚಮಚ ಗರಮ ಮಸಾಲೆ ಪುಡಿ, 3 ಚಮಚ ಅಡುಗೆ ಎಣ್ಣಿ, ಒಂದೂವರೆ ಇಂಚು ಹಸಿ ಶುಂಠಿ (ಅಲ್ಲಾ) ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಉಗುರು ಬೆಚ್ಚಗಿನ ನೀರಿನಲ್ಲಿ ಬೆಂಡೆಕಾಯಿಯನ್ನು ತೊಳೆಯಬೇಕು. ನಂತರ ಹತ್ತಿ ಬಟ್ಟೆಯಿಂದ ಚೆನ್ನಾಗಿ ಒರೆಸಿಕೊಂಡು ಅಡ್ಡವಾಗಿ ಸೀಳಬೇಕು. ಅದಕ್ಕೆ ಖಾರದ ಪುಡಿ, ಮಸಾಲೆ ಪುಡಿ, ಜೀರಿಗೆ ಪುಡಿ ತುಂಬಬೇಕು. ಒಂದು ಅಡುಗೆ ಪಾತ್ರೆಯನ್ನು ಒಲೆಯ ಮೇಲಿಟ್ಟು 2 ಚಮಚ ಅಡುಗೆ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ ಮಸಾಲೆ ತುಂಬಿದ ಬೆಂಡೆಕಾಯಿಯನ್ನು ಎಣ್ಣೆಯಲ್ಲಿ ತಾಳಿಸಬೇಕು.

ತದನಂತರ ಮತ್ತೊಂದು ಅಡುಗೆ ಪಾತ್ರೆಯನ್ನು ಒಲೆಯ ಮೇಲಿಟ್ಟು 1 ಚಮಚ ಅಡುಗೆ ಎಣ್ಣೆ ಹಾಕಿ ಕಾಯಿಸಿ, ಅದಕ್ಕೆ ಹೆಚ್ಚಿಕೊಂಡ ಹಸಿ ಶುಂಠಿ, 1 ಟೀ ಚಮಚ ಜೀರಿಗೆ ಹಾಕಿ ತಾಳಿಸುವುದು. ಅಕ್ಕಿಯ ಪ್ರಮಾಣಕ್ಕೆ ತಕ್ಕಂತೆ ನೀರನ್ನು ಹಾಕಿ ಕುದಿಸಿ, ನಂತರ ಅಕ್ಕಿಯನ್ನು ಹಾಕಿ ಅನ್ನ ತಯಾರಿಸುವುದು. ನಂತರ ಅದಕ್ಕೆ ಎಣ್ಣಿಯಲ್ಲಿ ತಾಳಿಸಿದ ಬೆಂಡೆಕಾಯಿಯನ್ನು ಚುಚ್ಚಿ 5 ನಿಮಿಷ ಅನ್ನದ ಪಾತ್ರೆಯನ್ನು ಮುಚ್ಚಬೇಕು. ಈಗ ರುಚಿಕರ ಬೆಂಡೆ ರೈಸ್ ತಿನ್ನಲು ಸಿದ್ಧವಾಗುತ್ತದೆ.

ಪಂಜಾಬಿ ರೈಸ್

ಬೇಕಾಗುವ ಸಾಮಗ್ರಿ:  1 ಕೆ ಜಿ ಅಕ್ಕಿ, 100 ಗ್ರಾಂ ಹಸಿ ಮೆಣಸಿನಕಾಯಿ, 100 ಗ್ರಾಂ ಜೀರಿಗೆ, 100 ಗ್ರಾಂ ಟೊಮ್ಯಾಟೊ ಕಟ್ಟು ಕೊತ್ತಂಬರಿ, 3 ಚಮಚ ಅಡುಗೆ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಒಂದು ಅಡುಗೆ ಪಾತ್ರೆಯನ್ನು ಒಲೆಯ ಮೇಲಿಟ್ಟು ಎರಡು ಚಮಚ ಎಣ್ಣೆ ಹಾಕುವುದು, ಎಣ್ಣೆ ಕಾದ ನಂತರ 100 ಗ್ರಾಂ ಜೀರಿಗೆ, ಉದ್ದಗೆ ಹೆಚ್ಚಿಕೊಂಡ 100 ಗ್ರಾಂ ಹಸಿ ಮೆಣಸಿನಕಾಯಿ ಹಾಕಿ ಚೆನ್ನಾಗಿ ಒಗ್ಗರಣೆ ಹಾಕಿ, ನಂತರ ಒಣ ಅಕ್ಕಿಯನ್ನು ಅದರಲ್ಲಿ ಹಾಕಿ ಚೆನ್ನಾಗಿ ತಾಳಿಸುವುದು. ಈಗ ಅಕ್ಕಿಯ ಪ್ರಮಾಣಕ್ಕೆ ತಕ್ಕಂತೆ ನೀರು ಹಾಕಿ ಅನ್ನ ಕುದಿಸುವುದು.

ಅನ್ನವಾದ ನಂತರ ಒಂದು ಕಟ್ಟು ಕೊತ್ತಂಬರಿಯನ್ನು ಕತ್ತರಿಸಿಕೊಂಡು ಅನ್ನದ ಮೇಲೆ ಪೂರ್ಣ ಹರಡುವುದು. ನಂತರ 500 ಗ್ರಾಂ ಟೊಮ್ಯಾಟೋ ಹಣ್ಣನ್ನು ದುಂಡಾಗಿ ಚೀಪ್ಸ್ ಗಾತ್ರದಲ್ಲಿ ಕತ್ತರಿಕೊಂಡು ಆ ಅನ್ನದ ಮೇಲೆ ಪೂರ್ಣ ಮುಚ್ಚುವಂತೆ ಹರಡಬೇಕು. 10 ನಿಮಿಷ ಮುಚ್ಚಳದಿಂದ ಮುಚ್ಚಿಟ್ಟ ಬಳಿಕ ಘಮಘಮಿಸುವ ಪಂಜಾಬಿ ಅನ್ನ ತಿನ್ನಲು ಸಿದ್ಧವಾಗುತ್ತದೆ. ್ಣಾಭಗಳು: ದೇಹದಲ್ಲಿನ ಅಧಿಕ ಉಷ್ಣಾಂಶ ಹೊರಹಾಕುತ್ತದೆ. ಹುಳಿ ತೇಗು(ಆಮ್ಲತೆ) ನಿವಾರಣೆಯಾಗುತ್ತದೆ.

ಮೆಂತ್ಯ ಸೊಪ್ಪಿನ ರೈಸ್​ಬಾತ್

ಬೇಕಾಗುವ ಸಾಮಾಗ್ರಿಗಳು: ಮೆಂತ್ಯೆ ಸೊಪ್ಪಿನ ಕಟ್ಟು 2- 3, ಅಕ್ಕಿ 1 ಕಪ್, ಬೆಳ್ಳುಳ್ಳಿ 8-9 ಎಸಳು ಶುಂಠಿ 1 ಚಿಕ್ಕ ಪೀಸ್ ಹಸಿ ಮೆಣಸು 3 ಈರುಳ್ಳಿ 1 ಉದ್ದಿನ ಬೇಳೆ ಅರ್ಧ ಚಮಚ ಸ್ವಲ್ಪ ಸಾಸಿವೆ ಅರಿಶಿಣ ಪುಡಿ ಅರ್ಧ ಚಮಚ, ರುಚಿಗೆ ಉಪ್ಪು ಎಣ್ಣೆ 2 ಚಮಚ, ನಿಂಬೆರಸ ಅರ್ಧ ಚಮಚ

ತಯಾರಿಸುವ ವಿಧಾನ: ಮೊದಲು ಮೆಂತೆ ಸೊಪ್ಪನ್ನು ಕ್ಲೀನ್ ಮಾಡಿ ಇಡಿ. ನಂತರ ಅಕ್ಕಿಯನ್ನು ತೊಳೆದು 1 ಕಪ್ ಅಕ್ಕಿಗೆ 2 ಕಪ್ ನೀರು ಹಾಕಿ, ಚಿಟಿಕೆಯಷ್ಟು ಉಪ್ಪು ಹಾಕಿ 3 ವಿಶಲ್ ಬರುವವರೆಗೆ ಬೇಯಿಸಿ. ನಂತರ ಉರಿಯಿಂದ ಇಳಿಸಿ ಆರಲು ಇಡಿ.

ಬಾಣಲೆಯಲ್ಲಿ ಎಣ್ಣೆ ಹಾಕಿ, ನಂತರ ಸಾಸಿವೆ ಹಾಕಿ, ಸಾಸಿವೆ ಚಟಾಪಟ ಶಬ್ದ ಮಾಡುವಾಗ ಉದ್ದಿನ ಬೇಳೆ ಹಾಕಿ, ಈರುಳ್ಳಿ ಮತ್ತು ಬೆಳ್ಳುಳ್ಳಿ, ಹಸಿ ಮೆಣಸು, ಜಜ್ಜಿದ ಶುಂಠಿ ಹಾಕಿ ಈರುಳ್ಳಿ ಸ್ವಲ್ಪ ಕಂದು ಬಣ್ಣಕ್ಕೆ ಬದಲಾಗುವವರೆಗೆ ಫ್ರೖೆ ಮಾಡಿ. ನಂತರ ಮೆಂತ್ಯ ಸೊಪ್ಪು ಹಾಕಿ, ಅರಿಶಿಣ ಪುಡಿ, ಅರ್ಧ ಚಮಚ ಉಪ್ಪು ಹಾಕಿ ಫ್ರೖೆ ಮಾಡಿ, ಮೆಂತೆ ಸೊಪ್ಪು ಬೆಂದು ಮೆತ್ತಗಾಗುವವರೆಗೆ ಫ್ರೖೆ ಮಾಡಿ.

ನಂತರ ಉಪ್ಪು ನೋಡಿ, ಉಪ್ಪು ಬೇಕಿದ್ದರೆ ಸ್ವಲ್ಪ ಹಾಕಿ, ಉಪ್ಪು ಸ್ವಲ್ಪ ಅಧಿಕ ಅನಿಸುವಷ್ಟು ಇರಬೇಕು, ಆಗ ಅನ್ನದ ಜತೆ ಕಲೆಸಿದಾಗ ಉಪ್ಪು ಸರಿಯಾಗಿರುತ್ತದೆ. ನಂತರ ಉರಿಯಿಂದ ಇಳಿಸಿ. ್ಣಗ ಅನ್ನವನ್ನು ಸ್ವಲ್ಪ ದೊಡ್ಡ ಪಾತ್ರೆಗೆ ಹಾಕಿ, ಆ ಪಾತ್ರೆಗೆ ಫ್ರೖೆ ಮಾಡಿಟ್ಟ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿ, 1 ಚಮಚ ನಿಂಬೆ ರಸ ಹಾಕಿ ಮತ್ತೆ ಮಿಕ್ಸ್ ಮಾಡಿದರೆ ಸವಿ ರುಚಿಯ ಮೆಂತ್ಯ ಸೊಪ್ಪಿನ ಅನ್ನ ರೆಡಿ.

ಎಲಕೋಸು ರೈಸ್​ಬಾತ್

ಬೇಕಾಗುವ ದಾರ್ಥಗಳು: ಜೀರಿಗೆ ಅಕ್ಕಿ ಒಂದು ಲೋಟ, ಎಲೆ ಕೋಸು ಕತ್ತರಿಸಿದ್ದು 3- 4 ಬಟ್ಟಲು, ಹಸಿ ಬಟಾಣಿ ಅರ್ಧ ಬಟ್ಟಲು, ಸಾಸಿವೆ ಕಾಲು ಚಮಚ, ಜೀರಿಗೆ ಕಾಲು ಚಮಚ, ಶೇಂಗಾ ಬೀಜ ಸ್ವಲ್ಪ, ಬೆಳ್ಳುಳ್ಳಿ , ಶುಂಠಿ ಪೇಸ್ಟ್ ಒಂದು ಚಮಚ ಕಾರದ ಪುಡಿ ಎರಡು ಚಮಚ, ಧನಿಯ ಪುಡಿ ಒಂದು ದೊಡ್ಡ ಚಮಚ ಅರಿಶಿಣ ಪುಡಿ ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿದು ಸ್ವಲ್ಪ, ಉಪ್ಪ ರುಚಿಗೆ ತಕ್ಕಷ್ಟು, ಎಣ್ಣೆ ಸ್ವಲ್ಪ.

ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಸಾಸಿವೆ, ಜೀರಿಗೆ ಹಾಕಿ. ನಂತರ ಅದರಲ್ಲಿ ದಾಲ್ಚಿನಿ ಎಲೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿಕೊಂಡು, ಹೆಚ್ಚಿಟ್ಟ ಎಲೆ ಕೋಸು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ, ತೊಳೆದಿಟ್ಟ ಅಕ್ಕಿಯನ್ನು ಹಾಕಿ ಮೆತ್ತಗೆ ಕೈಯಾಡಿಸಬೇಕು. ನಂತರ ಅರಿಶಿನ ದನಿಯಪುಡಿ, ಖಾರ ಪುಡಿ ಉಪ್ಪನ್ನು ಸೇರಿಸಿಕೊಂಡು, ಅಕ್ಕಿಯ ಎರಡರಷ್ಟು ನೀರನ್ನು ಹಾಕಿ, ಬೇಯಿಸಬೇಕು.ಒಂದು ಕುದಿ ಬಂದ ಬಳಿಕ ಗಟ್ಟಿ ಮುಚ್ಚಳವನ್ನು ಹಾಕಿ, ‘ದಂ’ ಕೊಟ್ಟು ಇಪ್ಪತ್ತು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿದರೆ ಸಾಕು, ಅನ್ನ ಸವಿಯಲು ಸಿದ್ಧವಾಗುತ್ತದೆ.

ಕ್ಯಾರೆಟ್ ರೈಸ್​ಬಾತ್

ಬೇಕಾಗುವ ಪದಾರ್ಥಗಳು: ಅನ್ನ 2 ಕಪ್, ಉದ್ದ ಕತ್ತರಿಸಿದ ಕ್ಯಾರೆಟ್ 4-5, ಈರುಳ್ಳಿಗಳು 2, ಕ್ಯಾಪ್ಸಿಕಂ 1 ಹಸಿ ಮೆಣಸಿನ ಕಾಯಿ  4 5 ಬೆಳ್ಳುಳ್ಳಿ 2- 3, ಶುಂಠಿ 1 ಇಂಚು,  ಅರಿಶಿನ ಪುಡಿ 1 ಟೀ.ಚಮಚ ಕಾರದ ಪುಡಿ 1 ಟೀ.ಚಮಚ ಗರಂ ಮಸಾಲ ಅರ್ಧ ಟೀ.ಚಮಚ,  ಮೆಣಸು ಅರ್ಧ ಟೀ.ಚಮಚ (ಪುಡಿ ಮಾಡಿದಂತಹುದು) ಜೀರಿಗೆ ಅರ್ಧ ಟೀ.ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ 2 ಟೀ.ಚಮಚ ಕೊತ್ತಂಬರಿ ಸೊಪ್ಪು ಸ್ವಲ್ಪ.

ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಜೀರಿಗೆ ಹಾಕಿ, ನಂತರ ಈರುಳ್ಳಿಯನ್ನು ಹಾಕಿ, ಅದು ಕೆಂಪಾಗುವವರೆಗೆ ಹುರಿಯಿರಿ. ಈರುಳ್ಳಿ ಹೊಂಬಣ್ಣಕ್ಕೆ ತಿರುಗಿದಾಗ ಶುಂಠಿ, ಬೆಳ್ಳುಳ್ಳಿ, ಕ್ಯಾರೆಟ್​ವುತ್ತು ದಪ್ಪ ಮೆಣಸಿನ ಕಾಯಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಇಷ್ಟೆಲ್ಲಾ ಆದ ನಂತರ ಅದಕ್ಕೆ ರುಚಿಗಷ್ಟು ಉಪ್ಪು ಮತ್ತು ಅರಿಶಿಣ ಪುಡಿಯನ್ನು ಚಿಮುಕಿಸಿ.

ಇನ್ನು ಕಡಿಮೆ ಉರಿಯಲ್ಲಿ ಈ ಮಿಶ್ರಣವನ್ನು 4 -5 ನಿಮಿಷಗಳ ಕಾಲ ಚೆನ್ನಾಗಿ ಕಲೆಸುತ್ತ ಇರಿ. ಈ ತರಕಾರಿಗಳು ಸ್ವಲ್ಪ ಮೃದುವಾಗುವವರೆಗೂ ಇದನ್ನು ಮುಂದುವರಿಸಿ. ಈಗ ಇದಕ್ಕೆ ಮಸಾಲೆಯನ್ನು ಬೆರೆಸಿ, ಅಂದರೆ ಕರಿಮೆಣಸು, ಖಾರದ ಪುಡಿ, ಪಲಾವ್ ಮಸಾಲೆ, ಹಾಗೂ ಹಸಿ ಮೆಣಸಿನ ಕಾಯಿಗಳನ್ನು ಬೆರೆಸಿ, ಇದಕ್ಕೆ ಅನ್ನವನ್ನು ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದನ್ನು ಮಧ್ಯಮ ಗಾತ್ರದ ಉರಿಯ ಮೇಲೆ ಸ್ವಲ್ಪ ಹೊತ್ತು ಇಡಿ. ಕ್ಯಾರೆಟ್ ರೈಸ್ ಬಾತ್ ರೆಸಿಪಿ ಈಗ ಬಡಿಸಲು ಸಿದ್ಧವಾಗಿದೆ. ಇದರ ಮೇಲೆ ಅಲಂಕಾರಕ್ಕಾಗಿ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಚಿಮುಕಿಸಿ ಮತ್ತು ರಾಯಿತ ಅಥವಾ ಸಲಾಡ್ ಜತೆಗೆ ಬಿಸಿ ಬಿಸಿಯಾಗಿ ಬಡಿಸಿಕೊಳ್ಳಿ.

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...