ಫುಡ್ ಇನ್​ಸ್ಪೆಕ್ಟರ್ ನೇಮಕ ಎಂದು?: ಅನರ್ಹ ಬಿಪಿಎಲ್ ಕಾರ್ಡ್ ಪತ್ತೆಗೆ ಅಡ್ಡಿ, ಜಿಲ್ಲಾಡಳಿತ ಪ್ರಸ್ತಾವನೆ ನನೆಗುದಿಗೆ

ಬೆಳಗಾವಿ: ಅಕ್ರಮ ಬಿಪಿಎಲ್ ಕಾರ್ಡ್, ಆಹಾರಧಾನ್ಯ ದುರುಪಯೋಗ ತಡೆಗಟ್ಟುವ ಉದ್ದೇಶದಿಂದ ಹೋಬಳಿ ಮಟ್ಟದಲ್ಲಿ ಓರ್ವ ‘ಫುಡ್ ಇನ್​ಸ್ಪೆಕ್ಟರ್’ ನೇಮಿಸಲು ಮುಂದಾಗಿದ್ದ ರಾಜ್ಯ ಸರ್ಕಾರ ಇದೀಗ ಆರ್ಥಿಕ ಸಮಸ್ಯೆ ಸೇರಿ ಇತರ ಕಾರಣ ಮುಂದೊಡ್ಡಿ ಹುದ್ದೆ ನೇಮಕಾತಿಯನ್ನೇ ಕೈಬಿಟ್ಟಿದೆ.

ರಾಜ್ಯದಲ್ಲಿ 1.26 ಕೋಟಿಗೂ ಅಧಿಕ ಕುಟುಂಬಗಳು ಪಡಿತರ ಧಾನ್ಯ ಪಡೆಯುತ್ತಿದ್ದು, ಆ ಪೈಕಿ 1.15 ಕೋಟಿ ಬಿಪಿಎಲ್, 10.90 ಲಕ್ಷ ಅಂತ್ಯೋದಯ, 50 ಲಕ್ಷಕ್ಕೂ ಅಧಿಕ ಕುಟುಂಬಗಳು ಎಪಿಎಲ್ ಕಾರ್ಡ್ ಹೊಂದಿವೆ. ಸರ್ಕಾರದ ಸೌಲಭ್ಯ ಪಡೆದುಕೊಳ್ಳುವುದಕ್ಕಾಗಿ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಗಿಟ್ಟಿಸಿಕೊಳ್ಳಲು ಲಕ್ಷಾಂತರ ಕುಟುಂಬಗಳು ಯತ್ನಿಸುತ್ತಿವೆ. ಗ್ರಾಮೀಣ ಮಟ್ಟದಲ್ಲೇ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೋಬಳಿ ಮಟ್ಟದಲ್ಲಿ ಓರ್ವ ಫುಡ್ ಇನ್​ಸ್ಪೆಕ್ಟರ್ ನೇಮಿಸುವಂತೆ 2017ರಲ್ಲೇ ಬೆಳಗಾವಿ ಸೇರಿ ರಾಜ್ಯದ 13 ಜಿಲ್ಲಾಡಳಿತಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ ಈ ಪ್ರಸ್ತಾವಿತ ಹುದ್ದೆ ನೇಮಕಾತಿಗೆ ಈಗ ಹಿನ್ನಡೆ ಆಗಿದೆ ಎಂದು ಆಹಾರ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸಿಬ್ಬಂದಿ ಕೊರತೆ: ರಾಜ್ಯದಲ್ಲಿ 160ಕ್ಕೂ ಅಧಿಕ ತಾಲೂಕುಗಳಲ್ಲಿ ಫುಡ್ ಇನ್​ಸ್ಪೆಕ್ಟರ್ ಹುದ್ದೆಗಳು ಖಾಲಿ ಇವೆ. ಕೆಲ ತಾಲೂಕುಗಳಲ್ಲಿ ಇಬ್ಬರ ಕಾರ್ಯ ವನ್ನು ಒಬ್ಬರೇ ಫುಡ್ ಇನ್​ಸ್ಪೆಕ್ಟರ್ ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಕೆಲವೆಡೆ ಶಿರಸ್ತೇದಾರರು ಹೆಚ್ಚುವರಿ ಕೆಲಸ ಮಾಡುವಂತಾಗಿದೆ. ಈಗಾಗಲೇ ಖಾಲಿ ಉಳಿದಿರುವ ವಿವಿಧ ವೃಂದದ ಹುದ್ದೆ ಭರ್ತಿ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಿಬ್ಬಂದಿ ಕೊರತೆಯಿಂದ ಬಿಪಿಎಲ್ ಕಾರ್ಡ್ ಅಕ್ರಮ ತಡೆಹಿಡಿಯುವುದು ಕಷ್ಟವಾಗುತ್ತಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಫುಡ್ ಇನ್​ಸ್ಪೆಕ್ಟರ್ ನೇಮಕ ಎಂದು?: ಅನರ್ಹ ಬಿಪಿಎಲ್ ಕಾರ್ಡ್ ಪತ್ತೆಗೆ ಅಡ್ಡಿ, ಜಿಲ್ಲಾಡಳಿತ ಪ್ರಸ್ತಾವನೆ ನನೆಗುದಿಗೆಬೊಕ್ಕಸಕ್ಕೆ ಭಾರ: ಬೆಳಗಾವಿ, ವಿಜಯಪುರ, ಬೆಂಗಳೂರು, ಮೈಸೂರು, ಕಲಬುರಗಿ, ಬೀದರ್, ವಿಜಯಪುರ ಸೇರಿ ಪ್ರಮುಖ ಜಿಲ್ಲೆಗಳಲ್ಲಿ ಕುಟುಂಬಗಳ ಸಂಖ್ಯೆಗಿಂತ ಬಿಪಿಎಲ್ ಕಾರ್ಡ್ ಸಂಖ್ಯೆಯೇ ಹೆಚ್ಚಾಗುತ್ತಿದೆ. ಕೆಲವು ಕಡೆ ಸರ್ಕಾರಿ ಸಬ್ಸಿಡಿ ಸೌಲಭ್ಯ, ಆರೋಗ್ಯ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳಲು ಬಿಪಿಎಲ್ ಕಾರ್ಡ್ ಮಾಡಿಸಿಕೊಳ್ಳಲಾಗುತ್ತಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕವಾಗಿ ಕೋಟ್ಯಂತರ ರೂ. ನಷ್ಟ ಉಂಟಾಗುತ್ತಿದೆ.

ಹೋಬಳಿ ಮಟ್ಟದಲ್ಲೊಬ್ಬ ಫುಡ್ ಇನ್​ಸ್ಪೆಕ್ಟರ್ ನೇಮಕ ವಿಷಯ ಅನುಷ್ಠಾನಕ್ಕೆ ಬಂದಿಲ್ಲ. ಸರ್ಕಾರದ ಮಟ್ಟದಲ್ಲಿ ಪರಿಶೀಲನೆ ಹಂತದಲ್ಲಿದೆ. ತಾಲೂಕು ಮಟ್ಟದಲ್ಲಿಯೂ ಫುಡ್ ಇನ್​ಸ್ಪೆಕ್ಟರ್ ಹುದ್ದೆ ಖಾಲಿ ಇವೆ. ಅನರ್ಹರಿಗೆ ವಿತರಣೆಯಾಗಿರುವ ಬಿಪಿಎಲ್ ಕಾರ್ಡ್ ವಶಕ್ಕೆ ಪಡೆಯಲಾಗುತ್ತಿದೆ.

| ಚನ್ನಬಸಪ್ಪ ವೆಂ. ಕೊಡ್ಲಿ ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ, ಬೆಳಗಾವಿ

 

ಮಂಜುನಾಥ ಕೋಳಿಗುಡ್ಡ

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…