Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ತೊಗರಿ ಕಲಬೆರಕೆಕೋರರ ವಿರುದ್ಧ ಖಡಕ್ ಕ್ರಮ

Thursday, 06.12.2018, 5:10 AM       No Comments

ಬೆಂಗಳೂರು: ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ವಿತರಿಸಲಾಗುತ್ತಿರುವ ತೊಗರಿ ಬೇಳೆಗೆ ಜೀವಕ್ಕೆ ಸಂಚಕಾರ ತರುವ ಕೇಸರಿ ಬೇಳೆ ಬೆರೆಸಿ ಮಾರುತ್ತಿರುವ ಬಗ್ಗೆ ತಕ್ಷಣವೇ ವರದಿ ಕೊಡಿ ಎಂದು ಆಹಾರ ಇಲಾಖೆ ಅಧಿಕಾರಿಗಳಿಗೆ ಸರ್ಕಾರ ಖಡಕ್ ಸೂಚನೆ ನೀಡಿದೆ.

ಬಡವರ ಹಸಿವು ನೀಗಿಸಲು ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದರೆ, ಅದರಲ್ಲೇ ದುಡ್ಡು ಹೊಡೆಯಲು ತೊಗರಿ ಬೇಳೆಗೆ ವಿಷಕಾರಿ ಅಂಶವುಳ್ಳ ಕೇಸರಿ ಬೇಳೆ ಬೆರೆಸುತ್ತಿರುವ ಕುರಿತು ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ 247 ತನಿಖಾ ವರದಿ ಪ್ರಕಟಿಸಿತ್ತು. ಈ ವರದಿ ಗಮನಿಸಿದ ಆಹಾರ ಸಚಿವ ಜಮೀರ್ ಅಹಮದ್ ಖಾನ್, ತಕ್ಷಣ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಪ್ರಕಟಿಸಿರುವ ವರದಿಗಳನ್ನು ನಾನು ನೋಡಿದ್ದು, ಅಧಿಕಾರಿಗಳಿಂದ ಸಂಪೂರ್ಣ ವರದಿ ಕೇಳಿದ್ದೇನೆ. ಬಡವರು ತಿನ್ನುವ ಅನ್ನದಲ್ಲಿ ಕಲಬೆರಕೆಯಾದರೆ ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ವರದಿಯಲ್ಲಿ ಕಲಬೆರಕೆಯಾಗಿದ್ದು ದೃಢಪಟ್ಟರೆ ನಿಶ್ಚಿತವಾಗಿಯೂ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ’ ಎಂದು ಸಚಿವ ಜಮೀರ್ ಪ್ರತಿಕ್ರಿಯಿಸಿದ್ದಾರೆ.

ಅಲ್ಲದೆ, ಆರೋಗ್ಯ ಇಲಾಖೆಯು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ವಿಷಪೂರಿತ ಕೇಸರಿ ಬೇಳೆಯನ್ನು ಎಲ್ಲಿ ಮತ್ತು ಯಾರು ಸರಬ ರಾಜು ಮಾಡುತ್ತಿದ್ದಾರೆ ಎಂಬುದನ್ನು ಪತ್ತೆ ಮಾಡುವಂತೆ ಅಧೀನ ಅಧಿಕಾರಿ ಗಳಿಗೆ ಉನ್ನತ ಅಧಿಕಾರಿಗಳು ಸೂಚನೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.

ತನಿಖಾ ವರದಿಯಲ್ಲೇನಿತ್ತು?

ಕೇಸರಿ ಬೇಳೆ ಕಲಬೆರಕೆಯಿಂದ ನರವಿಷದ ಕಾಯಿಲೆ, ಬೆನ್ನುಹುರಿ ಸಮಸ್ಯೆ, ಪಾರ್ಶ್ವವಾಯು ಇತ್ಯಾದಿ ರೋಗಗಳು ಕಾಣಿಸಿಕೊಳ್ಳಬಹುದು. ವಿಜಯಪುರ, ಬೀದರ್, ಕಲಬುರಗಿ, ಬೆಂಗಳೂರಲ್ಲಿ ಈ ದಂಧೆ ಅವ್ಯಾಹತವಾಗಿ ನಡೆಯು ತ್ತಿದೆ. ಕಮಿಷನ್ ಆಸೆಗಾಗಿ ಡೀಲರ್ ಗಳು, ಅಧಿಕಾರಿಗಳು, ನ್ಯಾಯಬೆಲೆ ಅಂಗಡಿ ಮಾಲೀಕರು ಈ ಪ್ರಕರಣ ದಲ್ಲಿ ಭಾಗಿಯಾಗಿದ್ದಾರೆ ಎಂದು ತನಿಖಾ ವರದಿ ಬಯಲು ಮಾಡಿತ್ತು.

ರಾಜ್ಯ ಸರ್ಕಾರದಲ್ಲೇ ಇಷ್ಟೊಂದು ಕಲಬೆರಕೆ ಇರಬೇಕಾದ್ರೆ ನಾನು ತೊಗರಿ ಬೇಳೆ ಕಲಬೆರಕೆ ಬಗ್ಗೆ ಏನು ಹೇಳಲಿ? ಬರುವ ದಿನಗಳಲ್ಲಿ ಏನೇನು ಅನುಭವಿಸಬೇಕೋ?

| ಕೆ.ಎಸ್.ಈಶ್ವರಪ್ಪ ಮಾಜಿ ಡಿಸಿಎಂ

ಕಲಬುರಗಿಯಲ್ಲಿ ತುರ್ತು ಸಭೆ

ಕಲಬುರಗಿ: ಅನ್ನಭಾಗ್ಯದ ತೊಗರಿಯಲ್ಲಿ ಕೇಸರಿ ಬೇಳೆ ಕಲಬೆರಕೆ ಮಾಡಲಾಗುತ್ತಿದೆ ಎಂಬ ತನಿಖಾ ವರದಿಯಿಂದ ಎಚ್ಚೆತ್ತ ಇಲ್ಲಿನ ಜಿಲ್ಲಾಡಳಿತ ಬುಧವಾರ ಸಂಜೆ ತುರ್ತು ಸಭೆ ನಡೆಸಿದ್ದು, ಕಲಬೆರಕೆ ಯಾಗುತ್ತಿದ್ದರೆ ತಡೆಯಲು ಸೂಕ್ತ ಕ್ರಮಕೈಗೊಳ್ಳಲು ನಿರ್ಧರಿಸ ಲಾಯಿತು. ನಗರದ ವಿಕಾಸ ಭವನದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ. ರಾಮೇಶ್ವರಪ್ಪ ನೇತೃತ್ವದಲ್ಲಿ ಸಭೆ ನಡೆದಿದೆ. ಆಹಾರ ಇಲಾಖೆ, ಆಹಾರ ಸುರಕ್ಷತಾ ಅಂಕಿತ ಅಧಿಕಾರಿಗಳು, ಪ್ರಯೋಗಾಲಯ ತಜ್ಞರು, ದಾಲ್​ವಿುಲ್ ಮಾಲೀಕರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

ಎಲ್ಲ ದಾಲ್​ವಿುಲ್​ನವರು ಸರ್ಕಾರಕ್ಕೆ ಬೇಳೆ ಪೂರೈಸಲ್ಲ. ಒಬ್ಬಿಬ್ಬರು ಸರಬರಾಜು ಮಾಡುವುದರಿಂದ ಎಲ್ಲರನ್ನೂ ಅನುಮಾನಿಸುವುದು ಸರಿಯಲ್ಲ ಎಂದು ಮಿಲ್ ಮಾಲೀಕರು ಅಭಿಪ್ರಾಯ ವ್ಯಕ್ತಪಡಿಸಿದರು. ಬಳ್ಳಾರಿ ಜಿಲ್ಲೆಯಿಂದ ಬಂದ ಕೆಲವು ತೊಗರಿ ಪ್ಯಾಕೇಟ್​ಗಳಲ್ಲಿ ಕಲಬೆರಕೆ ಆಗಿರುವ ಸಂಶಯವನ್ನು ಸಭೆಯಲ್ಲಿದ್ದವರು ವ್ಯಕ್ತಪಡಿಸಿದರು. ಪ್ರಯೋಗಾಲಯದಿಂದ ವರದಿ ಪಡೆದು ಮುಂದಿನ ಹೆಜ್ಜೆ ಇರಿಸಲಾಗುವುದು. ತಪು್ಪ ಕಂಡುಬಂದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ರಾಮೇಶ್ವರಪ್ಪ ತಿಳಿಸಿದರು.

Leave a Reply

Your email address will not be published. Required fields are marked *

Back To Top