More

    ಬಿಸಿಯೂಟ ತಯಾರಿಸುವಾಗ ಸುರಕ್ಷತಾ ಕ್ರಮ ಅನುಸರಿಸಿ

    ಬಾದಾಮಿ: ಶಾಲೆಯಲ್ಲಿ ಬಿಸಿಯೂಟ ತಯಾರಿಸುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ತಾಲೂಕು ಅಕ್ಷರದಾಸೋಹ ಯೋಜನೆ ಸಹಾಯಕ ನಿರ್ದೇಶಕ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ.ದೊಡ್ಡಪ್ಪನ್ನವರ ಮುಖ್ಯಶಿಕ್ಷಕರಿಗೆ ಸಲಹೆ ನೀಡಿದರು.

    ತಾಲೂಕು ಆರೋಗ್ಯಾಧಿಕಾರಿಗಳ ಸಭಾಭವನದಲ್ಲಿ ತಾ.ಪಂ., ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಪಿಎಂ ಪೋಷಣ ಅಭಿಯಾನ ಯೋಜನೆಯಡಿ ಮುಖ್ಯಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

    ಇದನ್ನೂ ಓದಿ: ರಬಕವಿ-ಬನಹಟ್ಟಿಯಲ್ಲಿ ನಾಗರಪಂಚಮಿ ಸಂಭ್ರಮ

    ಬಿಸಿಯೂಟ ಸಿಬ್ಬಂದಿಗೆ ಅರಿವು ಮತ್ತು ಜ್ಞಾನವನ್ನು ಹೆಚ್ಚಿಸುವುದು ತರಬೇತಿ ಉದ್ದೇಶವಾಗಿದೆ. ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ.

    ಜನೆ ಯಶಸ್ಸಿನಲ್ಲಿ ತಾಲೂಕುಮಟ್ಟದ ಅಧಿಕಾರಿಗಳು, ಎಸ್‌ಡಿಎಂಸಿ, ಮುಖ್ಯಶಿಕ್ಷಕರು, ತಾಯಂದಿರ ಸಮಿತಿ, ಅಡುಗೆ ಸಿಬ್ಬಂದಿ ಪಾತ್ರ ಮಹತ್ತರವಾಗಿದೆ.

    ಹಾರದ ಸುರಕ್ಷತೆ, ಪೌಷ್ಟಿಕಾಂಶ, ರುಚಿ ಮತ್ತು ಮಿತವ್ಯಯ ಈ 4 ಅಂಶಗಳನ್ನು ಗಮನಿಸಬೇಕಾಗಿದೆ. ಸ್ವಚ್ಛತೆ, ರುಚಿ ಮತ್ತು ಸುರಕ್ಷತೆ ಬಗ್ಗೆ ವಿಶೇಷ ಗಮನ ನೀಡಬೇಕು.

    ಬಿಸಿಯೂಟ ತಯಾರಿಸಿದ ನಂತರ ಮಕ್ಕಳಿಗೆ ನೀಡುವ ಪೂರ್ವದಲ್ಲಿ ಶಿಕ್ಷಕರು ರುಚಿ ನೋಡಬೇಕು. ವಿದ್ಯಾರ್ಥಿಗಳನ್ನು ಸರದಿ ಸಾಲಿನಲ್ಲಿ ಕುಳ್ಳರಿಸಿ ಊಟ ನೀಡಬೇಕು. ಸ್ವಚ್ಛವಾಗಿ ಕೈತೊಳೆದುಕೊಳ್ಳಬೇಕು.

    ಸಿಬ್ಬಂದಿ ನಗುವಿನೊಂದಿಗೆ ಮಕ್ಕಳಿಗೆ ಊಟಕ್ಕೆ ಬಡಿಸಬೇಕು ಎಂದು ಹೇಳಿದರು. ತರಬೇತಿ ಕಾರ್ಯಾಗಾರದಲ್ಲಿ ದೃಶ್ಯಾವಳಿಗಳ ಮೂಲಕ ತರಬೇತಿ ನೀಡಲಾಯಿತು.

    ಇದನ್ನು ಓದಿ: ಮಾರುತೇಶ್ವರ ಮೂರ್ತಿ, ಕಲಶದ ಮೆರವಣಿಗೆ

    ಶಿಕ್ಷಣ ಸಂಯೋಜಕ ವಿ.ಎಸ್.ಹಿರೇಮಠ, ಮುಖ್ಯಶಿಕ್ಷಕ ಪಿ.ಎ.ಹಿರೇಮಠ ಹಾಜರಿದ್ದರು. ತರಬೇತಿ ಕಾರ್ಯಾಗಾರದಲ್ಲಿ ಬಾದಾಮಿ ವಲಯದ ಎಲ್ಲ ಶಾಲೆ ಮುಖ್ಯಶಿಕ್ಷಕರು ಇದ್ದರು.

    ಬಾದಾಮಿ ತಾಲೂಕಿನ ಬಾದಾಮಿ, ಕುಳಗೇರಿ, ಕೆರೂರ, ಗುಳೇದಗುಡ್ಡ, ಕಟಗೇರಿ ವಲಯಗಳಲ್ಲಿ ಏಕಕಾಲದಲ್ಲಿ ಮುಖ್ಯಶಿಕ್ಷಕರಿಗೆ ತರಬೇತಿ ನೀಡಲಾಯಿತು. ತರಬೇತಿ ಸಂಪನ್ಮೂಲ ವ್ಯಕ್ತಿಗಳಾದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಎಂ.ಎ.ಹದ್ಲಿ, ಜೆ.ಎ.ಶೇಖ್, ಎಸ್.ಎಸ್.ಯಲಿಗಾರ, ಬಿ.ಎ್.ಕುಂಬಾರ ತರಬೇತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts