ರಾಣೆಬೆನ್ನೂರ: ಜಾನಪದ ಸಂಸತಿ ಉಳಿಸಿ ಬೆಳಸಬೇಕು ಎಂಬ ಚಿಂತನೆ ಪ್ರತಿಯೊಬ್ಬರೂ ಮೂಡಬೇಕು. ಅನೇಕ ಸಾಧು ಸಂತರು ಆಳಿ ಹೋಗಿರುವ ಹಾವೇರಿ ರಾಜ್ಯದಲ್ಲಿಯೆ ಜಾನಪದ ಸಂಸತಿಗೆ ಹೆಸರುವಾಸಿಯಾಗಿದೆ ಎಂದು ಜಾನಪದ ವಿದ್ವಾಂಸ ಕೆ.ಸಿ. ನಾಗರಜ್ಜಿ ಹೇಳಿದರು.
ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನಲ್ಲಿ ಮಂಗಳವಾರ ಏರ್ಪಡಿಸಿದ್ದ ಜಾನಪದ ಉತ್ಸವ ಹಾಗೂ ಒಂದನೇ ಮಹಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದಿನ ಮಕ್ಕಳಿಗೆ ಹಿಂದಿನ ಜಾನಪದ ಕಲೆಗಳ ಕುರಿತು ಪರಿಚಯ ಮಾಡಿಕೊಡುವ ಅಗತ್ಯವಿದೆ. ಜಾನಪದ ಸಂಸತಿ ತಾಯಿ ಇದ್ದಂತೆ ಅದನ್ನು ಸದಾ ಗೌರವದಿಂದ ಕಾಣುವಂತಹ ವಾತಾವರಣ ನಿರ್ಮಾಣ ಮಾಡಬೇಕು. ಅಂದಾಗ ಜಾನಪದ ಸಂಸತಿಗೆ ಆದ್ಯತೆ ನೀಡಿದಂತಾಗುತ್ತದೆ ಎಂದರು.
ಪ್ರಾಚಾರ್ಯ ರವಿಕುಮಾರ ನಾಯಕ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಲಯದ ಮಕ್ಕಳಿಗೆ ವಿವಿಧ ಸಾಂಸತಿಕ ಕಾರ್ಯಕ್ರಮ ಜರುಗಿದವು.
ವಿದ್ಯಾಲಯದ ಸಾಂಸತಿಕ ವಿಭಾಗದ ಸಂಚಾಲಕ ಡಾ. ಎಲ್.ಎಂ. ಪೂಜಾರ, ಕಾರ್ಯಕ್ರಮದ ಸಂಚಾಲಕ ಚಂದ್ರಶೇಖರ ಅಕ್ಕಿ, ಉಪನ್ಯಾಸಕರಾದ ಡಾ. ವೆಂಕಟೇಶ ಎಂ., ಡಾ. ರಮೇಶ ರಾಠೋಡ, ತನುಜಾ ಭಜಂತ್ರಿ, ಡಾ. ವಿಜಯಲಕ್ಷಿ$್ಮ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
