ಜಾನಪದದ ರಂಗು ನೀಡಿದ ಶಾಲಾ ವಿದ್ಯಾರ್ಥಿಗಳು

ಮಡಿಕೇರಿ: ತಾಲೂಕು ಮಟ್ಟದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 28 ಶಾಲಾ ತಂಡಗಳ 176 ವಿದ್ಯಾರ್ಥಿಗಳು ವೈವಿಧ್ಯಮಯ ಪ್ರದರ್ಶನ ನೀಡಿ ಜಾನಪದದ ರಂಗು ಬೀರಿದರು.

ನಗರದ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ತಾಲೂಕು ಜಾನಪದ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಜಾನಪದ ಸಮೂಹ ನೃತ್ಯ ಸ್ಪರ್ಧೆಯ ವಿಜೇತರಿಗೆ ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕ ಅಂಬೆಕಲ್ ವಿನೋದ್ ಕುಶಾಲಪ್ಪ ಮತ್ತು ಜಾನಪದ ಪರಿಷತ್ ನಿರ್ದೇಶಕ ಹಾ.ತಿ.ಜಯಪ್ರಕಾಶ್ ಬಹುಮಾನ ವಿತರಿಸಿದರು.

1ರಿಂದ 4ನೇ ತರಗತಿ ವಿಭಾಗ: ಜ್ಞಾನಜ್ಯೋತಿ ಶಾಲಾ ತಂಡ ಮೂರ್ನಾಡು (ಪ್ರ), ಮಡಿಕೇರಿಯ ಜನರಲ್ ತಿಮ್ಮಯ್ಯ ಶಾಲಾ ತಂಡ(ದ್ವಿ), ಮಡಿಕೇರಿಯ ಸಂತಜೋಸೇಫರ ಶಾಲಾ ತಂಡ (ತೃ), ಸಂತಜೋಸೇಫರ ಶಾಲಾ ತಂಡ (ಚಾಮುಂಡಿ ತಂಡ) ಮಡಿಕೇರಿ, ಸರ್ಕಾರಿ ಮಾದರಿ ಪ್ರಾಧಮಿಕ ಶಾಲೆ ಮಡಿಕೇರಿ ತಂಡ ಸಮಧಾನಕರ ಬಹುಮಾನ ಗಳಿಸಿದವು.

5ರಿಂದ 7ನೇ ತರಗತಿ ವಿಭಾಗ: ಸಂತಜೋಸೇಫರ ಕಾನ್ವೆಂಟ್ ಮಡಿಕೇರಿ(ಪ್ರ), ಜ್ಞಾನಜ್ಯೋತಿ ವಿದ್ಯಾಸಂಸ್ಥೆ ಭಾಗಮಂಡಲ(ದ್ವಿ), ಕಡಗದಾಳು ಸರ್ಕಾರಿ ಪ್ರಾಥಮಿಕ ಶಾಲಾ ತಂಡ(ತೃ) ನಾಪೋಕ್ಲುವಿನ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲಾ ತಂಡ, ಮಡಿಕೇರಿಯ ಸರ್ಕಾರಿ ಮಾದರಿ ಪ್ರಾಧಮಿಕ ಶಾಲಾ ತಂಡ ತಂಡ ಸಮಧಾನಕರ ಬಹುಮಾನ ಪಡೆದುಕೊಂಡವು.

8 ರಿಂದ 10 ನೇ ತರಗತಿ ವಿಭಾಗ: ಭಾಗಮಂಡಲದ ಜ್ಞಾನಜ್ಯೋತಿ ಶಾಲಾ ತಂಡ (ಪ್ರ), ಕಡಗದಾಳು ಪ್ರೌಢಶಾಲಾ ತಂಡ(ದ್ವಿ), ಮೂರ್ನಾಡುವಿನ ಜ್ಞಾನಜ್ಯೋತಿ ಶಾಲಾ ತಂಡ (ತೃ) ಬಹುಮಾನ ಪಡೆದುಕೊಂಡಿತು.

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಎಚ್.ಟಿ.ಅನಿಲ್, ಖಜಾಂಜಿ ಅಂಬೆಕಲ್ ನವೀನ್ ಕುಶಾಲಪ್ಪ, ಕಾರ್ಯಕ್ರಮದ ಸಂಚಾಲಕಿ ಕೆ.ಜಯಲಕ್ಷ್ಮೀ, ಹೇಮಾವತಿ ಹಾಜರಿದ್ದರು. ತೀರ್ಪುಗಾರರಾಗಿ ಕುಶಾಲನಗರದ ಶಿಕ್ಷಕಿ ಶ್ರೇಣಿ, ವಿರಾಜಪೇಟೆಯ ಜೆನಿಫರ್, ಧನಲಕ್ಷ್ಮೀ ಕಾರ್ಯನಿರ್ವಹಿಸಿದ್ದರು.