ಹಳ್ಳಿಗಳೇ ಜಾನಪದ ಸೊಗಡಿನ ನೆಲೆ

ಮಹಾಲಿಂಗಪುರ: ಗ್ರಾಮೀಣ ಪ್ರದೇಶಗಳು ಜಾನಪದವನ್ನು ಪೋಷಿಸಿ ಬೆಳೆಸುತ್ತಿರುವ ಮೂಲ ಕೇಂದ್ರಗಳು. ಜಾನಪದ ಸೊಗಡನ್ನು ಗ್ರಾಮೀಣ ಪ್ರದೇಶದಲ್ಲಿಯೇ ಕಾಣಬಹುದು ಎಂದು ಶಾಸಕ ಸಿದ್ದು ಸವದಿ ಹೇಳಿದರು.

ಸಮೀಪದ ಢವಳೇಶ್ವರ ಗ್ರಾಮದಲ್ಲಿ ಕರ್ನಾಟಕ ಜಾನಪದ ಪರಿಷತ್, ಢವಳೇಶ್ವರ ಗ್ರಾಪಂ ಹಾಗೂ ಪಿಕೆಪಿಎಸ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಾಲಿಂಗಪುರ ಕಜಾಪ ವಲಯ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಸಂಸ್ಕೃತಿ ಮನುಷ್ಯನ ಬದುಕಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ತಲೆಮಾರುಗಳಿಂದ ಬಂದಿರುವ ಮೌಖಿಕ ಪರಂಪರೆಯ ಸಂಸ್ಕೃತಿ ಉಳಿಸಿ, ಬೆಳೆಸಬೇಕಾಗಿದೆ ಎಂದು ಹೇಳಿದರು.

ಕಜಾಪ ವಲಯ ಅಧ್ಯಕ್ಷ ಬಸವರಾಜ ಮೇಟಿ ಮಾತನಾಡಿ, ಭಾರತದಲ್ಲಿಯೇ ಕರ್ನಾಟಕ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಮಹಾಲಿಂಗೇಶ್ವರ ಮಠದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮಾತನಾಡಿ, ಸಂಸ್ಕೃತಿಯನ್ನು ಹೊಸ ಪೀಳಿಗೆಗೆ ಮುಟ್ಟಿಸುತ್ತಿರುವ ಬಸವರಾಜ ಮೇಟಿ ಮತ್ತು ಅಣ್ಣಾಜಿ ಪಢತಾರೆ ಅವರ ಶ್ಲಾಘನೀಯ ಎಂದು ಹೇಳಿದರು.

ಮಹಾಲಿಂಗಪುರದ ಕರಡಿಯವರ ಮನೆತನದ ಬಾಲಕಲಾವಿದರ ಕರಡಿ ಮೇಳ ಗಮನ ಸೆಳೆಯಿತು. ಭಜನಾ ಮೇಳ, ಹಂತಿ ಮೇಳ ಮತ್ತು ಗಾಯನ ಸಂಘ, ಮುಂತಾದ ತಂಡಗಳು ಭಾಗವಹಿಸಿದ್ದವು.

ಢವಳೇಶ್ವರ ಗ್ರಾಪಂ ಅಧ್ಯಕ್ಷ ಬನಪ್ಪಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಲ್ಲಪ್ಪಣ್ಣ ಸಿಂಗಾಡಿ, ಪಿಕೆಪಿಎಸ್ ಅಧ್ಯಕ್ಷ ಎಸ್.ಎಂ. ಪಾಟೀಲ, ಗಿರೀಶ ಕುಲಿಗೋಡ, ಚಂದ್ರಶೇಖರ ಮೋರೆ, ಶ್ರೀಶೈಲ ಪಟ್ಟಣಶೆಟ್ಟಿ, ರವೀಂದ್ರ ಬ್ಯಾಳಿ, ಅಣ್ಣಾಜಿ ಪಢತಾರೆ, ಮಡಿವಾಳಪ್ಪ ಕರಡಿ, ವೀರೇಶಕುಮಾರ ಆಸಂಗಿ, ಚಂದ್ರಕಾಂತ ಕೌಜಲಗಿ, ಡಿ.ಎಸ್. ಪಟ್ಟಣಶೆಟ್ಟಿ, ಕಜಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಮ.ಕೃ. ಮೇಗಾಡಿ, ಶ್ರೀಶೈಲಪ್ಪ ಉಳ್ಳೇಗಡಿ, ಸಿ.ಎಂ. ಕಟಗಿ, ಗೂಳೇಶ ಅಮ್ಮಣಗಿ, ಮಹಾಲಿಂಗಪ್ಪ ಹೊಸೂರ, ಈರಣ್ಣ ಹಲಗತ್ತಿ, ಮೆಹಬೂಬ ಸನದಿ, ಸುರೇಶ ಕೌಜಲಗಿ ಇತರರಿದ್ದರು. ಲಕ್ಷ್ಮಣ ಕಿಶೋರ ಸ್ವಾಗತಿಸಿದರು. ಭೀಮಪ್ಪ ನೇಗಿನಾಳ ನಿರೂಪಿಸಿದರು.