ಹಗರಿಬೊಮ್ಮನಹಳ್ಳಿ: ತಾಲೂಕಿನ ಹಂಪಾಪಟ್ಟಣದ ಗೋಂಧಳಿ ರಾಮಣ್ಣ ಜನಪದ ಕಲೆಯೊಂದರಲ್ಲಾದ ಗೋಂದಲಿಗರ ಹಾಡನ್ನು ಶ್ರೀಮಂತಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಈ ಜಾನಪದ ಕ್ಷೇತ್ರದ ಸೇವೆ ಗುರುತಿಸಿದ ರಾಜ್ಯ ಸರ್ಕಾರ, ಇವರಿಗೆ ಕರ್ನಾಟಕ 50ರ ಸಂಭ್ರಮ ರಾಜ್ಯ ಪ್ರಶಸ್ತಿಗೆ ಆಯ್ಕೆಮಾಡಿದೆ.

ಹಂಪಾಪಟ್ಟಣ ಗ್ರಾಮದ ದೇವೇಂದ್ರಪ್ಪನವರ ಕುಟುಂಬ ಗೊಂದಲಿಗರ ಕಲೆಯನ್ನು ವಂಶಪರಂಪೆಯಾಗಿ ಮುಂದುವರೆಸಿದ ಇವರು, ಚಿಕ್ಕ ವಯಸಿನಲ್ಲಿಯೇ ತಂದೆ ಮತ್ತು ಚಿಕ್ಕಪ್ಪನವರೊಂದಿಗೆ ಈ ಕಲೆಯನ್ನು ಮೈಗೂಡಿಸಿಕೊಂಡರು.
ಅನೇಕ ಕಥೆಗಳನ್ನು ಇವರ ಮಧುರ ಕಂಠದಿಂದ ಹೇಳುವ ಜೊತೆಗೆ ತಾಳಕ್ಕೆ ತಕ್ಕಂತೆ ಹೆಜ್ಜೆಗಳನ್ನು ಹಾಕುತ್ತಾ ಕೆಲ ಹಾಸ್ಯ ಚಟಾಕಿಗಳನ್ನು ಹಾರಿಸುವಲ್ಲಿ ಇವರು ನಿಪುಣರಾಗಿದ್ದಾರೆ. ತಮ್ಮ ಮಗನಿಗೂ ಕಲೆಯನ್ನು ಕಲಿಸಿದ್ದಾರೆ.
ಇವರ ಗ್ರಾಮೀಣ ಕಲೆ ಗುರುತಿಸಿದ ಅನೇಕ ಸಂಘಸಂಸ್ಥೆಗಳು ಹಾಗೂ ಸಾಹಿತ್ಯ ಪರಿಷತ್‌ಗಳು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಜಾನಪದ ಲೋಕೋತ್ಸವ ಪ್ರಶಸ್ತಿ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿಗಳು ಇವರ ಮುಡಿಗೇರಿವೆ.
ಯಾವುದನ್ನೂ ನಿರೀಕ್ಷೆ ಮಾಡದೆ ಗ್ರಾಮೀಣ ಕಲೆಯನ್ನು ಉಳಿಸಿಕೊಂಡು ಹೋಗಬೇಕು ಎನ್ನುವ ಹಿನ್ನೆಲೆಯಲ್ಲಿ, ಈ ಕಲೆಯನ್ನು ಮೈಗೂಡಿಸಿಕೊಂಡಿದ್ದೇ. 50ರ ಸುವರ್ಣ ಸಂಭ್ರಮ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ.
ಗೋಂಧಳಿ ರಾಮಣ್ಣ