ಕೋಲಾರ: ಜಿಲ್ಲೆಯಲ್ಲಿ ರೈತರು ಬೆಳೆದಿರುವ ಶ್ರೀಗಂಧ ತೋಟಕ್ಕೆ ರಕ್ಷಣೆ ಕಲ್ಪಿಸಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಸದಸ್ಯರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಸಂಘದ ಗೌರವಾಧ್ಯಕ್ಷರೂ ಆದ ನಿವೃತ್ತ ಐಎಎಸ್ ಅಧಿಕಾರಿ ಕೆ.ಅಮರನಾರಾಯಣ ಮಾತನಾಡಿ, ಬಯಲು ಸೀಮೆ ಜಿಲ್ಲೆಯ ರೈತರು ಶ್ರೀಗಂಧ ಬೆಳೆಯಲು ಸರ್ಕಾರವೇ ಉತ್ತೇಜನ ನೀಡಿದೆ. ಬೆಳೆ ಈಗ ಒಂದು ಹಂತಕ್ಕೆ ಬೆಳೆದು ನಿಂತಿದ್ದು ಕಳ್ಳರು ಮರಗಳನ್ನು ಕಟಾವು ಮಾಡಿಕೊಂಡು ಹೋಗುತ್ತಿದ್ದಾರೆ. ಕಳ್ಳತನವನ್ನು ತಡೆಗಟ್ಟಲು ಪೊಲೀಸ್ ಹಾಗೂ ಜಿಲ್ಲಾಡಳಿತ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.
ಶ್ರೀನಿವಾಸಪುರ, ಮುಳಬಾಗಿಲು, ಮಾಲೂರು ವ್ಯಾಪ್ತಿಯಲ್ಲಿನ ರೈತರ ತೋಟಗಳಲ್ಲಿ ಶ್ರೀಗಂಧ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಜಿಲ್ಲೆಯು ಆಂಧ್ರ, ತಮಿಳುನಾಡು ಗಡಿಯಲ್ಲಿದ್ದು ಕಳ್ಳತನಕ್ಕೆ ಹೆಬ್ಬಾಗಿಲು ಆಗಿದೆ. ಕಳ್ಳತನ ಮಾಡುವವರ ಮತ್ತು ಕಳ್ಳ ಮಾಲು ಖರೀದಿ ಮಾಡುವವರನ್ನು ಶಿೆಗೆ ಒಳಪಡಿಸಬೇಕು ಎಂದರು.
ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ, 2000 ಅಡಿಯಲ್ಲಿಯೂ ತಂದು ಕಳ್ಳರನ್ನೂ ಮತ್ತು ಕಳ್ಳಮಾಲನ್ನು ಪಡೆಯುತ್ತಿರುವವರನ್ನು ನಿಗ್ರಹಿಸಲು ಸೂಕ್ತ ಶಿಫಾರಸು ಮಾಡಬೇಕು. ಈಗಾಗಲೇ ವರದಿಯಾಗಿರುವ ಶ್ರೀಗಂಧದ ಮರಗಳ ಕಳ್ಳತನದ ಪ್ರಕರಣ ಭೇದಿಸಲು ವಿಶೇಷ ತಂಡಗಳನ್ನು ರಚಿಸಿ, ಕಳ್ಳರನ್ನು ಮತ್ತು ಬಹಳ ಮುಖ್ಯವಾಗಿ ಕಳ್ಳ ಮಾಲನ್ನು ಪಡೆಯುತ್ತಿರುವವರನ್ನು ಬಂಧಿಸಿ ಬಿಗಿಯಾದ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೋರಿದರು.
ಶ್ರೀಗಂಧ ಮರಗಳ ಕಟಾವು, ಸಾಗಾಣಿಕೆ ಮತ್ತು ಶೇಖರಣೆಗೆ ಇರುವ ನಿರ್ಬಂಧಗಳನ್ನು ತೆಗೆದುಹಾಕಬೇಕು. ಮುಕ್ತ ಮಾರುಕಟ್ಟೆಗೆ ಅನುಮತಿ ನೀಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಕೃಷಿಕರನ್ನು ಅರಣ್ಯ ಇಲಾಖೆಯ ಕಪಿಮುಷ್ಠಿಯಿಂದ ತಪ್ಪಿಸಲು ಮಹಾರಾಷ್ಟ್ರ ಸರ್ಕಾರವು ಆದೇಶ ಹೊರಡಿಸಿದೆ. ಅದೇ ರೀತಿಯಾಗಿ ರಾಜ್ಯ ಸರ್ಕಾರವು ಕೃಷಿಕರ ಪರವಾಗಿ ನಿಂತು ಮರಗಳ್ಳರ ವಿರುದ್ಧ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಶ್ರೀಗಂಧದ ಮರಗಳ ಬಗ್ಗೆ ದೇಶಾದ್ಯಂತ ಏಕಮೇವ ನೀತಿ ಇಲ್ಲದಿರುವುದರಿಂದ,ಅಕ್ಕಪಕ್ಕದ ರಾಜ್ಯಗಳಲ್ಲಿ ಮುಕ್ತವಾಗಿ ಶ್ರೀಗಂಧ ವ್ಯವಹಾರಗಳು ನಡೆಯುತ್ತಿದೆ. ರಾಜ್ಯದ ರೈತರಿಗೆ ಅರಣ್ಯ ಇಲಾಖೆ ವಿವಿಧ ರೀತಿಯಲ್ಲಿ ನಿರ್ಬಂಧ ವಿಧಿಸಿದೆ. 4 ಕೆಜಿಗಿಂತ ಹೆಚ್ಚಿನ ಶ್ರೀಗಂಧವನ್ನು ಶೇಖರಣೆ ಮಾಡಬಾರದು ಎಂಬ ನಿಯಮವಿದೆ. ಆದರೆ ಇದು ಕಳ್ಳರಿಗೆ ಅನ್ವಯವಾಗುವುದಿಲ್ಲ. ಅವರಿಗೆ ರತ್ನಗಂಬಳಿ ಹಾಸಿಕೊಟ್ಟಂತಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಪ್ರತ್ಯೇಕ ತಂಡ ರಚನೆಗೆ ಎಸ್ಪಿ ಭರವಸೆ
ಬೆಳೆಗಾರರಿಂದ ಮನವಿ ಸ್ವೀಕರಿಸಿ ಮಾತನಾಡಿದ ಎಸ್ಪಿ ಎಂ.ನಾರಾಯಣ, ಜಿಲ್ಲೆಯಲ್ಲಿ ಮೂರು ವರ್ಷದಲ್ಲಿ 14 ಪ್ರಕರಣಗಳು ದಾಖಲಾಗಿದ್ದು, 41 ಲಕ್ಷರೂ ಮೌಲ್ಯದ ಶ್ರೀಗಂಧವನ್ನು ವಶಪಡಿಸಿಕೊಳ್ಳಲಾಗಿದೆ. ಈಗಾಗಲೇ ಅಪರಾಧಿಗಳನ್ನು ಬಂಧಿಸಲಾಗಿದ್ದು ಶಿೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದರು. ಶ್ರೀಗಂಧ ಬೆಳೆಗಾರ ಹಾಗೂ ಬೆಳೆಯ ರಕ್ಷಣೆಗಾಗಿ ಇಲಾಖೆಯಿಂದ ಆ್ಯಂಟಿ ಸ್ಕಾ$ಂಡಲ್ ಟ್ತ್ೆ ಟೀ ಅನ್ನು ಪ್ರತ್ಯೇಕವಾಗಿ ರಚನೆ ಮಾಡಲಾಗುವುದು. ಜತೆಗೆ ಅಯಾ ಗ್ರಾಮದ ಬೀಟ್ ಸಿಬ್ಬಂದಿಯನ್ನು ರೈತರ ತೋಟಗಳಿಗೆ ಭೇಟಿ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.