ಗಮನ ಸೆಳೆದ ಸುಗ್ಗಿ ಕುಣಿತ

ಹಾಸನ: ತಿಹಾಸಿಕ ಮೈಸೂರು ದಸರಾ ಮಹೋತ್ಸವದಲ್ಲಿ ಮೊದಲ ಬಾರಿಗೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಲೆನಾಡು ಸ್ನೇಹ ಸೇವಾ ಸಂಘ ಸುಗ್ಗಿ ಕುಣಿತ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದೆ.

ಮಲೆನಾಡು ಭಾಗದಲ್ಲಿ ನಡೆಯುವ ಸುಗ್ಗಿಗಳಲ್ಲಿ ಪ್ರರ್ಶನವಾಗುವ ವಿಶಿಷ್ಟ ಕುಣಿತಕ್ಕೆ ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸುವ ಅವಕಾಶ ದೊರಕಿತ್ತು. ಜಿಲ್ಲೆಯ ಸ್ತಬ್ಧ ಚಿತ್ರದ ಮುಂಭಾಗ ಜಿಲ್ಲೆಯ ತಂಡ ಕತ್ತಿಗಳನ್ನು ಹಿಡಿದು ಸುಗ್ಗಿ ಕುಣಿತ ಪ್ರದರ್ಶಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಯಿತು.

ಮಲೆನಾಡಿನ ವಸ್ತ್ರವಿನ್ಯಾಸ ಮತ್ತು ವಾದ್ಯ ಮತ್ತು ಕಹಳೆಗೋಷ್ಠಿ ಗಮನ ಸೆಳೆದವು. ಬಾಚಿಹಳ್ಳಿ ಪ್ರತಾಪ್‌ಗೌಡ, ಹಿರಿಯ ವಕೀಲ ಮೇಘಟವಳ್ಳಿ ಹರೀಶ್, ಜಾತಹಳ್ಳಿ ಪುಟ್ಟಸ್ವಾಮಿ, ಆದರ್ಶ್ ನಾಡಗೌಡ, ಅಜಿತ್‌ಹೆತ್ತೂರು, ರೋಹಿತ್ ಹೊರಟ್ಟಿ, ಯಡಕೇರಿ ಗಂಗಾಧರ್ ಮುಂತಾದವರು ಸುಗ್ಗಿ ಕುಣಿತ ತಂಡದಲ್ಲಿದ್ದರು.