Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಫ್ಲೈ ಓವರ್​ನಲ್ಲಿ ನೇತಾಡುತ್ತಿದ್ದ ಯುವಕ ಪವಾಡಸದೃಶ ರೀತಿಯಲ್ಲಿ ಬಚಾವ್‌!

Saturday, 15.09.2018, 1:37 PM       No Comments

ಬೆಂಗಳೂರು: ಯುವಕನೊಬ್ಬ ಡೈರಿ ಸರ್ಕಲ್​ ಫ್ಲೈ ಓವರ್​ನಲ್ಲಿ ಹೋರ್ಡಿಂಗ್​ ಹಿಡಿದು ನೇತಾಡುತ್ತಿದ್ದ. ಒಂದೊಮ್ಮೆ ಕೈ ಜಾರಿದ್ದರೆ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದ… ಆದರೆ, ಆ ಯುವಕ ಇಂದು ಪವಾಡಸದೃಶ ರೀತಿಯಲ್ಲಿ ಬಚಾವ್​ ಆಗಿದ್ದಾನೆ.

ಹೌದು, ಡೈರಿ ಸರ್ಕಲ್​ ಫ್ಲೈಓವರ್‌ನಲ್ಲಿ ಮೊಬೈಲ್​ನಲ್ಲಿ ಮಾತನಾಡುತ್ತಿದ್ದ ವಿನಯ್​ನನ್ನು ಹಿಂಬದಿಯಿಂದ ಬಂದ ಅಪರಿಚಿತ ವಾಹನ ಸವಾರರು ಆತನನ್ನು ತಳ್ಳಿ ಹೋಗಿದ್ದಾರೆ. ಆದರೆ, ಅದೃಷ್ಟವಶಾತ್​ ವಿನಯ್​ ಕೆಳಗೆ ಬೀಳುವಾಗ ಫ್ಲೈ ಓವರ್​ಗೆ ಹಾಕಿದ್ದ ಹೋರ್ಡಿಂಗ್​ ಕೈಗೆ ಸಿಕ್ಕಿದೆ. ನೆಲದಿಂದ ಸುಮಾರು 40 ಅಡಿ ಎತ್ತರದಲ್ಲಿ ಯುವಕನೊಬ್ಬ ನೇತಾಡುತ್ತಿದ್ದನ್ನು ಕಂಡ ಸ್ಥಳೀಯರು ತಕ್ಷಣ ಸಹಾಯಕ್ಕೆ ನೆರವಾಗಿದ್ದಾರೆ.

ಹತ್ತಿರದಲ್ಲೇ ಇದ್ದ ಕೆಎಂಎಫ್​ ಲಾರಿಯನ್ನು ಫ್ಲೈ ಓವರ್​ ಕೆಳಗೆ ತಂದು ನಿಲ್ಲಿಸಿ ವಿನಯ್​ನನ್ನು ರಕ್ಷಿಸಿದ್ದಾರೆ. ಕಂಪನಿಯೊಂದರ ಸಂದರ್ಶನಕ್ಕೆ ವಿನಯ್​ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top