ಲಾಲ್​ಬಾಗ್​ನಲ್ಲಿ ಇಂದಿನಿಂದ ಫಲಪುಷ್ಪ ಪ್ರದರ್ಶನ: ಮಹಾತ್ಮ ಗಾಂಧೀಜಿಗೆ ಪುಷ್ಪನಮನ

ಬೆಂಗಳೂರು: ಸಸ್ಯಕಾಶಿ ಲಾಲ್​ಬಾಗ್​ನಲ್ಲಿ ಪ್ರಾರಂಭವಾಗಿರುವ ಫಲಪುಷ್ಪಪ್ರದರ್ಶನವನ್ನು ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು.

ಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಮಹಾತ್ಮ ಗಾಂಧೀಜಿ 150ನೇ ಜನ್ಮದಿನಕ್ಕೆ ಪುಷ್ಪನಮನ ಸಲ್ಲಿಸಲಾಗಿದ್ದು ಕುಮಾರಸ್ವಾಮಿಯವರು ಶ್ವೇತವರ್ಣದ ಪಾರಿವಾಳ ಹಾರಿಸುವ ಮೂಲಕ 209ನೇ ಪುಷ್ಪಪ್ರದರ್ಶನ ಉದ್ಘಾಟನೆ ಮಾಡಿದರು.

ಪುಷ್ಪ ಪ್ರದರ್ಶನದಲ್ಲಿ ರಾಜ್​ಘಾಟ್​, ದಂಡಿಯಾತ್ರೆ, ಬಾಪೂ ಕುಟೀರ, ಸಬರಮತಿ ಆಶ್ರಮಗಳು ಪ್ರಮುಖ ಆಕರ್ಷಣೆಯಾಗಿವೆ.

ಫಲಪುಷ್ಪ ಪ್ರದರ್ಶನದಲ್ಲಿ ತೋಟಗಾರಿಕಾ ಸಚಿವ ಎಂ.ಸಿ.ಮನಗೋಳಿ, ಮೇಯರ್​ ಗಂಗಾಂಬಿಕಾ, ವಿಧಾನ ಪರಿಷತ್​ ಸದಸ್ಯ ಶರವಣ ಇತರರು ಭಾಗವಹಿಸಿದ್ದರು.