ಅಥಣಿ ಗ್ರಾಮೀಣ: ಪ್ರವಾಹ, ಭೂಕಂಪದಂತಹ ಪ್ರಕೃತಿ ವಿಕೋಪಗಳನ್ನು ಮೆಟ್ಟಿನಿಂತು ಗಟ್ಟಿಯಾಗಿ ಜೀವನ ನಡೆಸಬೇಕು. ತಾಲೂಕಿನ ಜನರು ಕಷ್ಟದಲ್ಲಿದ್ದಾಗ ಕಣ್ಣೀರು ಒರೆಸುವ ಕೆಲಸವನ್ನು ಸತ್ಯಸಂಗಮ ಪ್ರತಿಷ್ಠಾನದಿಂದ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಯುವ ಮುಖಂಡ ಚಿದಾನಂದ ಸವದಿ ಹೇಳಿದರು.

ಅಥಣಿ ತಾಲೂಕಿನ ಅವರಖೋಡ, ಹುಲಗಬಾಳ, ಹಲ್ಯಾಳ, ತಂಗಡಿ, ಸಿನಾಳ, ಹಲಗಬಾಳ ದುರ್ಗಿ ತೋಟ, ಸತ್ತಿ ಆರ್.ಸಿ., ನದಿ ಇಂಗಳಗಾಂವ, ದೊಡವಾಡ, ರಡ್ಡೇರಹಟ್ಟಿ ಆರ್.ಸಿ. ಕಾಳಜಿ ಕೇಂದ್ರದಲ್ಲಿರುವ 2000 ನೆರೆ ಸಂತ್ರಸ್ತರ ಕುಟುಂಬಗಳಿಗೆ ಶುಕ್ರವಾರ ಸತ್ಯಸಂಗಮ ಪ್ರತಿಷ್ಠಾನ ವತಿಯಿಂದ ಆಹಾರ ಧಾನ್ಯ ಕಿಟ್ ವಿತರಿಸಿ ಅವರು ಮಾತನಾಡಿದರು.
ಕೇವಲ ಸರ್ಕಾರದಿಂದ ಎಲ್ಲ ಕಾರ್ಯಗಳನ್ನು ಮಾಡಲು ಸಾಧ್ಯವಿಲ್ಲ. ಸಂಘ, ಸಂಸ್ಥೆಗಳು ಕೂಡ ನೆರವಿಗೆ ಧಾವಿಸಬೇಕು ಎಂಬ ಉದ್ದೇಶದಿಂದ ನಮ್ಮ ತಂದೆ ಶಾಸಕ ಲಕ್ಷ್ಮಣ ಸವದಿ ಸೂಚನೆ ಮೇರೆಗೆ ಈ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.
ವಕೀಲ ಅಮೇಘ ಖೋಬ್ರಿ, ಡಾ. ಶಿವಬಸು ನಾಯಿಕ, ಕೆಎಂಎಫ್ ನಿರ್ದೇಶಕ ಮಹಾದೇವ ಬಿಳಿಕುರಿ, ಶ್ರೀಶೈಲ ನಾಯಿಕ, ಶಿವು ಗುಡ್ಡಾಪುರ, ಗ್ರಾಪಂ ಅಧ್ಯಕ್ಷ ಶ್ರೀಕಾಂತ ದರೂರ, ಶಿವಶಂಕರ ನಾಯಿಕ, ಜ್ಯೋತಿ ನಾಯಿಕ, ಸದಾಶಿವ ಹಳೆಮನಿ, ದಶರಥ ಸಾಳುಂಕೆ, ಬೀರಪ್ಪ ಲೋಕುರ, ಹಣಮಂತ ಮೋರೆ ಇತರರಿದ್ದರು.