ಮಧ್ಯಪ್ರದೇಶ: ಆರೋಪಿಗಳು ಎಷ್ಟೇ ಬುದ್ಧಿವಂತಿಕೆಯಿಂದ ಹತ್ಯೆಗೈದು, ಸಾಕ್ಷಿಗಳನ್ನು ನಾಶ ಮಾಡಿದರೂ ಸಹ ಇಡೀ ಘಟನೆಯೇ ಬೆಳಕಿಗೆ ಬರುವಂತ ಒಂದೇ ಒಂದು ಸುಳಿವು ಆ ಸ್ಥಳದಲ್ಲಿ ಇದ್ದೇ ಇರುತ್ತದೆ. ಇದು ಕ್ರಿಮಿನಲ್ ವ್ಯಕ್ತಿಗಳಿಗೆ ತಿಳಿಯುವುದಿಲ್ಲ. ಇಂತಹ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ನಿಸ್ಸೀಮರು. ಪ್ರತಿಯೊಂದು ಕೊಲೆ ಕೇಸ್ನಲ್ಲಿ ತಲೆಮರಿಸಿಕೊಂಡ ಆರೋಪಿಯ ಶೋಧ ಕಾರ್ಯದಲ್ಲಿ ತೊಡಗುವ ಪೊಲೀಸರಿಗೆ ಅಚ್ಚರಿ ರೀತಿಯಲ್ಲಿ ಒಂದು ಸಣ್ಣ ಸುಳಿವು, ತಪ್ಪಿತಸ್ಥರ ಜಾಲವನ್ನೇ ಹುಡುಕಿಕೊಡುತ್ತದೆ. ಅದೊಂದು ವಸ್ತು ಅಥವಾ ವ್ಯಕ್ತಿಯೇ ಆಗಿರಬಹುದು. ಆದರೆ, ಅಚ್ಚರಿ ಎಂಬಂತೆ ನೊಣವೇ (Flies) ಇಲ್ಲಿ ಕೊಲೆ ಆರೋಪಿಯ ಸುಳಿವು ನೀಡಿರುವುದು ಇದೀಗ ಪೊಲೀಸರ ಕೆಲಸವನ್ನು ಸುಲಭಗೊಳಿಸಿದೆ.
ಇದನ್ನೂ ಓದಿ: BJP Protest In Bagalkot | ಬಾಗಲಕೋಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ
ರಾತ್ರಿಯಾದರೂ ಹಿಂತಿರುಗಲಿಲ್ಲ
ಹಣದ ವಿಚಾರಕ್ಕೆ ಇಬ್ಬರ ನಡುವೆ ಭುಗಿಲೆದ್ದ ಮಾತಿನ ಚಕಮಕಿ ಸಾವಿನಲ್ಲಿ ಅಂತ್ಯವಾಗಿದ್ದು, ತನ್ನ ಚಿಕ್ಕಪ್ಪ ಮನೋಜ್ ಠಾಕೂರ್ ಅಲಿಯಾಸ್ ಮನ್ನು (26) ಎಂಬಾತನನ್ನು ಹತ್ಯೆಗೈದ ಆರೋಪದಡಿ ಇದೀಗ ಆರೋಪಿ ಧರಮ್ ಠಾಕೂರ್ನನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ವ್ಯಕ್ತಿ ಅಕ್ಟೋಬರ್ 30ರಂದು ಬೆಳಗ್ಗೆ ಕೆಲಸದ ನಿಮಿತ್ತ ಮನೆಯಿಂದ ಹೋದವನು, ರಾತ್ರಿಯಾದರೂ ಹಿಂತಿರುಗಿಲ್ಲ. ಇದರಿಂದ ಕುಟುಂಬಸ್ಥರಲ್ಲಿ ಅನುಮಾನ ಉಂಟಾಗಿದೆ. ಆದರೆ, ಅ. 31ರ ಬೆಳಗ್ಗೆ ದೇವೋರಿ ತಪ್ರಿಯಾ ಗ್ರಾಮದ ಕೃಷಿ ಕ್ಷೇತ್ರದಲ್ಲಿ ಅವರ ಶವ ಪತ್ತೆಯಾಗಿದೆ. ಚಾರ್ಗಾವಾನ್ ಪ್ರದೇಶದ ಮಾರುಕಟ್ಟೆಯಲ್ಲಿ ಮೃತ ವ್ಯಕ್ತಿಯ ಜತೆ ಕೊನೆಯದಾಗಿ ಕಾಣಿಸಿಕೊಂಡಿದ್ದ ವ್ಯಕ್ತಿ ಆರೋಪಿ ಧರಮ್ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಸೋನಾಲಿ ದುಬೆ ತಿಳಿಸಿದ್ದಾರೆ.
ರಕ್ತದ ಕಲೆಗಳು
ಹತ್ಯೆ ನಡೆದ ಸ್ಥಳದಲ್ಲಿ ಜನರ ಗುಂಪಿನಲ್ಲಿದ್ದ ಆರೋಪಿಯ ಕಣ್ಣುಗಳು ಕೆಂಪಾಗಿದ್ದವು ಮತ್ತು ಅವನ ಎದೆಯ ಮೇಲೆ ಕೆಲವು ಗುರುತುಗಳು ಕಂಡುಬಂದಿತು. ಈತನ ಮುಖ ಲಕ್ಷಣ ಪೊಲೀಸರ ಕಣ್ಣಿಗೆ ಅನುಮಾನಸ್ಪದವಾಗಿ ಕಾಣಿಸಿದ್ದು, ತಕ್ಷಣವೇ ಆತನನ್ನು ವಿಚಾರಣೆಗೆ ಒಳಪಡಿಸಲಾಯಿತು. “ಘಟನೆಯ ಸ್ಥಳದಲ್ಲಿ ನೀನೇನು ಮಾಡುತ್ತಿದೆ. ಏಕೆ ಹೀಗಿದ್ದೀಯಾ ಎಂದು ಕೇಳುವಾಗ ಆತನ ಶರ್ಟ್ ಮೇಲೆ ನೊಣಗಳು ಅಂಟುತ್ತಿದ್ದವು. ಇದನ್ನು ಗಮನಿಸಿದ ನಾವು, ಫೋರೆನ್ಸಿಕ್ ತಂಡಕ್ಕೆ ಆರೋಪಿ ಧರಿಸಿದ್ದ ಬಟ್ಟೆಗಳನ್ನು ಪರೀಕ್ಷೆಗೆ ಕಳುಹಿಸಿದೆವು. ಘಟನೆಯಲ್ಲಿ ಈತನೇ ಕೊಲೆ ಆರೋಪಿ ಎಂಬುದು ಆತನ ಅಂಗಿ ಮೇಲಿದ್ದ ರಕ್ತದ ಕಲೆ ವರದಿಯಲ್ಲಿ ಸಾಬೀತುಪಡಿಸಿತು” ಎಂದು ಚಾರ್ಗವಾನ್ ಪೊಲೀಸ್ ಠಾಣೆಯ ಪ್ರಭಾರಿ ಅಭಿಷೇಕ್ ಪಯಾಸಿ ಹೇಳಿದ್ದಾರೆ,(ಏಜೆನ್ಸೀಸ್).