ಫ್ಲೆಮಿಂಗೋ ಪ್ರೀತಿ ಪ್ರೇಮ ಪ್ರಣಯ…

ರಾಜಸ್ಥಾನದ ರಾಜಧಾನಿ ಜೈಪುರದ ಸಮೀಪ ಇರುವ ದೇಶದ ಅತಿ ದೊಡ್ಡ ಉಪ್ಪಿನ ಸರೋವರ ಎಂದೇ ಖ್ಯಾತವಾಗಿರುವ ‘ಸಾಂಬಾರ್​’ ಸರೋವರಕ್ಕೆ ಫ್ಲೆಮಿಂಗೋ (ರಾಜಹಂಸ) ಪಕ್ಷಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿವೆ. ಪ್ರತಿ ವರ್ಷ ಜುಲೈ ತಿಂಗಳಿನಲ್ಲಿ ಸಂತಾನೋತ್ಪತ್ತಿಗಾಗಿ ಫ್ಲೆಮಿಂಗೋ ಪಕ್ಷಿಗಳು ಇಲ್ಲಿಗೆ ಆಗಮಿಸುತ್ತವೆ. ಪಕ್ಷಿಗಳ ಪ್ರಣಯ, ಸರಸ ಸಲ್ಲಾಪ ಪಕ್ಷಿ ಪ್ರಿಯರಿಗೆ ಮುದ ನೀಡುತ್ತಿದ್ದು, ಆ ದೃಶ್ಯಾವಳಿ ಇಲ್ಲಿದೆ.