ಶೋಪಿಯಾನ್: ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ನ ಓರ್ವ ಕಮಾಂಡರ್ ಸೇರಿ ಐವರು ಉಗ್ರರು ಹತರಾಗಿದ್ದಾರೆ. ಜಿಲ್ಲೆಯ ರೆಬಾನ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಭದ್ರತಾಪಡೆಗಳು ಭಾನುವಾರ ಬೆಳಗ್ಗೆಯೇ ಕಾರ್ಯಾಚರಣೆಗಿಳಿದಾಗ ಉಗ್ರರು ಗುಂಡು ಹಾರಿಸಿದರು. ಇದಕ್ಕೆ ಪ್ರತಿದಾಳಿ ನಡೆಸಿದ ಯೋಧರು ಐವರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಅಪಾರ ಪ್ರಮಾಣ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕಾರ್ಯಾಚರಣೆ ಆರು ತಾಸು ನಡೆಯಿತು. ಸ್ಥಳೀಯರು ಭದ್ರತಾ ಪಡೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಹೆಚ್ಚುವರಿ ತುಕಡಿಯನ್ನು ಸ್ಥಳಕ್ಕೆ ಕರೆಯಿಸಿ ಪರಿಸ್ಥಿತಿ ನಿಯಂತ್ರಿಸಲಾಯಿತು. ಮುಂಜಾಗ್ರತಾ ಕ್ರಮವಾಗಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿತ್ತು. ಹತ್ಯೆಯಾದ ಉಗ್ರರ ಗುರುತು ಪತ್ತೆಯಾಗಬೇಕಿದೆ ಎಂದು ರಕ್ಷಣಾ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ತಿಳಿಸಿದ್ದಾರೆ. ಇದನ್ನೂ ಓದಿ: ಶಾಲಾ ಮಕ್ಕಳು 400 ರೂ.ಗಳ ಮಾಸ್ಕ್ ಖರೀದಿಸಬೇಕೆಂಬುದು ಸುಳ್ಳು ಸುದ್ದಿ: ಡಿಪಿಎಸ್ ಸ್ಪಷ್ಟನೆ
ಉಗ್ರರಿಗೆ ತಗ್ಗುತ್ತಿರುವ ಜನ ಬೆಂಬಲ: ಉತ್ತರ ಕಾಶ್ಮೀರದ ಜನರು ಹಿಂಸಾಚಾರದಿಂದ ಬೇಸತ್ತಿದ್ದು, ಉಗ್ರರಿಗೆ ಬೆಂಬಲ ನೀಡುವುದನ್ನು ಬಿಟ್ಟಿದ್ದಾರೆ. ಜತೆಗೆ ಉಗ್ರರ ಸಂಘಟನೆಗೆ ಸ್ಥಳೀಯ ಯುವಕರು ಸೇರುವ ಪ್ರಮಾಣ ಕೂಡ ಗಣನೀವಾಗಿ ಕುಗ್ಗಿದೆ ಎಂದು ಲೆಫ್ಟಿನೆಂಟ್ ಜನರಲ್ ಬಿ.ಎಸ್.ರಾಜು ತಿಳಿಸಿದ್ದಾರೆ. ಇದನ್ನೂ ಓದಿ: ಲಾಕ್ಡೌನ್ ಅವಧಿಯಲ್ಲಿ ಚೆನ್ನೈ ಪೊಲೀಸರು ಬರೊಬ್ಬರಿ 11 ಕೋಟಿ ರೂ.ದಂಡ ಸಂಗ್ರಹಿಸಿದ್ದಾರಂತೆ…