ಅಯೋಧ್ಯೆ ಪ್ರಕರಣ ಐವರು ಸದಸ್ಯರ ಸಾಂವಿಧಾನಿಕ ಪೀಠದಲ್ಲಿ ವಿಚಾರಣೆ

ನವದೆಹಲಿ: ಭಾರಿ ಚರ್ಚೆಗೆ ಗ್ರಾಸವಾಗಿರುವ ವಿವಾದಿತ ರಾಮಜನ್ಮಭೂಮಿ ಭೂ ಹಂಚಿಕೆ ಪ್ರಕರಣವನ್ನು ಐವರು ಸದಸ್ಯರನ್ನೊಳಗೊಂಡ ಸಾಂವಿಧಾನಿಕ ಪೀಠ ಜ.10 ರಿಂದ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.

ಮುಖ್ಯನ್ಯಾಯಮೂರ್ತಿ ರಂಜನ್​ ಗೊಗೊಯ್​ ನೇತೃತ್ವದ ಈ ಪೀಠದಲ್ಲಿ ಜಸ್ಟಿಸ್​ ಎಸ್​ಎ ಬೊಬ್ಡೆ, ಜಸ್ಟಿಸ್​ ಎನ್​ವಿ ರಮಣ, ಜಸ್ಟಿಸ್​ ಯುಯು ಲಲಿತ್​ ಮತ್ತು ಕಸ್ಟಿಸ್​ ಡಿವೈ ಚಂದ್ರಚೂಡ್​ ಇರಲಿದ್ದಾರೆ.

ಅಯೋಧ್ಯೆಯ 2.77 ಎಕರೆ ಭೂಮಿಯನ್ನು ಸುನ್ನಿ ವಕ್ಫ್​ ಬೋರ್ಡ್​, ನಿರ್ಮೋಹಿ ಅಖಾಡ ಮತ್ತು ರಾಮ್​ ಲಲ್ಲಾಗೆ ಮೂರು ಭಾಗಗಳಾಗಿ ಸಮನಾಗಿ ನೀಡುವಂತೆ 2010ರಲ್ಲಿ ಅಲಹಾಬಾದ್​ ಹೈಕೋರ್ಟ್ ತೀರ್ಪು ಹೊರಡಿಸಿತ್ತು. ಆದರೆ, ಇದನ್ನು ವಿರೋಧಿಸಿ 14 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಅರ್ಜಿಗಳ ವಿಚಾರಣೆ ಜ.10ರಂದು ನಡೆಯಲಿದೆ.

ಕಳೆದ ವರ್ಷದ ಅಕ್ಟೋಬರ್ 29 ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್​, ಜನವರಿ 2019ರಲ್ಲಿ ಸೂಕ್ತ ಪೀಠದಲ್ಲಿ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿತ್ತು.

1992ರಲ್ಲಿ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಲಾಗಿತ್ತು. (ಏಜೆನ್ಸೀಸ್​)