More

  ಯಾದಗಿರಿಯಲ್ಲಿ ನಿಂತಿದ್ದ ಲಾರಿಗೆ ಕ್ರೂಸರ್​​ ಡಿಕ್ಕಿ: ಸ್ಥಳದಲ್ಲೇ ಐವರ ದುರ್ಮರಣ

  ಯಾದಗಿರಿ: ನಿಂತಿದ್ದ ಲಾರಿಗೆ ಕ್ರೂಸರ್​​ ಡಿಕ್ಕಿಯಾಗಿ ಸ್ಥಳದಲ್ಲೇ ಐದು ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ಯಾದಗಿರಿ ತಾಲೂಕಿನ ಚಕ್ರ ಗ್ರಾಮದ ಬಳಿಯಿರುವ ರಾಷ್ಟ್ರೀಯ ಹೆದ್ದಾರಿ 150 (a) ನಲ್ಲಿ ನಡೆದಿದೆ.

  ಈ ಅವಘಡದಲ್ಲಿ 13 ಜನರಿಗೆ ಗಾಯಗಳಾಗಿದ್ದು, ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವ ಬಾಲಕಿ ಹಾಗೂ ಓರ್ವ ಬಾಲಕ ಸೇರಿದಂತೆ ಒಟ್ಟು ಐದು ಮಂದಿ ಮೃತಪಟ್ಟಿದ್ದಾರೆ. ಮೃತರನ್ನು ಮುನೀರ್ (40), ನಯಾಮತ್ (40), ಮುದ್ದತ್ ಶಿರ್ (12), ರಮೀಜಾ ಬೇಗಂ (50) ಹಾಗೂ ಸುಮ್ಮಿ (12) ಎಂದು ಗುರುತಿಸಲಾಗಿದೆ.

  ಇದನ್ನೂ ಓದಿ: ಜನಸಂಖ್ಯೆಗಿಂತಲೂ ಅಧಿಕ ಆಧಾರ್!; 9 ರಾಜ್ಯಗಳಲ್ಲಿ ಬದುಕಿರುವವರಿಗಿಂತ ಹೆಚ್ಚು ಕಾರ್ಡ್

  ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯಿಂದ ಕಲಬುರಗಿಯ ಖಾಜಾ ಬಂದೇನವಾಜ ದರ್ಗಾದ ಉರುಸ್ ಜಾತ್ರೆಗೆ ತೆರಳುತ್ತಿದ್ದರು. ಈ ವೇಳೆ ಚಕ್ರ ಬಳಿ ಇರುವ ರಸ್ತೆ ಪಕ್ಕ ನಿಲ್ಲಿಸಿದ್ದ ಲಾರಿಗೆ ಕ್ರೂಸರ್ ವಾಹನ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲಿಯೇ 5 ಜನ ಮೃತಪಟ್ಟಿದ್ದಾರೆ.

  ಘಟನಾ ಸ್ಥಳಕ್ಕೆ ಸೈದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

  ನ್ಯಾಯದೇವತೆ | ಗಂಡ ಪ್ರತಿ ದಿನ ಹೊಡೆದು ಹಿಂಸಿಸುತ್ತಾರೆ, ಏನು ಮಾಡಬೇಕು?

  ದೇವರೆಲ್ಲಿದ್ದಾನೆ?: ಮನೋಲ್ಲಾಸ ಅಂಕಣ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts