23.2 C
Bangalore
Saturday, December 14, 2019

ನಾಡದೋಣಿ ಮೀನುಗಾರಿಕೆ ವಿಳಂಬ

Latest News

ರಸ್ತೆ ಕಾಮಗಾರಿ ಗುಣಮಟ್ಟ ಪರಿಶೀಲನೆ ನಡೆಸಿದ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ

ಚನ್ನಗಿರಿ: ಕ್ಷೇತ್ರದ ಅಭಿವೃದ್ಧಿ ನನ್ನ ಗುರಿ. ಟೆಂಡರ್ ಮೂಲಕ ಕಾಮಗಾರಿ ಹಿಡಿಯುವ ಗುತ್ತಿಗೆದಾರರು ಗುಣಮಟ್ಟದ ಕೆಲಸ ನಿರ್ವಹಿಸಬೇಕು. ಕಳಪೆಯಾದರೆ ಅಂಥವರನ್ನು ಕಪ್ಪುಪಟ್ಟಿಗೆ ಸೇರಿಸುವುದಾಗಿ...

ಹಾಸ್ಟೆಲ್‌ಗೆ ಶಾಸಕರ ದಿಢೀರ್ ಭೇಟಿ

ರಬಕವಿ/ಬನಹಟ್ಟಿ: ರಬಕವಿ ನಗರದ ಹೆಸ್ಕಾಂ ಕಚೇರಿ ಸಮೀಪದಲ್ಲಿರುವ ಡಿ.ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಶಾಸಕ ಸಿದ್ದು ಸವದಿ ಶುಕ್ರವಾರ...

ಫಾರೂಕ್ ಅಬ್ದುಲ್ಲಾ ಗೃಹ ಬಂಧನ ಮೂರು ತಿಂಗಳು ವಿಸ್ತರಿಸಿದ ಕೇಂದ್ರ ಸರ್ಕಾರ

ನವದೆಹಲಿ: ಗೃಹ ಬಂಧನದಲ್ಲಿರುವ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಬಂಧನವನ್ನು ಕೇಂದ್ರ ಸರ್ಕಾರ ಶನಿವಾರ ಮೂರು ತಿಂಗಳು ವಿಸ್ತರಿಸಿದೆ. ಐದು ಬಾರಿ...

ಸಂಭ್ರಮದ ದ್ಯಾಮವ್ವನ ಸೋಂಗಿನ ಮೆರವಣಿಗೆ

ಬಸವನಬಾಗೇವಾಡಿ: ಪಟ್ಟಣದ ಶ್ರೀ ಗೌರಿಶಂಕರ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ಮಧ್ಯಾಹ್ನ ದ್ಯಾಮವ್ವನ ಸೋಂಗಿನ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು.ಪಟ್ಟಣದ...

ಸಿದ್ದರಾಮಯ್ಯ, ದಿನೇಶ್​ ಗುಂಡೂರಾವ್​ ರಾಜೀನಾಮೆ ಅಂಗೀಕಾರ ಮಾಡಬೇಡಿ: ವೇಣುಗೋಪಾಲ್​ಗೆ ರಾಜ್ಯ ಕಾಂಗ್ರೆಸ್​ ಮಹಿಳಾ ಘಟಕದ ಅಧ್ಯಕ್ಷೆ ಮನವಿ

ಬೆಂಗಳೂರು: ಉಪಚುನಾವಣೆಯಲ್ಲಿ ಕಾಂಗ್ರೆಸ್​ ಹೀನಾಯವಾಗಿ ಸೋತಿದ್ದರ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಹಾಗೂ ದಿನೇಶ್​ ಗುಂಡೂರಾವ್​ ಅವರು ಕ್ರಮವಾಗಿ ತಮ್ಮ ಶಾಸಕಾಂಗ ಪಕ್ಷದ ನಾಯಕನ ಸ್ಥಾನ...

ಗಂಗೊಳ್ಳಿ: ಯಾಂತ್ರೀಕೃತ ಮೀನುಗಾರಿಕೆಗೆ ಜೂನ್ 1ರಿಂದ ನಿಷೇಧ ಆರಂಭವಾಗಿದ್ದು, ಮಳೆಯಾಗದ ಹಿನ್ನೆಲೆಯಲ್ಲಿ ಕಡಲು ಪ್ರಕ್ಷುಬ್ಧಗೊಳ್ಳದ ಕಾರಣ ನಾಡದೋಣಿ ಮೀನುಗಾರಿಕೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ಕಡಲನ್ನೇ ನಂಬಿ ಬದುಕುವ ಬಡ ಮೀನುಗಾರರಿಗೆ ನಿಷೇಧ ಅವಧಿಯಲ್ಲಿ ಜೀವನ ಸಾಗಿಸಲು ಬೇರೆ ಆದಾಯವಿಲ್ಲದ ಕಾರಣ ಸಮುದ್ರವನ್ನೇ ಅವಲಂಬಿಸಬೇಕು. ಅದಕ್ಕಾಗಿ ಅವರು ಮಳೆ-ಗಾಳಿ ಲೆಕ್ಕಿಸದೆ ನಾಡದೋಣಿಯಲ್ಲಿ ಮೀನುಗಾರಿಕೆ ಮಾಡುತ್ತಾರೆ. ಮೀನುಗಾರರು ಮಳೆಗಾಗಿ ಪ್ರಾರ್ಥಿಸುತ್ತಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದಲ್ಲಿ ನಾಡದೋಣಿ ಮೀನುಗಾರಿಕೆ ನಡೆಯುವ ಸಾಧ್ಯತೆ ಇದೆ. ದ.ಕ. ಮತ್ತು ಉಡುಪಿ ಜಿಲ್ಲೆಯ ಕರಾವಳಿ ಉದ್ದಕ್ಕೂ ವಿವಿಧ ರೀತಿಯ ಸಾಂಪ್ರದಾಯಿಕ ಸಣ್ಣ ದೋಣಿಗಳಲ್ಲಿ ಮೀನುಗಾರಿಕೆ ನಡೆಸಿ ವಿವಿಧ ಮೀನು ಹಿಡಿಯುತ್ತಾರೆ. ಇವುಗಳಲ್ಲಿ ಮಾಟುಬಲೆ, ಕೈರಂಪಣಿ, ಕಂತಬಲೆ, ಟ್ರಾಲ್ ಮುಂತಾದ ವಿಧಗಳಿವೆ.

ಮಾಟುಬಲೆ: ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಯಲ್ಲಿ ಮಾಟುಬಲೆ ಎಂದು ಕರೆಯಲ್ಪಡುವ 30ರಿಂದ 35 ಮಂದಿ ಇರುವ ತಂಡ ಒ.ಬಿ.ಎಂ. ಅಳವಡಿಸಿ ಜೋಡಿ ದೋಣಿಯೊಂದಿಗೆ ಸುಮಾರು 15ರಿಂದ 20 ನಾಟಿಕಲ್ ಮೈಲು ದೂರದವರೆಗೆ ತೆರಳಿ ಮೀನುಗಾರಿಕೆ ನಡೆಸುತ್ತದೆ. ಅವರು ನಸುಕಿನಲ್ಲೆದ್ದು ಕಡಲಿಗಿಳಿದರೆ ಮತ್ತೆ ದಡ ಸೇರುವುದು ಸಾಯಂಕಾಲ ಹೊತ್ತಿಗೆ. ಕೆಲವು ಬಾರಿ ಬರಿಗೈಯಲ್ಲಿ ವಾಪಸಾಗುವುದೂ ಉಂಟು.

ಕೈರಂಪಣಿ: ಸಂಪೂರ್ಣ ಸಾಂಪ್ರದಾಯಿಕ ರೀತಿಯಲ್ಲಿ ಕೈರಂಪಣಿ ಕೆಲವು ಕಡೆ ಸರ್ವಋತುಗಳಲ್ಲೂ ಚಾಲ್ತಿಯಲ್ಲಿದ್ದರೂ ಮಳೆಗಾಲದಲ್ಲಿ ಹೆಚ್ಚು. ಬಡ ಮೀನುಗಾರರು ಮಳೆಗಾಲದ ಸಮಯ ಬಲೆ ಬಿಟ್ಟು ಮೀನು ಹಿಡಿಯುವ ಈ ಕೈರಂಪಣಿ ತಂಡ, ಸಮುದ್ರ ಬದಿಯಿಂದ ತುಸು ದೂರ ದೋಣಿಯೊಂದಿಗೆ ಸಾಗಿ ಕಾಮನ ಬಿಲ್ಲಿನಾಕಾರದಲ್ಲಿ ಬಲೆ ಬಿಟ್ಟು ಅನಂತರ ಮೇಲೆಳೆಯುತ್ತಾರೆ. ಇದೇ ರೀತಿ ದಿನದಲ್ಲಿ ಎರಡು ಮೂರು ಬಾರಿ ಬಿಡುವುದಿದೆ. ಇನ್ನಿತರ ಸಣ್ಣ ದೋಣಿಗಳೊಂದಿಗೆ ನಡೆಸಲ್ಪಡುವ ಕಂತ ಬಲೆ, ಟ್ರಾಲ್ ಇವುಗಳಲ್ಲಿ ಎರಡು ಮೂರು ಮಂದಿ ಮಾತ್ರ ಇದ್ದು,ಇದರಲ್ಲಿ ಸ್ವಲ್ಪ ದೂರ ಸಾಗಿ ಮೀನು ಹಿಡಿಯುತ್ತಾರೆ.

ಮರಣ ಬಲೆ: ಒಬ್ಬನೇ ಸಮುದ್ರ ಬದಿಯಿಂದ ಬಲೆ ಬಿಟ್ಟು ಮೀನು ಹಿಡಿಯುವುದು. ಇದರಲ್ಲಿ ಹೆಸರೇ ಸೂಚಿಸುವಂತೆ ಅಪಾಯದ ಸಾಧ್ಯತೆ ಹೆಚ್ಚು. ಒಟ್ಟಾರೆ ಸಾಂಪ್ರದಾಯಿಕ ನಾಡದೋಣಿಗಳಲ್ಲಿ ದುಡಿಯುವ ಮೀನುಗಾರರು ತಮ್ಮೊಳಗೆ ಸಹಕಾರಿ ತತ್ವದ ನೆಲೆಗಳಲ್ಲಿ ಗಳಿಸಿದ್ದನ್ನು ಸಮಾನವಾಗಿ ಹಂಚಿಕೊಳ್ಳುತ್ತಾರೆ.
ಕಳೆದ ಸಾಲಿನಲ್ಲಿ ಯಾಂತ್ರೀಕೃತ ಮೀನುಗಾರಿಕೆ ನಿಷೇಧ ಅವಧಿಯಲ್ಲಿ ನಾಡದೋಣಿ ಮೀನುಗಾರಿಕೆ ನಿರೀಕ್ಷಿತ ಪ್ರಮಾಣದಲ್ಲಿ ನಡೆದಿರಲಿಲ್ಲ. ಸಮುದ್ರ ಬಹಳಷ್ಟು ಕಾಲ ಪ್ರಕ್ಷುಬ್ಧಗೊಂಡಿದ್ದರಿಂದ ಬಡ ಮೀನುಗಾರರಿಗೆ ಮೀನುಗಾರಿಕೆ ನಡೆಸಲು ಸಾಧ್ಯವಾಗಿರಲಿಲ್ಲ. ಮೀನುಗಾರಿಕೆ ನಡೆದ ಕೆಲವೊಂದು ದಿನಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮೀನು ದೊರೆಯದಿರುವುದರಿಂದ ಮೀನುಗಾರರು ನಿರಾಸೆಗೊಂಡಿದ್ದರು. ಈ ಬಾರಿ ಕೂಡ ಇದೇ ಪುನರಾವರ್ತನೆಯಾಗುವ ಭೀತಿ ಎದುರಾಗಿದೆ.

ಮಳೆ ಪ್ರಾರಂಭವಾಗದ ಹಿನ್ನಲೆಯಲ್ಲಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಇನ್ನಷ್ಟು ವಿಳಂಬವಾಗಲಿದೆ. ಈಗಿನ ಪರಿಸ್ಥಿತಿ ನೋಡಿದರೆ ಜುಲೈ 15ರ ಬಳಿಕವೇ ಆರಂಭವಾಗಬಹುದು. ಉತ್ತಮ ಮಳೆಯಾಗಿ ಕಡಲು ಸಹಕರಿಸಿದರೆ ಮಾತ್ರ ನಿರೀಕ್ಷಿತ ನಾಡದೋಣಿ ಮೀನುಗಾರಿಕೆ ನಡೆಯಬಹುದು. ಸದ್ಯ ವಾತಾವರಣ ಮೀನುಗಾರಿಕೆಗೆ ಪೂರಕವಾಗಿಲ್ಲ. ಹವಾಮಾನ ಪೂರಕವಾಗಿದ್ದರೆ ನಾಡದೋಣಿ ಮೀನುಗಾರಿಕೆ ನಿರೀಕ್ಷೆಯಂತೆ ನಡೆಯಲಿದೆ.
– ಎಚ್.ಮಂಜು ಬಿಲ್ಲವ, ಅಧ್ಯಕ್ಷರು ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘ, ಗಂಗೊಳ್ಳಿ

ಹವಾಮಾನ ವೈಪರೀತ್ಯದಿಂದ ಕಳೆದ ಋತುವಿನಲ್ಲಿ ನಾಡದೋಣಿ ಮೀನುಗಾರಿಕೆ ನಿರೀಕ್ಷಿತ ಪ್ರಮಾಣದಲ್ಲಿ ನಾಡದೋಣಿ ಮೀನುಗಾರಿಕೆ ನಡೆದಿರಲಿಲ್ಲ. ಈ ಬಾರಿ ಮಳೆಗಾಲ ಪ್ರಾರಂಭವಾದರೂ ಮಳೆ ಬಾರದಿರುವುದರಿಂದ ನಾಡದೋಣಿ ಮೀನುಗಾರಿಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಇರುವುದರಿಂದ ಮಳೆಗಾಲದ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಯನ್ನು ಅವಲಂಬಿಸಿರುವ ನೂರಾರು ಜನ ಮೀನುಗಾರರ ಜೀವನ ಸಂಕಷ್ಟಕ್ಕೆ ಸಿಲುಕಲಿದೆ.
– ನಾಗಪ್ಪಯ್ಯ ಪಟೇಲ್, ನಾಡದೋಣಿ ಮೀನುಗಾರ ಮುಖಂಡ, ಗಂಗೊಳ್ಳಿ

Stay connected

278,753FansLike
588FollowersFollow
627,000SubscribersSubscribe

ವಿಡಿಯೋ ನ್ಯೂಸ್

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...

VIDEO| ಹರ್ಷಿಕಾ ಪೂಣಚ ಅವರ ಕುತ್ತಿಗೆಗೆ ಸುತ್ತುವರಿದ ಹಾವು…!: ಟ್ವಿಟರ್​ನಲ್ಲಿ...

ಬೆಂಗಳೂರು: ಸದಾ ಸಕ್ರಿಯರಾಗಿರುವ ಚಿತ್ರನಟಿ ಹರ್ಷಿಕಾ ಪೂಣಚ ಅವರ ಟ್ವಿಟರ್ ಅಕೌಂಟ್​ನಲ್ಲಿ ಶನಿವಾರ ಒಂದು ವಿಡಿಯೋ ಅಪ್ಲೋಡ್ ಆಗಿದ್ದು, ಅದರಲ್ಲಿ ಅವರ ವಿಯೆಟ್ನಾಂ ಅನುಭವದ ಒಂದು ಅಂಶ ಬಹಿರಂಗವಾಗಿದೆ. ಹರ್ಷಿಕಾ ಪೂಣಚ...

VIDEO| ನಟ ರಿಷಿ ಅಭಿನಯದ “ಸಾರ್ವಜನಿಕರಿಗೆ ಸುವರ್ಣಾವಕಾಶ” ಚಿತ್ರದ ರೊಮ್ಯಾಂಟಿಕ್​...

ಬೆಂಗಳೂರು: "ಆಪರೇಷನ್​ ಅಲಮೇಲಮ್ಮ" ಚಿತ್ರ ಖ್ಯಾತಿಯ ನಟ ರಿಷಿ ಅಭಿನಯದ ಹೊಚ್ಚ ಹೊಸ "ಸಾರ್ವಜನಿಕರಿಗೆ ಸುವರ್ಣಾವಕಾಶ" ಸಿನಿಮಾದ ಲಿರಿಕಲ್​ ವಿಡಿಯೋ ಸಾಂಗ್​ ಶುಕ್ರವಾರ ಬಿಡುಗಡೆಯಾಗಿದ್ದು ಯೂಟ್ಯೂಬ್​ನಲ್ಲಿ ಸಂಚಲನ ಸೃಷ್ಟಿಸಿದೆ. ಡಿಸೆಂಬರ್​ 20ಕ್ಕೆ...