16 C
Bangalore
Saturday, December 7, 2019

ಅವಘಡ ನಡೆದಿಲ್ಲ, ಅಪಹರಣ ಮಿಲಿಟರಿ ಕಾರ್ಯಾಚರಣೆ ನಡೆಸಿ

Latest News

ಎಲ್ಲ ಸಮುದಾಯಗಳ ನಾಯಕ ಬಾಬಾಸಾಹೇಬ್

ಚಿಕ್ಕಬಳ್ಳಾಪುರ: ಪುತ್ಥಳಿಗೆ ಮಾಲಾರ್ಪಣೆ, ಉಪನ್ಯಾಸ ಸೇರಿ ವಿವಿಧ ಕಾರ್ಯಕ್ರಮಗಳೊಂದಿಗೆ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್‌ರವರ ಪರಿನಿಬ್ಬಾಣ ದಿನ ಶುಕ್ರವಾರ ನಡೆಯಿತು....

ಮತಯಂತ್ರಕ್ಕೆ ಪೊಲೀಸ್ ಸರ್ಪಗಾವಲು

ಹಾವೇರಿ: ಜಿಲ್ಲೆಯ ರಾಣೆಬೆನ್ನೂರ ಹಾಗೂ ಹಿರೇಕೆರೂರ ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ತಾಲೂಕಿನ ದೇವಗಿರಿಯಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್​ನ ಸ್ಟ್ರಾಂಗ್ ರೂಂನಲ್ಲಿ ಪೊಲೀಸ್ ಸರ್ಪ...

ಅಳಿದುಳಿದ ಉಳ್ಳಾಗಡ್ಡಿಗೂ ಡಿಮಾಂಡ್

ರಾಣೆಬೆನ್ನೂರ: ಕಳೆದ ಒಂದು ತಿಂಗಳ ಹಿಂದೆ ಸಂಪೂರ್ಣ ಬೆಲೆ ಕಳೆದುಕೊಂಡಿದ್ದ ಉಳ್ಳಾಗಡ್ಡಿ ಬೆಳೆಗೆ ಇದೀಗ ಭಾರಿ ಡಿಮಾಂಡ್ ಬಂದಿದೆ. ದರದಲ್ಲಿ ಕೂಡ ಭಾರಿ...

ಸಿಸಿಐನಿಂದ ಹತ್ತಿ ಖರೀದಿ ಶುರು

ಲಕ್ಷ್ಮೇಶ್ವರ: ಒಂದು ವಾರದಿಂದ ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಯಿಂದಾಗಿ ಭಾರತೀಯ ಹತ್ತಿ ನಿಗಮ (ಸಿಸಿಐ)ದವರು ಬೆಂಬಲ ಬೆಲೆಯಡಿ ಹತ್ತಿ...

ಕೆಲಗೇರಿ ಕೆರೆ ಸಂರಕ್ಷಣೆಗೆ ಕ್ರಮ

ಧಾರವಾಡ: ನಗರದ ಇತಿಹಾಸ ಮತ್ತು ನೈಸರ್ಗಿಕ ಪರಂಪರೆ ಪ್ರತಿನಿಧಿಸುವ ಕೆಲಗೇರಿ ಮತ್ತು ಸಾಧನಕೇರಿ ಕೆರೆಗಳನ್ನು ಸಂರಕ್ಷಿಸಿ ಅಬಿವೃದ್ಧಿಪಡಿಸಲಾಗುತ್ತದೆ. ಕೆರೆಗಳ ಸೌಂದಯೀಕರಣಗೊಳಿಸಿ ಪ್ರವಾಸಿತಾಣಗಳಾಗಿ ರೂಪಿಸಲು...

<< ಮೀನುಗಾರ ಕುಟುಂಬಗಳಿಂದ ಒತ್ತಾಯ > ಹುಡುಕಾಟ ಅಸಮರ್ಪಕವೆಂದು ಅಸಮಾಧಾನ>>

ಉಡುಪಿ: ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕೆ ಬೋಟು ನಾಪತ್ತೆಯಾಗಿ 38 ದಿನವಾದರೂ ಪತ್ತೆಯಾಗಿಲ್ಲ, ಮಹತ್ವದ ಸುಳಿವೂ ಲಭಿಸಿಲ್ಲ. ಮೀನುಗಾರರ ಪತ್ತೆಗೆ ಮಿಲಿಟರಿ ಕಾರ್ಯಾಚರಣೆ ಮಾಡಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ನಾಪತ್ತೆಯಾದ ಮೀನುಗಾರರ ಮನೆಯವರು, ಮೀನುಗಾರಿಕೆ ಬೋಟ್ ಅವಘಡಕ್ಕೀಡಾಗಿಲ್ಲ; ಮೀನುಗಾರರನ್ನು ಅಪಹರಿಸಲಾಗಿದೆ ಎಂಬ ಬಲವಾದ ಶಂಕೆ ವ್ಯಕ್ತಪಡಿಸಿದರು.

ಇಲ್ಲಿವರೆಗೂ ನೌಕಾಪಡೆ, ಕೋಸ್ಟ್‌ಗಾರ್ಡ್ ಮೂಲಕ ನೀರಿನಲ್ಲಿ ಮಾತ್ರ ಕಾರ್ಯಾಚರಣೆ ನಡೆಸಲಾಗಿದೆ. ಬಂದರು, ನದಿ ವ್ಯಾಪ್ತಿಗಳಲ್ಲಿ ಹುಡುಕಾಟ ಸಮರ್ಪಕವಾಗಿ ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯ ಪೊಲೀಸರು, ನಾಪತ್ತೆಯಾದ ಮೀನುಗಾರರ ಕುಟುಂಬಸ್ಥರು ಹುಡುಕಾಟಕ್ಕೆ ಹೋಗಿದ್ದಾರೆ. ಮಹತ್ವದ ಸುಳಿವು ಲಭ್ಯವಾಗದ ಹಿನ್ನೆಲೆಯಲ್ಲಿ ಹುಡುಕಾಟಕ್ಕೆ ತೆರಳಿದ ಎಲ್ಲರೂ ಹಿಂತಿರುಗಿದ್ದೇವೆ. ಭೂಸೇನೆ, ಇಂಟೆಲಿಜೆನ್ಸ್ ಅನ್ನು ಸಮರ್ಪಕವಾಗಿ ಬಳಸಿಕೊಂಡು ಪತ್ತೆ ಕಾರ್ಯಾಚರಣೆ ಮಾಡಬೇಕು ಎಂದು ಒತ್ತಾಯಿಸಿದರು.

ಎಲ್ಲೆಲ್ಲಿ ಹುಡುಕಾಡಿದ್ದರು?: ಮಲ್ಪೆಯಲ್ಲಿ ದೂರು ದಾಖಲಾದ ಬಳಿಕ ಪೊಲೀಸರು, ಮೀನುಗಾರರು ಸೇರಿ ಮಹಾರಾಷ್ಟ್ರ ರಾಜ್ಯದ ಸಿಂಧುದುರ್ಗ ಜಿಲ್ಲೆಯ ಕಿರಣ್‌ಪಣಿ, ರೇಡಿ, ವೆಂಗುರ್ಲ, ನಿವತಿ, ಗೋವಾದ ಮಲ್ವಾನ್, ಅಚಿರ, ದೇವಗಡ್, ವಿಜಯದುರ್ಗ ಮೀನುಗಾರಿಕೆ ಬಂದರಿನಲ್ಲಿ ಹುಡುಕಾಟ ನಡೆಸಿದ್ದಾರೆ. ಅಲ್ಲಿನ ಬಂದರು ಮತ್ತು ನದಿಗಳ ತಟದಲ್ಲಿ ಹುಡುಕಾಟ ನಡೆದಿತ್ತು. ಇನ್ನೊಂದು ಹಂತದಲ್ಲಿ ಗೋವಾದ ಬೆತುಲ್, ಪಣಜಿಯಲ್ಲಿ ಹುಡುಕಾಟ ನಡೆಸಲಾಗಿದೆ. 370 ಬೋಟು, ಕೋಸ್ಟ್‌ಗಾರ್ಡ್ ಬೋಟ್‌ನಲ್ಲಿ ಹುಡುಕಾಟ ನಡೆಸಿದ್ದೆವು. ನಮ್ಮ ಕಷ್ಟಕ್ಕೆ ಅಲ್ಲಿನ ಮೀನುಗಾರರು ಸ್ಪಂದಿಸುವುದಿಲ್ಲ, ಅವರನ್ನು ಮಾತನಾಡಿಸುವ ಹಾಗೆಯೇ ಇಲ್ಲ. ಉಡುಪಿ, ಮಂಗಳೂರಿನ ಕೆಲವರು ಅಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಅವರು ಸ್ವಲ್ಪ ಸಹಾಯ ಮಾಡಿದರು ಎನ್ನುತ್ತಾರೆ ಹುಡುಕಾಟಕ್ಕೆ ತೆರಳಿದ್ದ ಮೀನುಗಾರರು. ನದಿ ಶೋಧ ಕಾರ್ಯಾಚರಣೆ, ಬಂದರಿನಲ್ಲಿ ಹುಡುಕಾಟ ವ್ಯವಸ್ಥಿತ ಮತ್ತು ಯೋಜನಾಬದ್ಧವಾಗಿ ನಡೆದಿಲ್ಲ ಎಂದು ಮೀನುಗಾರರೇ ಆರೋಪಿಸಿದ್ದಾರೆ.

ಜನಪ್ರತಿನಿಧಿಗಳು ಕೇಂದ್ರಕ್ಕೆ ಒತ್ತಡ ಹೇರಲಿ: ಮೀನುಗಾರರು ನಾಪತ್ತೆಯಾದುದನ್ನು ಸಾಮಾನ್ಯ ಪ್ರಕರಣವೆಂಬಂತೆ ಪರಿಗಣಿಸಿದಂತಿದೆ. ಇದು ಏಳು ಮೀನುಗಾರರು, ಅವರನ್ನು ನೆಚ್ಚಿಕೊಂಡ ಕುಟುಂಬದವರ ಬದುಕಿನ ಪ್ರಶ್ನೆ. ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಮಿಲಿಟರಿ ಕಾರ್ಯಾಚರಣೆ, ಎಲ್ಲ ವಿಧದ ರಕ್ಷಣಾ ತಂತ್ರಜ್ಞಾನ ಸೌಲಭ್ಯ ಪಡೆದು ಮೀನುಗಾರರನ್ನು ಪತ್ತೆ ಮಾಡಬಹುದು. ಕರಾವಳಿಯ ಜನಪ್ರತಿನಿಧಿಗಳು ಕೇಂದ್ರದ ಮೇಲೆ ಇನ್ನಷ್ಟು ಒತ್ತಡ ಹೇರಬೇಕು ಎಂದು ನಾಪತ್ತೆಯಾದ ಮೀನುಗಾರ ದಾಮೋದರ್ ಅವರ ಬಾವ ಉದಯ ಬಂಗೇರ ಆಗ್ರಹಿಸಿದರು.

ಬೋಟು ಡಿಕ್ಕಿ ಸಾಧ್ಯವೇ ಇಲ್ಲ: ಹಡಗೊಂದಕ್ಕೆ ಮೀನುಗಾರಿಕೆ ಬೋಟು ಡಿಕ್ಕಿಯಾಗಿದೆ ಎಂದು ಸುದ್ದಿ ಕೇಳಿಬರುತ್ತಿದೆ. ಆದರೆ ಇದು ಸಾಧ್ಯವೇ ಇಲ್ಲ ಎಂದು ದಾಮೋದರ್ ಅವರ ಸಹೋದರ ಗಂಗಾಧರ್ ಹೇಳುತ್ತಾರೆ. ರಾತ್ರಿ ವೇಳೆ ಬೋಟು ಸಂಚರಿಸುತ್ತಿದ್ದರೆ ಪಾಸಿಂಗ್ ಲೈಟ್, ಮೀನುಗಾರಿಕೆ ನಡೆಸದೇ ಲಂಗರು ಹಾಕಿದ್ದಾಗ ಸ್ಟಾಪ್‌ಲೈಟ್ ನಾಲ್ಕೂ ದಿಕ್ಕಿನಲ್ಲಿ 1 ಕಿ.ಮೀ. ದೂರಕ್ಕೆ ಬೆಳಕು ಚೆಲ್ಲುವ ಲೈಟಿಂಗ್ ವ್ಯವಸ್ಥೆ ಬೋಟ್‌ನಲ್ಲಿರುತ್ತದೆ. ದೂರದಲ್ಲೇ ಹಡಗಿಗೆ ಬೋಟು ಇರುವ ಬಗ್ಗೆ ತಿಳಿಯುತ್ತದೆ. ಹೀಗಿರುವಾಗ ಡಿಕ್ಕಿ ಸಂಭವಿಸುವುದು ಹೇಗೆ ಎಂದು ಪ್ರಶ್ನಿಸುತ್ತಾರವರು.

ಕಣ್ಣೀರು ಹಾಕಿದ ಅಕ್ಕ: ನಮ್ಮ ಮನೆಯ ಮಗನಿಗೆ ಏನೂ ಆಗಿಲ್ಲ, ಕಳ್ಳರು ಅವರನ್ನು ಎಲ್ಲೋ ಬಚ್ಚಿಟ್ಟಿದ್ದಾರೆ. ನೀರಿನಲ್ಲಿ ಮಾತ್ರ ಹುಡುಕಾಟ ಮಾಡಲಾಗುತ್ತಿದೆ, ಅವರನ್ನು ಸುರಕ್ಷಿತವಾಗಿ ಕರೆ ತರಲು ಯಾರೂ ಗಂಭೀರವಾಗಿ ಆಲೋಚಿಸುತ್ತಿಲ್ಲ ಎಂದು ದಾಮೊದರ್ ಅವರ ಅಕ್ಕ ರಮಣಿ ಕಣ್ಣೀರು ಹಾಕಿದರು. ನಾಪತ್ತೆಯಾದ ಬೋಟ್ ಮಾಲೀಕ ಚಂದ್ರಶೇಖರ ಕೋಟ್ಯಾನ್ ಮನೆಯಲ್ಲೂ ದುಃಖದ ವಾತಾವರಣ ಮಡುಗಟ್ಟಿದೆ.

ವೀರಭದ್ರನಲ್ಲಿ ಪ್ರಾರ್ಥನೆ: ಕಲ್ಯಾಣಪುರ ಸಂತೆಕಟ್ಟೆ ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದಲ್ಲಿ ಸ್ಥಳ ತಂತ್ರಿಗಳಾದ ಬ್ರಹ್ಮಶ್ರೀ ಪುತ್ತೂರು ಹಯವದನ ತಂತ್ರಿಗಳ ಮೂಲಕ, ಪ್ರಧಾನ ಮೊಕ್ತೇಸರ ಕೆ.ಜ್ಯೋತಿಪ್ರಸಾದ್ ವಿ.ಶೆಟ್ಟಿಗಾರ್ ನೇತೃತ್ವದಲ್ಲಿ ಮೀನುಗಾರರ ಸುರಕ್ಷಿತ ಮರಳುವಿಕೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ದೇವಸ್ಥಾನ ಜೀರ್ಣೋದ್ಧಾರ ಸಂದರ್ಭದಲ್ಲಿ ಮೊಗವೀರ ಸಮಾಜದ ಸಹಕಾರವನ್ನೂ ಸ್ಮರಿಸಲಾಯಿತು.

Stay connected

278,739FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...