More

    ಇದಪ್ಪಾ ಅದೃಷ್ಟ ಅಂದ್ರೆ! ಬಡ ಮೀನುಗಾರನನ್ನು ಕೋಟ್ಯಾಧಿಪತಿ ಮಾಡಿದ ತಿಮಿಂಗಿಲ ವಾಂತಿ

    ಬ್ಯಾಂಕಾಕ್​: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಕೆಲವೊಮ್ಮೆ ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಮೀನುಗಾರನ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.

    ಹೌದು, ಮೀನುಗಾರನೊಬ್ಬ ಮೀನಿನ ವಾಂತಿಯಿಂದಲೇ ಮಿಲಿಯನೇರ್​ ಆಗಿರುವ ಬಲು ಅಪರೂಪದ ಘಟನೆ ಥಾಯ್ಲೆಂಡ್​ನಲ್ಲಿ ನಡೆದಿದೆ. ಸಮುದ್ರದ ದಂಡೆಯಲ್ಲಿ ನಡೆದು ಹೋಗುತ್ತಿದ್ದ ಮೀನುಗಾರನಿಗೆ ಬಂಡೆಗಲ್ಲಿನಂತಹ ಎರಡು ಉಂಡೆಗಳು ಸಿಕ್ಕಿವೆ. ಬಹಳ ಕುತೂಹಲದಿಂದ ತೆಗೆದುಕೊಂಡನಿಗೆ ಮುಂದೆ ಬಹಳ ಅಚ್ಚರಿಯೇ ಕಾದಿತ್ತು. ಆ ಉಂಡೆಯು ತಿಮಿಂಗಿಲದ ವಾಂತಿಯಾಗಿದ್ದು, ಇದೀಗ ಅದು 3.2 ಮಿಲಿಯನ್​ ಡಾಲರ್​ (23,55,42,720 ರೂಪಾಯಿ)ಗೆ ಮಾರಾಟವಾಗಿ ಮೀನುಗಾರ ಮಿಲಿಯನೇರ್ ಆಗಿದ್ದಾನೆ. ​

    ಇದನ್ನೂ ಓದಿ: ಬಿಗ್​ಬಾಸ್​ನಿಂದ ಹೊರಬಿದ್ದ ಬೆನ್ನಲ್ಲೇ ಪೊಲೀಸ್​ ಠಾಣೆ ಮೆಟ್ಟಿಲೇರಿದ ನಟಿ ಮೊನಾಲ್​ ಗಜ್ಜರ್​..!

    ಇದಪ್ಪಾ ಅದೃಷ್ಟ ಅಂದ್ರೆ! ಬಡ ಮೀನುಗಾರನನ್ನು ಕೋಟ್ಯಾಧಿಪತಿ ಮಾಡಿದ ತಿಮಿಂಗಿಲ ವಾಂತಿ

    ತಿಂಗಳಿಗೆ 670 ಡಾಲರ್ (49,316 ರೂಪಾಯಿ)​ ಸಂಪಾದನೆ ಮಾಡುತ್ತಿದ್ದ ಮೀನುಗಾರ ಅಂದಾಜು 220 ಪೌಂಡ್ಸ್ (99 ಕೆಜಿ) ತೂಕದ ತಿಮಿಂಗಿಲದ ವಾಂತಿಯ ಉಂಡೆ ಸಿಗುವವರೆಗೂ ಆತನ ಜೀವನ ಹೋರಾಟವೇ ಆಗಿತ್ತು. ಇದೀಗ ಆತನ ಜೀವನವೇ ಬದಲಾಗಿದ್ದು, ಬಡ ಮೀನುಗಾರ ಇದೀಗ ಮಿಲಿಯನೇರ್​ ಆಗಿದ್ದಾರೆ.

    ತಿಮಿಂಗಿಲ ವಾಂತಿಗೆ ಅಷ್ಟೊಂದು ಬೇಡಿಕೆನಾ?
    ತಿಮಿಂಗಿಲ ವಾಂತಿಯಿಂದ ಮೀನುಗಾರ ಮಿಲಿಯನೇರ್ ಆದನಾ ಎಂಬುದೇ ಅನೇಕರಿಗೆ ಸೋಜಿಗದ ಸಂಗತಿಯಾಗಿದೆ. ಹೌದು, ಚಾನೆಲ್​ ನಂ. 5 ನಂತಹ ವಿಶ್ವದಲ್ಲೇ ದುಬಾರಿ ಮತ್ತು ಐಷಾರಾಮಿ ಸುಗಂಧ ದ್ರವ್ಯಗಳನ್ನು ತಯಾರಿಸಲು ಬೇಕಾದ ಅಗತ್ಯ ಪದಾರ್ಥಗಳು ತಿಮಿಂಗಿಲದ ವಾಂತಿಯಲ್ಲಿದೆಯಂತೆ.

    ಇದನ್ನೂ ಓದಿ: PHOTOS| ವಿಶ್ವದ ಒಂಟಿ ಮನೆಯ ರಹಸ್ಯ ಕೇಳಿದ್ರೆ ನಿಮಗೆಲ್ಲ ಅಚ್ಚರಿಯಾಗೋದು ಗ್ಯಾರೆಂಟಿ..!

    ಇದಪ್ಪಾ ಅದೃಷ್ಟ ಅಂದ್ರೆ! ಬಡ ಮೀನುಗಾರನನ್ನು ಕೋಟ್ಯಾಧಿಪತಿ ಮಾಡಿದ ತಿಮಿಂಗಿಲ ವಾಂತಿ

    ವಾಂತಿಯ ಗುಣಮಟ್ಟದ ಪರೀಕ್ಷೆ ನಡೆಯುವ ಮುನ್ನವೇ ಮೀನುಗಾರನಿಗೆ 3,20,000 ಡಾಲರ್​ (2,35,54,272 ರೂಪಾಯಿ) ಆಫರ್​ ನೀಡಲಾಗಿದ್ದು, ವಾಂತಿ ಉಂಡೆಯ ಒಟ್ಟಾರೆ ಬೆಲೆ 3.2 ಮಿಲಿಯನ್​ ಡಾಲರ್​ (23,55,42,720 ರೂಪಾಯಿ) ಆಗಿದೆ ಎಂದು ದಿ ಸನ್​ ವೆಬ್​ಸೈಟ್​ ವರದಿ ಮಾಡಿದೆ.

    ಅದೃಷ್ಟವಂತನ್ಯಾರು?
    ನಾರಿಸ್​ ಸುವಾನ್​ಸ್ಯಾಂಗ್​ (60) ಎಂಬಾತನೇ ಅದೃಷ್ಟಶಾಲಿ. ದಕ್ಷಿಣ ಥಾಯ್ಲೆಂಡ್​ನ ನಖೋನ್​ ಸಿ ಥಾಮ್ಮರತ್ ಸಮುದ್ರ ತೀರದಲ್ಲಿ ನಡೆದು ಹೋಗುವಾಗ ಬಣ್ಣಗೆಟ್ಟಂತಹ ಅನೇಕ ಬಂಡೆಯಂತಹ ಉಂಡೆಗಳು ನೀರಿನಲ್ಲಿ ತೊಳೆದಿರುವಂತೆ ಬಿದ್ದಿರುವುದು ಸುವಾನ್​​ಸ್ಯಾಂಗ್​ ಕಣ್ಣಿಗೆ ಬಿದ್ದಿದೆ. ತಕ್ಷಣ ಸೋದರಸಂಬಂಧಿಗಳನ್ನು ಸಹಾಯಕ್ಕೆ ಕರೆದಿದ್ದಾನೆ. ಬಳಿಕ ಉಂಡೆಗಳನ್ನು ಸಂಗ್ರಹಿಸಿ ಮನೆಗೆ ತೆಗೆದುಕೊಂಡು ಏನಿರಬಹುದೆಂದು ಪರೀಕ್ಷಿಸಿದ್ದಾರೆ. ಬೆಂಕಿಯಲ್ಲಿ ಉಂಡೆಯನ್ನು ಸುಟ್ಟಾಗ ಅದು ಕರಗಿ ಸುವಾಸನೆ ಬೀರಿದೆ. ಇದಾದ ಬಳಿಕ ಅದರ ಅಸಲಿಯತ್ತು ತಿಳಿದು ಸ್ವತಃ ಆತನಿಗೆ ಅಚ್ಚರಿಯಾಗಿದೆ. ಬಳಿಕ ಉದ್ಯಮಿಯೊಬ್ಬರನ್ನು ಸಂಪರ್ಕಿದ್ದಾರೆ. ಗುಣಮಟ್ಟವನ್ನು ಪರಿಶೀಲಿಸುವುದಾಗಿ ಹೇಳಿರುವ ಉದ್ಯಮಿ ಅದರ ಮೌಲ್ಯವನ್ನು ಸಹ ತಿಳಿಸಿದಾಗ ಸುವಾನ್​ಸ್ಯಾಂಗ್​ಗೆ ಶಾಕ್​ ಆಗಿದೆ.

    ಇದನ್ನೂ ಓದಿ: ಅಮೆರಿಕದಲ್ಲಿ ಹಿಮಪಾತ ಹೊಡೆತ!; ಲಕ್ಷಾಂತರ ಮನೆಗಳ ವಿದ್ಯುತ್ ಸಂಪರ್ಕ ಕಡಿತ

    ಇದಪ್ಪಾ ಅದೃಷ್ಟ ಅಂದ್ರೆ! ಬಡ ಮೀನುಗಾರನನ್ನು ಕೋಟ್ಯಾಧಿಪತಿ ಮಾಡಿದ ತಿಮಿಂಗಿಲ ವಾಂತಿ

    ವಸ್ತು ಸಿಕ್ಕ ತಕ್ಷಣ ಪೊಲೀಸರಿಗೆ ತಿಳಿಸುವುದು ವಾಡಿಕೆ. ಈ ಬಗ್ಗೆಯು ಮಾತನಾಡಿರುವ ಸುವಾನ್​ಸ್ಯಾಂಗ್, ದೂರು ನೀಡಿದರೆ ವಿಚಾರ ಎಲ್ಲರಿಗೂ ತಿಳಿದು ಕಳುವು ಮಾಡಬಹುದೆಂಬ ಭಯದಿಂದ ಹೇಳಿರಲಿಲ್ಲವಂತೆ. ಇದೀಗ ಸುಂಗಂಧ ದ್ರವ್ಯ ತಯಾರಕರು ಮುಂದೆ ಬಂದಿದ್ದು, ಸುವಾನ್​ಸ್ಯಾಂಗ್​ಗೆ ಹಣದ ಹೊಳೆಯನ್ನೇ ಹರಿಸುತ್ತಿದ್ದು, ಭಾಗ್ಯದ ಬಾಗಿಲೇ ತೆರೆದಿದೆ. (ಏಜೆನ್ಸೀಸ್​)

    ಮದುವೆ ದಿನವೇ ಆತ್ಮಹತ್ಯೆಗೆ ಶರಣಾದ ಜೋಡಿ: ಹೊಸಬಾಳು ಆರಂಭಿಸುವ ಮುನ್ನವೇ ದುರಂತ ಸಾವು!

    ಮದ್ವೆಯಾದ ಒಂದೇ ತಿಂಗಳಲ್ಲಿ ನವದಂಪತಿ ಆತ್ಮಹತ್ಯೆ ಯತ್ನ: ಹುಡುಗ ಸಾವು, ಕಣ್ಣೀರು ತರಿಸುವಂತಿದೆ ಡೆತ್​ನೋಟ್​ ಬರಹ!

    ಬೆಳ್ಳಂಬೆಳಗ್ಗೆ ಬಸ್​ಗೆ ಕಾಯುತ್ತಿದ್ದ ಯುವತಿ ಬಳಿ ಬಂದ ಆಟೋ ಚಾಲಕ: ಮಾತು ನಂಬಿದವಳಿಗೆ ಕಾದಿತ್ತು ಶಾಕ್!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts