More

    ಮೀನುಗಾರಿಕೆ ಮಿನಿಸ್ಟರ್ ಕೆಂಡಾಮಂಡಲ-ಕಾರಣವೇನು..?

    ಕಾರವಾರ: ಪ್ರೀತಿಯಿಂದ ಬಡವರ ಕೆಲಸ ಮಾಡುವವರಿದ್ದರೆ ಜಿಲ್ಲೆಯಲ್ಲಿರಿ ಎಂದು ಮೀನುಗಾರಿಕೆ‌ ಮಿನಿಸ್ಟರ್ ಎಚ್ಚರಿಸಿದರು.

    ಇಲ್ಲದಿದ್ದರೆ, ನಾನು ನಿಮಗೆ ತೊಂದರೆ ನೀಡುವುದಿಲ್ಲ. ನಿಮ್ಮ‌ ಊರಿಗೆ ಕಳಿಸುತ್ತೇನೆ ಹೀಗೆ ಹೇಳಿದವರು ಮೀನುಗಾರಿಕೆ‌ ಸಚಿವ ಮಂಕಾಳ ವೈದ್ಯ.

    ಕಾರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅವರು ಬುಧವಾರ ಅಧಿಕಾರಿಗಳ ಸಭೆ ನಡೆಸಿದರು..

    ಕೆಲ ಅಧಿಕಾರಿಗಳ ಅಸಮರ್ಪಕ ಉತ್ತರ ಕೇಳಿ ಕೆಂಡಾಮಂಡಲರಾದರು. ಐದಾರು ವರ್ಷಗಳಿಂದ ಒಂದೇ ಕಡೆ ಬೀಡು ಬಿಟ್ಟ ಅಧಿಕಾರಿಗಳ ಹೆಸರುಗಳನ್ನು ಪಟ್ಟಿ ಮಾಡುವಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಸೂಚಿಸಿದರು.

    ಇದನ್ನೂ ಓದಿ: ಅಡುಗೆ ಮಾಡಲು ಚಿಪ್ಪು ಕತ್ತರಿಸಿದವರಿಗೆ ಅಚ್ಚರಿ ಕಾದಿತ್ತು!!

    ದೊಡ್ಜಿ ಲ್ಲೆಯಲ್ಲಿ ಶಾಲೆ, ಅಂಗನವಾಡಿ, ಆರೋಗ್ಯ, ವಿದ್ಯುತ್ ಮತ್ತು ಕುಡಿಯುವ ನೀರು ಈ ಸೌಲಭ್ಯಗಳನ್ನು ನೀಡುವ ಇಲಾಖೆಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಾಹಿಸಬೇಕು ಎಂದರು.

    ಆಯಾ ಇಲಾಖೆಗಳ ಸಿಬ್ಬಂದಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು ಆಯಾ ಇಲಾಖೆಯಲ್ಲಿ ಒಟ್ಟು ಮಂಜೂರಾದ ಹುದ್ದೆಗಳು ಮತ್ತು ಪ್ರಸ್ತುತ ಕಾರ್ಯನಿವಹಿಸುತ್ತಿರುವ ಸಿಬ್ಬಂದಿಗಳ ಅಂಕಿ ಸಂಖ್ಯೆಗಳ ಮಾಹಿತಿ ಪಡೆದು ಕೊಂಡರು ಎಲ್ಲದಕ್ಕಿಂತ ಮುಖ್ಯವಾಗಿ ಈ ಜಿಲ್ಲೆಯಲ್ಲಿ ಆರೋಗ್ಯ ಮತ್ತು ಹೆಸ್ಕಾಂ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು
    ಮಳೆಗಾಲದ ಸಮಯದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿರುತ್ತದೆ ಅದರಿಂದ ತುರ್ತು ಸಿಬ್ಬಂದಿಗಳು ಮತ್ತು ಅಗತ್ಯವಿರುವ ಉಪಕಾರಣಗನ್ನು ಶೇಖರಣೆ ಮಾಡಿ ಇಟ್ಟುಕೊಳ್ಳಿ ಹಾಗಿಯೇ ಸಾರ್ವಜನಿಕರು ಐ ಪಿ ಸೆಟ್ ಗೆ ಅರ್ಜಿ ಸಲ್ಲಿಸಿದರೆ ವಿಳಂಬ ಮಾಡದೇ 15 ದಿನಗೋಳಗಾಗಿ ಬಡವರಿಗೆ ಕರೆಂಟ್ ನೀಡುಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.

    ಮಳೆಗಾಲದಲ್ಲಿ ರಸ್ತೆ ಬದಿಯಲ್ಲಿ ನೀರು ನಿಲ್ಲದ ರೀತಿಯಲ್ಲಿ ತಡೆಯಲು ಕ್ರಮವಹಿಸಬೇಕು. ಚರಂಡಿಗಳ ಬ್ಲಾಕ್ ಆಗಬಾರದು ರಸ್ತೆ ಮೇಲೆ ನೀರು ನಿಲ್ಲಬಾರದು ಸಾರ್ವಜನಿಕರಿಗೆ, ಶಾಲೆಗೆ ಹೋಗುವ ಮಕ್ಕಳಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಆಯಾ ತಾಲೂಕಿನ ಪಿಡಿಯೋ ಪಿಡಿಓ ಕೆಲಸ ನಿರ್ವಹಿಸಬೇಕು ಎಂದರು.

    ಐಆರ್ ಬಿ ಅಡಿಯಲ್ಲಿ ಸಿರೂರು ಬೌಂಡರಿಯಿಂದ ಗೋವಾ ಬೌಂಡರಿ ರಸ್ತೆಗಳು ಎಷ್ಟು ಪ್ರಮಾಣದಲ್ಲಿ ಕೆಲಸವಾಗಿದೆ. ಭಟ್ಕಳ್ ಹೊನ್ನಾವರ ಕ್ಷೇತ್ರದಲ್ಲಿ ಕೆಲಸ ಎಷ್ಟಾಗಿದೆ ಒಂದು ವೇಳೆ ಕೆಲಸವಾಗದಿದ್ದಲ್ಲಿ ಕಾರಣ ನೀಡವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಸಮರ್ಪಕ ರಸ್ತೆಯಿಂದ ಎಷ್ಟೋ ಸಾವು ನೋವುಗಳು ಸಂಭಾವಿಸಿವೆ ಬಡವರಿಗೆ ಉಪಯೋಗವಾಗದೆ ಇರುವ ರಸ್ತೆ ಕಂಪನಿಗಳು ನಮ್ಮ ಜಿಲ್ಲೆಗೆ ಅವಶ್ಯಕತೆವಿರುವುದಿಲ್ಲಾ. ಕೆಲಸ ಮಾಡದ ಕಂಪನಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

    ಜೆಲ್ಲೆಯ ಎಲ್ಲ ಪ್ರಾಥಮಿಕ ಅರೋಗ್ಯ ಕೇಂದ್ರಗಳಿಗೆ ಆರೋಗ್ಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲಿಸಬೇಕು ವೈದ್ಯರು ಮತ್ತು ಸಿಬಂದಿಗಳ ಕೊರತೆವಿದ್ದಲ್ಲಿ ಕೂಡಲೇ ನೇಮಕ ಮಾಡಿಕೊಳ್ಳಬೇಕು ಎಂದರು. ಸರ್ಕಾರಿ ಆಸ್ಪತ್ರೆಗಳಿಗೆ ಬಡ ಜನರು ಬರುವರು ಹೊರತು ಶ್ರೀಮಂತರು ಬರುವುದಿಲ್ಲ ಇಂತಹ ಬಡ ಜನರಿಗೆ ಯೋಗ್ಯ ಅರೋಗ್ಯ ಸೌಲಭ್ಯಗಳು ಸುಲಭವಾಗಿ ಸಿಗುವಂತಗಬೇಕು. ಸಮಸ್ಯೆಗಳೆನಾದರೂ ಇದ್ದಲ್ಲಿ ಜಿಲ್ಲಾಧಿಕಾರಿಗಳಿಗೆ ಇಲ್ಲವೇ ತಮ್ಮ ಗಮನಕ್ಕೆ ತರುವಂತೆ ಸೂಚಿಸದರು.

    ಜಲ್ ಜೀವನ ಮಿಷನ್ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಎಷ್ಟು ಪ್ರಗತಿ ಸಾದಿಸಿದ್ದೀರಿ ಈ ವರೆಗೆ ಕುಡಿಯುವ ನೀರಿನ ನಲ್ಲಿಗಳನ್ನು ಸ್ಥಾಪಿಸಿದ್ದೀರಾ ಆ ನಲ್ಲಿಗಳಲ್ಲಿ ಸಮರ್ಪಕವಾಗಿ ನೀರು ಬರುತ್ತಿದೆಯೇ ಎಂಬ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದರು.

    ಮೀನುಗಾರಿಕೆ ಇಲಾಖೆಯಿಂದ ಮೀನುಗಾರರಿಗೆ ಇದುವರೆಗೂ ಸರಿಯಾಗಿ ಸೀಮೆ ಎಣ್ಣೆ ನೀಡುತ್ತಿಲ್ಲ ಕೇವಲ 5 ತಿಂಗಳು ಮಾತ್ರ ನೀಡುತ್ತಿದ್ದೀರಿ. ಆಗಸ್ಟ್ ತಿಂಗಳಿನಿಂದ 10 ತಿಂಗಳ ಕಾಲ ಸೀಮೆ ಎಣ್ಣೆ ನೀಡಬೇಕೆಂದು ಹೇಳಿದರು. ಹಾಗೆಯೇ ಸಂಕಷ್ಟ ಪರಿಹಾರ ಯೋಜನೆಯಡಿಯಲ್ಲಿ ಕಳೆದ ಎರೆಡು ವರ್ಷದಿಂದ 40 ಜನ ಮೀನುಗಾರರಿಗೆ 6 ಲಕ್ಷ ಪರಿಹಾರ ಪಾವತಿಸುವುದು ಬಾಕಿ ಇದ್ದು ಈ ವರೆಗೂ ಅಂತವರಿಗೆ ಪರಿಹಾರ ಪಾವತಿಯಾಗಿರುವುದಿಲ್ಲ ಕೂಡಲೇ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಿದರು.

    ಜಿಲ್ಲೆಯಲ್ಲಿ ಸಮುದ್ರ ಕೊರತೆ ಆಗುವುದಿಕ್ಕಿಂತ ಪೂರ್ವದಲ್ಲಿ ಎಲ್ಲೆಲ್ಲಿ ಸಮುದ್ರ ಕೊರತೆ ಆಗುತ್ತದೆ ಎಂಬುವುದನ್ನು ಪತ್ತೆ ಹಚ್ಚಿ ತಡೆಯಲು ಕ್ರಮವಹಿಸಬೇಕು. ಹಾಗೆಯೇ ಪಂಚಾಯತ್ ರಾಜ್, P. W. d, ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಯವರು ಎಚ್ಚರಿಕೆಯಿಂದ ಕಾರ್ಯ ನಿರ್ವವಹಿಸಬೇಕು ಎಂದರು.

    ಸಭೆಯಲ್ಲಿ ಜಿಲ್ಲಾ ಕಾರವಾರ-ಅಂಕೋಲಾ ಶಾಸಕ ಸತೀಶ್ ಕೆ ಸೈಲ್, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕಧಿಕಾರಿ ಈಶ್ವರ ಕುಮಾರ ಕಾಂದೂ, ಪೊಲೀಸ್ ವರಿಷ್ಟಧಿಕಾರಿ ವಿಷ್ಣುವರ್ಧನ್. ಎನ್, ಪ್ರೊಬೆಷನರಿ ಐಎಎಸ್ ಅಧಿಕಾರಿ ಜುಬೀನ ಮಹಾಪಾತ್ರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತ ಕುಮಾರ, ಉಪ ವಿಭಾಗಧಿಕಾರಿ ಜಯಲಕ್ಷ್ಮಿ ರಾಯ್ ಕೋಡ್ ಡಿ ವೈ ಎಸ್ ಪಿ ವಾಲೆಂಟೈನ್ ಡಿಸೋಜಾ ಜಿಲ್ಲಾ ಮತ್ತು ತಾಲೂಕಿನ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts