ಹಡಗು ಬೆನ್ಹತ್ತಿದ ನೌಕಾ ಪಡೆ

ಉಡುಪಿ: ಬೋಟು ನಾಪತ್ತೆಯಾದ ರಾತ್ರಿ ಎರಡು ಗಂಟೆ ಸುಮಾರಿಗೆ ಸಿಂಧುದುರ್ಗ, ರತ್ನಗಿರಿ ಭಾಗ (ಅರೆಬೀಯನ್ ಸೀ)ದಲ್ಲಿ ಒಂದು ದೊಡ್ಡ ಹಡಗಿಗೆ (ಕ್ರ್ಯೂಸ್) ಸುವರ್ಣ ತ್ರಿಭುಜ ಬೋಟ್​ನ ವೈರ್​ಲೆಸ್ ಕನೆಕ್ಟ್ ಆದ ಮೆಸೇಜ್ ರವಾನೆಯಾಗಿದೆ ಎಂಬ ಮಹತ್ವದ ಮಾಹಿತಿ ಲಭ್ಯವಾಗಿದೆ.

ಈ ಆಕ್ಟಿವಿಟಿ ನೌಕಪಡೆ ಫ್ರೀಕ್ವೆನ್ಸಿಯಲ್ಲಿ ರೆಕಾರ್ಡ್ ಆಗಿದ್ದು, ಎರಡು ದೊಡ್ಡ ಹಡಗುಗಳು ಈ ಮಾರ್ಗದಲ್ಲಿ ಸಂಚರಿಸಿದ್ದವು ಎಂಬ ಮಾಹಿತಿ ಆಧರಿಸಿ ನೌಕಾಪಡೆ ಉನ್ನತ ಮಟ್ಟದಲ್ಲಿ ತನಿಖೆ ನಡೆಸುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಮಧ್ಯರಾತ್ರಿ 1 ರಿಂದ ಬೆಳಗ್ಗೆ 6 ಗಂಟೆವರೆಗೆ ಹಾದುಹೋದ ಎಲ್ಲ ಹಡಗುಗಳ ವಿವರ ಪರಿಶೀಲಿಸಲಾಗುತ್ತಿದ್ದು, ಹಲವು ಆಯಾಮಗಳಲ್ಲಿ ನೌಕಾಪಡೆ ತನಿಖೆ ಮಾಡಲಿದೆ.

ಇನ್ನೊಂದೆಡೆ, ಮಹಾರಾಷ್ಟ್ರದ ಸಿಂದು ಧುರ್ಗ ಎಸ್​ಪಿ, ಉಡುಪಿ ಎಸ್​ಪಿ ನಿರಂತರ ಸಂಪರ್ಕದಲ್ಲಿದ್ದಾರೆ. ಗೋವಾದ ಮಲ್ವಾನ್​ಗೆ, ಮಹಾರಾಷ್ಟ್ರದ ಸಿಂಧುದುರ್ಗ, ರತ್ನಗಿರಿಗೆ 5 ಮೀನುಗಾರರನ್ನು ಒಳಗೊಂಡ ಎರಡು ಪೊಲೀಸರ ತಂಡ ತೆರಳಿದೆ. ಕೇರಳ ಕೊಚ್ಚಿಗೂ ಒಂದು ತಂಡ ತೆರಳಿ, ತನಿಖೆ ಆರಂಭಿಸಿದೆ. ಇನ್ನೊಂದೆಡೆ ಕುಟುಂಬದವರು ಅನ್ನ-ನೀರು ಸೇವಿಸಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ, ಶೋಧಕ್ಕಾಗಿ ಸ್ವತಃ ಮೀನುಗಾರರು ಐದಾರು ತಂಡಗಳಾಗಿ 200 ಬೋಟ್​ಗಳಲ್ಲಿ ಭಾನುವಾರ ಕಡಲಿಗಿಳಿದಿದ್ದಾರೆ.

ಉಡುಪಿ ಮೀನುವಾರರ ನಾಪತ್ತೆ ಪ್ರಕರಣದ ತನಿಖೆ ನಡೆದಿದೆ. ಕೇಂದ್ರದ ಸಹಕಾರವೂ ಸಿಕ್ಕಿದೆ. ಅಕ್ಕಪಕ್ಕದ ರಾಜ್ಯಗಳ ಗೃಹ ಇಲಾಖೆ ಸಹಕಾರವನ್ನೂ ಕೋರಿ ಪತ್ರ ಬರೆಯಲಾಗಿದೆ. ಸದ್ಯದಲ್ಲೆ ಮಹಾರಾಷ್ಟ್ರದ ಗೃಹ ಸಚಿವರನ್ನು ಭೇಟಿಯಾಗುತ್ತೇನೆ.

| ಎಂ.ಬಿ.ಪಾಟೀಲ್ ಗೃಹ ಸಚಿವ