ಕಂಪ್ಲಿ: ಇಲ್ಲಿನ ಪುರಸಭೆ ವ್ಯಾಪ್ತಿಯ ಗೋಪಾಲಪುರದಲ್ಲಿ ಬೈಕ್, ಟ್ರ್ಯಾಕ್ಟರ್ ಚಾಲಕರ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿದ್ದ ಕರಿ ಕೋತಿಯನ್ನು ಶನಿವಾರ ರಾತ್ರಿ ಸ್ಥಳೀಯರು ಮೀನು ಬಲೆ ಹಾಕಿ ಹಿಡಿದು ಬೋನಿಗೆ ಹಾಕಿದ್ದಾರೆ.
ಕಳೆದ 20 ದಿನಗಳಿಂದ 35ಕ್ಕೂ ಹೆಚ್ಚು ಬೈಕ್ ಸವಾರರು, ಟ್ರ್ಯಾಕ್ಟರ್ ಚಾಲಕರನ್ನು ಕಚ್ಚಿ ಗಾಯಗೊಳಿಸಿದ್ದ ಕರಿ ಕೋತಿಯ ಉಪಟಳ ಮೀತಿ ಮೀರಿದ್ದರಿಂದ ಸೆರೆಗೆ ಬೋನು ಇರಿಸಲಾಗಿತ್ತು.
ಅಲ್ಲಿನ ನಿವಾಸಿಗಳು ಒಂದಾಗಿ ಮೀನು ಬಲೆಯನ್ನು ಹಾಕಿ ಕೋತಿಯನ್ನು ಹಿಡಿದು ಬೋನಿಗೆ ಹಾಕಿ ನಿಟ್ಟುಸಿರು ಬಿಟ್ಟಿದ್ದಾರೆ. ಕಮಲಾಪುರದ ಅರಣ್ಯ ಇಲಾಖೆಗೆ ಬೋನು ಸಮೇತ ಕಪ್ಪುಕೋತಿಯನ್ನು ಗ್ರಾಮಸ್ಥರು ಕಳುಹಿಸಿಕೊಟ್ಟಿದ್ದಾರೆ.