ಮೀನಿನ ಬಲೆಗೆ ಬಿದ್ದ ಹೆಬ್ಬಾವು

ಹೊಳೆಹೊನ್ನೂರು: ಸಮೀಪದ ವಡೇರಪುರದ ಗ್ರಾಮದಲ್ಲಿ ಹಳ್ಳದಲ್ಲಿ ಮೀನು ಹಿಡಿಯಲು ಹಾಕಿದ್ದ ಬಲೆಗೆ ಹೆಬ್ಬಾವು ಸಿಲುಕಿದೆ. ಗ್ರಾಮದ ವ್ಯಕ್ತಿಯೊಬ್ಬರು ಮೀನು ಹಿಡಿಯಲು ಹಳ್ಳದಲ್ಲಿ ಬಲೆ ಹಾಕಿದ್ದರು. ಇದನ್ನು ಹೊರಕ್ಕೆ ಎಳೆದಾಗ 5 ಅಡಿ ಉದ್ದದ ಹೆಬ್ಬಾವು ಸಿಕ್ಕಿದೆ. ಇದನ್ನು ಗ್ರಾಮಸ್ಥರು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ವಾರದ ಹಿಂದೆಷ್ಟೇ ಶಿವಮೊಗ್ಗ ನಗರದ ಆಲ್ಕೊಳದ ಕೆರೆಯಲ್ಲಿ ಮೀನಿನ ಬಲೆಗೆ ಇದೇರೀತಿ ಹೆಬ್ಬಾವು ಸಿಲುಕಿತ್ತು. ಸ್ಥಳೀಯರು ಇದನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ್ದರು.

Leave a Reply

Your email address will not be published. Required fields are marked *