ಕಾರವಾರ: ಬೋಟ್‌ಗಳೆರಡರ ಮಾಲೀಕ ಹಾಗೂ ಯೂನಿಯನ್ ನಡುವಿನ ಗಲಾಟೆಯಲ್ಲಿ ಸುಮಾರು 9 ಟನ್ ಮೀನು(Fish) ನಗರಸಭೆ ತ್ಯಾಜ್ಯ ವಿಲೇವಾರಿ ಘಟಕದ ಪಾಲಾಗಿದೆ.
ಬೈತಖೋಲ್‌ನಲ್ಲಿ ಮಧುಶ್ರೀ ಹಾಗೂ ಮಂಜುಶ್ರೀ ಎಂಬ ಬೋಟ್‌ಗಳನ್ನು ಹೊಂದಿರುವ ಸಂಘದ ಸದಸ್ಯರಾಗಿರುವ ರತನ್‌ರಾಜ್ ನಾರಾಯಣ ಖಾರ್ವಿ ಅವರಿಗೆ ಅವರಿಗೆ ಯಾವುದೇ ಮುನ್ಸೂಚನೆ, ನೋಟಿಸ್ ನೀಡದೇ ಸಂಘಟನೆಗಳು ಬಹಿಷ್ಕಾರ ಮಾಡಿವೆ ಎಂದು ಅವರು ಪೊಲೀಸ್ ಠಾಣೆ, ಜಿಲ್ಲಾಧಿಕಾರಿ ಕಚೇರಿ, ಹಾಗೂ ಮೀನುಗಾರಿಕೆ ಇಲಾಖೆಗೆ ದೂರು ನೀಡಿದ್ದಾರೆ.
ಮೀನುಗಳನ್ನು ಸಂಘದ ಮೂಲಕ ವಹಿವಾಟು ಮಾಡಲು ಬಿಡುತ್ತಿಲ್ಲ. ಖರೀದಿಸಲು ಭೇರೆ ವ್ಯಾಪಾರಸ್ಥರೂ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಭಾರಿ ನಷ್ಟವಾಗಿದ್ದು, ದೋಣಿಯಲ್ಲೇ ಕೊಳೆತ ಮೀನುಗಳನ್ನು ನಗರಸಭೆ ತ್ಯಾಜ್ಯ ವಿಲೇವಾರಿ ವಾಹನಕ್ಕೆ ಹಸ್ತಾಂತರಿಸಲಾಗಿದೆ ಎಂದು ರತನ್‌ರಾಜ್ ತಿಳಿಸಿದ್ದಾರೆ.
ತ್ಯಾಜ್ಯವಾದ ಬಂಗುಡೆ Fish
ಅ.10 ರಿಂದ ಬೋಟ್‌ಗಳು ಮೀನುಗಾರಿಕೆಗೆ ತೆರಳದಂತೆ ಸೂಚಿಸಿದ್ದಾರೆ. ಎರಡು ಬೋಟ್‌ಗಳಿಂದ 30 ರಷ್ಟು ಕಾರ್ಮಿಕರಿದ್ದು, ಅವವರಿಗೆ ವೇತನ ನೀಡಬೇಕಾಗಿದೆ. ಆದರೂ ಧೈರ್ಯ ಮಾಡಿ ಅ.29 ರಂದು ಬೋಟ್‌ಗಳನ್ನು ಸಮುದ್ರಕ್ಕೆ ಇಳಿಸಿದ್ದು, ಒಟ್ಟು 5 ಟನ್ ಬಂಗುಡೆ ಹಾಗೂ 4 ಟನ್ ಪೆಡಿ ಮೀನು ಸೇರಿ ಸುಮಾರು 6 ಲಕ್ಷ ರೂ.ಗಳ ಮೀನು ಸಿಕ್ಕಿತ್ತು. ಅದನ್ನು ವಾರವಾದರೂ ಸಂಘಟನೆಯ ಮೂಲಕ ವ್ಯಾಪಾರ ಮಾಡಲು ಅವಕಾಶ ನೀಡಿಲ್ಲ ಎಂದು ಅವರು ದೂರಿದ್ದಾರೆ.
ರತನ್‌ರಾಜ್ ದೂರಿನ ಹಿನ್ನೆಲೆಯಲ್ಲಿ ನ.8 ರಂದು ಬೈತಖೋಲ್‌ನಲ್ಲಿ ಮೀನುಗಾರಿಕೆ ಇಲಾಖೆ ಸಭೆ ಪರ್ಸೀನ್ ಬೋಟ್ ಯೂನಿಯನ್ ಹಾಗೂ ಇತರರ ಆಯೋಜಿಸಿರುವುದಾಗಿ ತಿಳಿದುಬಂದಿದೆ. ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆಯನ್ನೂ ಸಭೆಗೆ ಆಹ್ವಾನಿಸಲಾಗಿದೆ.
……………೦೦೦೦೦……………
ರತನ್‌ರಾಜ್ ಅವರಿಗೆ ನಾವು ಬಹಿಷ್ಕಾರ ಹಾಕಿಲ್ಲ. ಬೈತಖೋಲ್ ಗ್ರಾಮಸ್ಥರು ಹಾಗೂ ರತನ್‌ರಾಜ್‌ನ ನಡುವೆ ವಿವಾದವಿದೆ. ಗ್ರಾಮಸ್ಥರು ಪತ್ರವೊಂದನ್ನು ನೀಡಿ, ಮೀನು ಮಾರಾಟಕ್ಕೆ ಅವಕಾಶ ನೀಡದಂತೆ ವಿನಂತಿಸಿದ್ದಾರೆ. ಊರಿನ ಸಮಸ್ಯೆ ಬಗೆಹರಿಸಿಕೊಂಡು ಬಂದಲ್ಲಿ ನಾವು ಮೀನು ಮಾರಾಟಕ್ಕೆ ಅವಕಾಶ ನೀಡುವುದಾಗಿ ತಿಳಿಸಿದ್ದೇವೆ. ಊರಿನ ಜನರು ಹಾಗೂ ಅವರ ನಡುವಿನ ವಿವಾದ ಬಗೆಹರಿದಲ್ಲಿ ಮೀನು ವ್ಯಾಪಾರಕ್ಕೆ ನಮ್ಮದೇನೂ ಆಕ್ಷೇಪವಿಲ್ಲ.
ಗೌರೀಶ ಉಳ್ವೇಕರ್
ಪರ್ಸೀನ್ ಬೋಟ್ ಯೂನಿಯನ್ ಅಧ್ಯಕ್ಷಇದನ್ನೂ ಓದಿ: https://www.vijayavani.net/a-like-minded-meeting-for-shirsi-separate-district-on-16th