ನರೇಗಲ್ಲ: ಸಾವಿತ್ರಿಬಾಯಿ ಫುಲೆ ದೇಶ ಕಂಡ ಮೊತ್ತ ಮೊದಲ ಮಹಿಳಾ ಶಿಕ್ಷಕಿಯಾಗಿದ್ದಾರೆ. ಅನೇಕ ಕಷ್ಟ – ನಷ್ಟಗಳನ್ನು ಅನುಭವಿಸಿ ಶಾಲೆ ಕಲಿತರು. ನಂತರ ಶಿಕ್ಷಕಿಯಾಗಿ ದೇಶಕ್ಕೆ ಸೇವೆ ಸಲ್ಲಿಸಿದರು ಎಂದು ಮುಖ್ಯ ಶಿಕ್ಷಕ ಬಿ.ಬಿ. ಕುರಿ ಹೇಳಿದರು.
ಪಟ್ಟಣದ ಕೆಜಿಎಂಎಸ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂದಿನ ದಿನಗಳಲ್ಲಿ ಮಹಿಳೆಯರು ಶಾಲೆ ಕಲಿಯುವಂತಿರಲಿಲ್ಲ ಮತ್ತು ಕಲಿಸುವಂತೆಯೂ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಅವರು ತಮ್ಮ ಪತಿಯ ಬೆಂಬಲ ಮಾರ್ಗದರ್ಶನದೊಂದಿಗೆ ಶಾಲೆ ಕಲಿತು, ಕಲಿಸತೊಡಗಿದರು. ಮಹಿಳೆಯರು ಶಿಕ್ಷಣ ಪಡೆದರೆ ಮಾತ್ರ ಈ ದೇಶದ ಉದ್ಧಾರ ಸಾಧ್ಯ ಎಂಬುದನ್ನು ಅವರು ಬಲವಾಗಿ ನಂಬಿದ್ದರು ಎಂದರು.
ಶಿಕ್ಷಕ ಜೆ.ಎ. ಪಾಟೀಲ ಮಾತನಾಡಿದರು. ಶಿಕ್ಷಕಿಯರಾದ ಎನ್.ಎಲ್. ಚವ್ಹಾಣ, ಎಂ.ಪಿ. ಅಣಗೌಡರ, ಎಸ್.ಐ. ಜಗಾಪುರ, ರಾಜೇಶ್ವರಿ ಗವಳಿ, ಶಿಕ್ಷಕ ಡಿ.ವಿ. ಕಳ್ಳಿ ಇದ್ದರು.