25.5 C
Bangalore
Monday, December 16, 2019

ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಮೊದಲ ಹಂತದ ಮತದಾನ ಬಹುತೇಕ ಶಾಂತಿಯುತ: ಚುನಾವಣಾ ಆಯೋಗ

Latest News

ರಾಜರಾಜೇಶ್ವರಿ ನಗರದ ಸಮಸ್ಯೆ ಬಗೆಹರಿಸುವಂತೆ ಬಿಜೆಪಿ ನಾಯಕರ ಬೆನ್ನುಹತ್ತಿರುವ ಅನರ್ಹ ಶಾಸಕ ಮುನಿರತ್ನ

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಸಮಸ್ಯೆ ಬಗೆ ಹರಿಸಿ ಶೀಘ್ರವೇ ಉಪ ಚುನಾವಣೆ ನಡೆಯುವಂತೆ ಮಾಡಬೇಕು ಎಂದು ಅನರ್ಹ ಶಾಸಕ ಮುನಿರತ್ನ...

ಪೌರತ್ವ ತಿದ್ದುಪಡಿ ಕಾಯ್ದೆ, ಎನ್​ಆರ್​ಸಿ ವಿರುದ್ಧ ಕೋಲ್ಕತ್ತದಲ್ಲಿ ಬೃಹತ್​ ರ‍್ಯಾಲಿ; ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವ

ಕೋಲ್ಕತ್ತ: ಪೌರತ್ವ ತಿದ್ದುಪಡಿ ಕಾಯ್ದೆ ಈಗಾಗಲೇ ದೇಶದ ಕೆಲವು ರಾಜ್ಯಗಳಲ್ಲಿ ಕಿಡಿ ಹೊತ್ತಿಸಿದೆ. ದೇಶದ ಈಶಾನ್ಯ ಭಾಗದಲ್ಲಿ ಪ್ರಾರಂಭವಾದ ಪ್ರತಿಭಟನೆ ಈಗ ದೆಹಲಿ, ಉತ್ತರ ಪ್ರದೇಶ...

ಮುಸ್ಲಿಂರಿಂದ ಅಯ್ಯಪ್ಪ ಮಾಲಾಧಾರಿಗಳಿಗೆ ಅನ್ನದಾನ

* ಸಾಮರಸ್ಯಕ್ಕೆ ಮುನ್ನುಡಿ ಬರೆದ ಕಾರ್ಯಕ್ರಮವಿಜಯವಾಣಿ ಸುದ್ದಿಜಾಲ ಬಳ್ಳಾರಿನಗರದ ಹೊಸಪೇಟೆ ರಸ್ತೆಯಲ್ಲಿರುವ ಏಳು ಮಕ್ಕಳ ದೇವಸ್ಥಾನದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಸೋಮವಾರ ಮುಸ್ಲಿಂರು ಊಟ...

ಒಂದೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ ಎದೆಗೆ ನಾಟಿದ್ದ ಕಬ್ಬಿಣ ರಾಡ್​ ಹೊರತೆಗೆದ ವೈದ್ಯರು: ಪ್ರಾಣಾಪಾಯದಿಂದ ವ್ಯಕ್ತಿ ಪಾರು

ರಾಯಚೂರು: ಎದೆಗೆ ಕಬ್ಬಿಣದ ರಾಡ್ ತೂರಿದ್ದ ವ್ಯಕ್ತಿಗೆ ರಾಯಚೂರಿನ ಖಾಸಗಿ ಆಸ್ಪತ್ರೆಯ ವೈದ್ಯರು ಸತತ ಒಂದೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ ಪ್ರಾಣಾಪಾಯದಿಂದ ಪಾರು...

ಹಿಂದು ರಾಷ್ಟ್ರದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಮಿತಿಮೀರಿದೆ

ಕೊಡಗು: ಹಿಂದು ರಾಷ್ಟ್ರದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಮಿತಿಮೀರಿದೆ ಎಂದು ವಕೀಲ ಪಿ. ಕೃಷ್ಣಮೂರ್ತಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಹಿಂದು ಜನಜಾಗೃತಿ ಸಮಿತಿಯಿಂದ ಕುಶಾಲನಗರದ ಗಾಯತ್ರಿ ಕಲ್ಯಾಣ...

ನವದೆಹಲಿ: ಸಣ್ಣಪುಟ್ಟ ಗಲಾಟೆಗಳನ್ನು ಹೊರತುಪಡಿಸಿ ಲೋಕಸಭೆ ಚುನಾವಣೆಯಲ್ಲಿ ಮೊದಲ ಹಂತದ ಮತದಾನ ಪ್ರಕ್ರಿಯೆ ಬಹುತೇಕ ಶಾಂತಿಯುತವಾಗಿ ಮುಕ್ತಾಯವಾಯಿತು ಎಂದು ಮುಖ್ಯ ಚುನಾವಣಾ ಆಯೋಗದ ಉಪ ಚುನಾವಣಾ ಆಯುಕ್ತ ಉಮೇಶ್​ ಸಿನ್ಹಾ ತಿಳಿಸಿದ್ದಾರೆ.

- Advertisement -

ಗುರುವಾರ ಸಂಜೆ 6 ಗಂಟೆಗೆ ಮತದಾನ ಮುಗಿದ ನಂತರದಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಂಡಮಾನ್​ ನಿಕೋಬಾರ್​ ದ್ವೀಪ ಸಮೂಹ ಮತ್ತು ಲಕ್ಷದ್ವೀಪ ಸೇರಿ ಎರಡು ಕೇಂದ್ರಾಡಳಿತ ಪ್ರದೇಶ ಹಾಗೂ 18 ರಾಜ್ಯಗಳು ಸೇರಿ 91 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹಕ್ಕುಚಲಾಯಿಸಿದ್ದಕ್ಕಾಗಿ ಜನರಿಗೆ ಅಭಿನಂದನೆಗಳು ಎಂದರು.

ಸಂಜೆ 6 ಗಂಟೆಯವರೆಗಿನ ಶೇಕಡವಾರು ಮತದಾನದ ವಿವರ ನೀಡಿದ ಅವರು, ಅಂಡಮಾನ್​ ಮತ್ತು ನಿಕೋಬಾರ್​ ದ್ವೀಪ ಸಮೂಹದ 1 ಕ್ಷೇತ್ರಕ್ಕೆ ನಡೆದ ಮತದಾನದಲ್ಲಿ ಶೇ.70.67 ಮತದಾನವಾಗಿದೆ. ಆಂಧ್ರಪ್ರದೇಶದ 25 ಕ್ಷೇತ್ರಗಳಲ್ಲಿ ಶೇ.66, ಛತ್ತೀಸ್​ಗಢದ 1 ಕ್ಷೇತ್ರದಲ್ಲಿ ಶೇ.56, ತೆಲಂಗಾಣದ 17 ಕ್ಷೇತ್ರಗಳಲ್ಲಿ ಶೇ.60, ಉತ್ತರಾಖಂಡದ 5 ಕ್ಷೇತ್ರಗಳಲ್ಲಿ ಶೇ.57.85, ಜಮ್ಮು ಮತ್ತು ಕಾಶ್ಮೀರದ 2 ಸೀಟುಗಳಿಗಾಗಿ ಶೇ.54.49, ಸಿಕ್ಕಿಂನ 1 ಕ್ಷೇತ್ರದಲ್ಲಿ ಶೇ.69, ಮಿಜೋರಾಂನ 1 ಕ್ಷೇತ್ರದಲ್ಲಿ ಶೇ.60, ನಾಗಾಲ್ಯಾಂಡ್​ನ 1 ಕ್ಷೇತ್ರಕ್ಕಾಗಿ ಶೇ.78, ಮಣಿಪುರದ 1 ಕ್ಷೇತ್ರದಲ್ಲಿ ಶೇ.78.2, ತ್ರಿಪುರಾದ 1 ಕ್ಷೇತ್ರದಲ್ಲಿ ಶೇ.81.8, ಅಸ್ಸಾಂನ 5 ಕ್ಷೇತ್ರಗಳಲ್ಲಿ ಶೆ.68, ಪಶ್ಚಿಮ ಬಂಗಾಳದ 2 ಕ್ಷೇತ್ರಗಳಿಗಾಗಿ ಶೇ.81, ಅರುಣಾಚಲ ಪ್ರದೇಶದ 2 ಕ್ಷೇತ್ರಗಳಿಗಾಗಿ ಶೇ.66, ಬಿಹಾರದ 4 ಕ್ಷೇತ್ರಗಳಲ್ಲಿ ಶೇ.50, ಲಕ್ಷದ್ವೀಪದ 1 ಕ್ಷೇತ್ರಕ್ಕಾಗಿ ಶೇ.66, ಮಹಾರಾಷ್ಟ್ರದ 7 ಕ್ಷೇತ್ರಗಳಲ್ಲಿ ಶೇ.56, ಮೇಘಾಲಯದ 2 ಕ್ಷೇತ್ರಗಳಲ್ಲಿ ಶೇ.67.16, ಒಡಿಶಾದ 4 ಕ್ಷೇತ್ರಗಳಲ್ಲಿ ಶೇ.68 ಮತ್ತು ಉತ್ತರ ಪ್ರದೇಶದ 8 ಕ್ಷೇತ್ರಗಳಲ್ಲಿ ಶೇ.63.69 ಮತದಾನವಾಗಿದೆ ಎಂದು ವಿವರ ಒದಗಿಸಿದರು. (ಏಜೆನ್ಸೀಸ್​)

Stay connected

278,752FansLike
588FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...