More

    ಎರಡು ಹಂತದಲ್ಲಿ ಸಂಸತ್​ ಬಜೆಟ್​ ಅಧಿವೇಶನ; ಫೆ.1ರಂದು ಕೇಂದ್ರ ಬಜೆಟ್​ ಮಂಡನೆ ಮಾಡಲಿರುವ ನಿರ್ಮಲಾ ಸೀತಾರಾಮನ್​

    ನವದೆಹಲಿ: ಸಂಸತ್ತಿನ ಬಜೆಟ್​ ಅಧಿವೇಶನ ಎರಡು ಹಂತದಲ್ಲಿ ನಡೆಯಲಿದೆ. ಮೊದಲ ಹಂತ ಜನವರಿ 31ರಿಂದ ಫೆಬ್ರವರಿ 11ರವರೆಗೆ ಹಾಗೂ ಎರಡನೇ ಹಂತ ಮಾರ್ಚ್​ 2ರಿಂದ ಏಪ್ರಿಲ್​ 3ರವರೆಗೆ ನಡೆಯಲಿದೆ. ಫೆ.1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ 2020-21ರ ಬಜೆಟ್​ ಮಂಡನೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ದೇಶದ ಆರ್ಥಿಕ ಸ್ಥಿತಿ ಕುಸಿತ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿವಾದದ ಮಧ್ಯೆ ಈ ಬಜೆಟ್ ಅಧಿವೇಶನ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇವೆರಡೂ ವಿಚಾರಗಳನ್ನಿಟ್ಟುಕೊಂಡು ಪ್ರತಿಪಕ್ಷಗಳು ಸರ್ಕಾರಕ್ಕೆ ಹೆಚ್ಚಿನ ಪ್ರಶ್ನೆ ಕೇಳಲು ಯೋಜನೆ ರೂಪಿಸಿಕೊಂಡಿವೆ. ಆರ್ಥಿಕತೆ ಹಾಗೂ ಪೌರತ್ವ ಕಾಯ್ದೆ ವಿಚಾರಗಳೇ ಅಧಿವೇಶನದಲ್ಲಿ ಅಧಿಕ ಚರ್ಚೆಗೆ ಒಳಪಡಲಿವೆ ಎನ್ನಲಾಗಿದೆ.

    ಅಧಿಕೃತ ಜಿಡಿಪಿ ಅಭಿವೃದ್ಧಿ ಅಂದಾಜು ಡಾಟಾ ಮಂಗಳವಾರ ಬಿಡುಗಡೆಯಾಗಿದ್ದು ಅದರ ಪ್ರಕಾರ ಭಾರತದ ಆರ್ಥಿಕತೆ 2020-21ರಲ್ಲಿ ಶೇ.5ರಷ್ಟು ವಿಸ್ತಾರಗೊಳ್ಳುವ ಸಾಧ್ಯತೆ ಇದೆ. ದಶಕದಲ್ಲೇ ಇದು ಅತ್ಯಂತ ನಿಧಾನಗತಿ ಬೆಳವಣಿಗೆ ಎಂದು ಅಂದಾಜಿಸಲಾಗಿದೆ.

    ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್​ ಮಾಡುವ ಮೂಲಕ ಈ ಬಾರಿಯ ಕೇಂದ್ರ ಬಜೆಟ್​ಗೆ ಜನಸಾಮಾನ್ಯರು ಮೈ ಗೌ ವೆಬ್​ ಪೋರ್ಟಲ್​ ನಲ್ಲಿ ಸಲಹೆ, ಸೂಚನೆಗಳನ್ನು ನೀಡಬಹುದು ಎಂದು ಹೇಳಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts