First love ಎನ್ನುವುದೆಲ್ಲ ಸುಳ್ಳು

ಶಾಂತಾ ನಾಗರಾಜ್​, ಆಪ್ತ ಸಲಹೆಗಾರ್ತಿ

ನಾನು ಪ್ರಥಮ ಬಿ.ಎ ಓದುತ್ತಿರುವ ವಿದ್ಯಾರ್ಥಿನಿ. ನಮ್ಮ ಕಾಲೇಜಿನಲ್ಲಿ ಕೆಲಸ ಮಾಡುವ ಉಪನ್ಯಾಸಕರೊಬ್ಬರನ್ನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದೇನೆ. ಆದರೆ ಅವರ ಹತ್ತಿರ ಹೇಳಲು ಭಯ. ನನ್ನನ್ನು ನೋಡಿ ಒಮ್ಮೊಮ್ಮೆ ಅವರು ಮುಗುಳ್ನಗುತ್ತಾರೆ. ಆಗೆಲ್ಲ ಅವರೂ ನನ್ನನ್ನು ಪ್ರೀತಿಸುತ್ತಿದ್ದಾರೆ ಎಂದುಕೊಳ್ಳುತ್ತೇನೆ. ನನಗಿಂತ ಹತ್ತುವರ್ಷ ದೊಡ್ಡವರು ಅವರು. ಆದರೂ ನನ್ನ ಪ್ರೀತಿ ಅಖಂಡವಾಗಿದೆ. ಊಜ್ಟಿಠಠಿ ್ಝಡಛಿ ಜಿಠ ಠಿಜಛಿ ಚಿಛಿಠಠಿ ್ಝಡಛಿ ಅಲ್ವಾ ಮೇಡಂ? ಅವರು ನನಗೆ ಸಿಕ್ಕರೆ ಮಾತ್ರ ನಾನು ನನ್ನ ಇಡೀ ಜೀವನವನ್ನು ಸುಖವಾಗಿ ಕಳೆಯುತ್ತೇನೆ ಎನಿಸುತ್ತದೆ. ಅವರನ್ನು ಬಿಟ್ಟು ಒಂದು ಅರೆಘಳಿಗೆಯೂ ಇರಲಾರೆ. ಕಾಲೇಜಿಗೆ ಅವರು ಬಾರದ ದಿನ ದುಃಖಿತಳಾಗುತ್ತೇನೆ. ನನಗೆ ಈ ವಿಚಾರವನ್ನು ನನ್ನ ಮನೆಯಲ್ಲಿ ಹೇಳಲೂ ಭಯ. ಏನು ಮಾಡಲಿ ಮೇಡಂ? ಈ ನನ್ನ ಸಮಸ್ಯೆಯನ್ನು ಹೇಗೆ ಪರಿಹರಿಸಿಕೊಳ್ಳಲಿ?

ನಿಮ್ಮ ಒಂದೂವರೆ ಪುಟದ ತಪ್ಪಿಲ್ಲದ ಗುಂಡಾದ ಕನ್ನಡದ ಕಾಗದಕ್ಕೆ ಮೆಚ್ಚುಗೆಗಳು. ನೀವೀಗ ಪ್ರಥಮ ಬಿಎ ಓದುತ್ತಿರುವುದರಿಂದ ನಿಮಗೆ ಹದಿನೆಂಟು ವರ್ಷ ವಯಸ್ಸಾಗಿರಬಹುದು. ಆದರೆ ನಿಮ್ಮ ಯೋಚನಾ ಲಹರಿಗಳೆಲ್ಲ 6ರಿಂದ 10 ವರ್ಷ ವಯಸ್ಸಿನ ಮಗುವಿನಂತಿದೆ. ಈ ವಯಸ್ಸಿನಲ್ಲಿ ಮಕ್ಕಳಿಗೆ ಏನಾದರೂ ಬೇಕು ಎನಿಸಿದರೆ ಮತ್ತೆ ಮತ್ತೆ ಅದೇ ವಿಷಯದ ಬಗ್ಗೆ ಯೋಚಿಸುತ್ತಾರೆ. ನೀವೂ ಸಹ ಹಾಗೇ ಯೋಚಿಸುತ್ತಿದ್ದೀರಿ. ನಿಮ್ಮ ವಯಸ್ಸಿಗೆ ಇದು ಸಲ್ಲದು. ಹದಿನೆಂಟು ವರ್ಷದ ಹುಡುಗಿ ಜಗತ್ತಿನ ವಾಸ್ತವವನ್ನು ಅರಿತು, ಅದರ ಮೇಲೆ ತನ್ನ ಚಿಂತನೆಯ ಕ್ರಮವನ್ನು ಬೆಳೆಸಿಕೊಳ್ಳಬೇಕು. ಈಗ ಸರಿಯಾಗಿ ನಿಮ್ಮ ವಯಸ್ಸಿನ ಪ್ರೌಢತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ನಿಮ್ಮ ಪ್ರೇಮದ ಬಗ್ಗೆ ಯೋಚನೆ ಮಾಡಿ. ನೀವು ಪತ್ರದಲ್ಲಿ ಬರೆದಿರುವ ಸಾಲುಗಳನ್ನೇ ಬಳಸಿ ನಿಮಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತೇನೆ ‘ನನ್ನನ್ನು ನೋಡಿ ಮುಗುಳ್ನಗುತ್ತಾರೆ’ ಎಂದಿದ್ದೀರಿ. ಅವರು ನಿಮ್ಮ ಕಾಲೇಜಿನಲ್ಲಿರುವ ನೂರಾರು ಹುಡುಗಿಯರನ್ನು ನೋಡಿಯೂ ಹೀಗೇ ಮುಗುಳ್ನಕ್ಕಿರಬಹುದಲ್ಲವೇ? ಹಾಗೆ ನಕ್ಕ ತಪ್ಪಿಗೆ ಆ ಎಲ್ಲರನ್ನೂ ಅವರು ಮದುವೆಯಾಗಲಿಕ್ಕೆ ಆಗುತ್ತದೆಯೇ? ‘ಅವರು ನನಗಿಂತ ಹತ್ತು ವರ್ಷ ದೊಡ್ಡವರು’ ಎಂದು ಬರೆದಿದ್ದೀರಿ. ಹಾಗಾದರೆ ಅವರಿಗೀಗಾಲೇ ಮದುವೆಯಾಗಿರಬಹುದಲ್ಲವೇ? ಅಥವಾ ಅವರ ವಯಸ್ಸಿಗೆ ಹೊಂದುವಂಥ ಹುಡುಗಿಯನ್ನು ಅವರೇ ಆರಿಸಿಕೊಂಡಿರಬಹುದಲ್ಲವೇ? ನೀವು ಅವರನ್ನು ಇಷ್ಟಪಟ್ಟಿದ್ದೀರಿ ಎನ್ನುವ ಒಂದೇ ಕಾರಣಕ್ಕೆ ಅವರು ಯಾಕೆ ಹತ್ತು ವರ್ಷ ಚಿಕ್ಕವಳನ್ನು ಮದುವೆಯಾಗಬೇಕು? ಇತ್ತೀಚಿನ ಯುವಕರು ತೀರಾ ಚಿಕ್ಕ ಹುಡುಗಿಯನ್ನು ಮದುವೆಯಾಗಲು ಒಪ್ಪುವುದಿಲ್ಲ. ಈಗ ನಾನು ಹೇಳುತ್ತೇನೆ ಕೇಳಿ. ನಿಮ್ಮಲ್ಲಿ ಬುದ್ಧಿಯೂ ಇದೆ, ಭಾವನೆಗಳೂ ಇವೆ. ಭಾವನೆಗಳ ಕೈಗೆ ಬುದ್ಧಿಯನ್ನು ಕೊಟ್ಟಿದ್ದೀರಿ. ಅದರ ಬದಲು ಬುದ್ಧಿಯ ಕೈಗೆ ಭಾವನೆಗಳನ್ನು ಕೊಡಿ. ಅದು ಸರಿಯಾಗಿ ನಿಯಂತ್ರಿಸುತ್ತದೆ. ಅರ್ಥವಾಗಲಿಲ್ಲವೇ? ಉದಾಹರಣೆಗೆ, ಪುಟ್ಟ ಮಗುವಿಗೆ ಚಾಕೋಲೇಟ್ ಬೇಕೆಂದು ಆಸೆಯಾಗುತ್ತದೆ. ಅಮ್ಮ ‘ಬೇಡ, ಹಲ್ಲು ಹಾಳಾಗುತ್ತದೆ’ ಎನ್ನುತ್ತಾಳೆ. ಮಗು ರಸ್ತೆಯಲ್ಲೇ ಕುಳಿತು ಕಾಲು ಮಸೆಯುತ್ತ ಅಳುತ್ತ ಕುಳಿತುಬಿಡುತ್ತದೆ. ಯಾಕೆಂದರೆ ಆ ಮಗುವಿಗೆ ಆ ಕ್ಷಣಕ್ಕೆ ಆಸೆ ಎನ್ನುವ ಭಾವನೆ ಮಾತ್ರ ಇದೆ. ಅದನ್ನು ನಿಯಂತ್ರಣಕ್ಕೆ ತಂದುಕೊಳ್ಳುವ ಬುದ್ಧಿಯಿಲ್ಲ. ಭಾವನೆಗಳನ್ನು ಬುದ್ಧಿಯ ಸಹಾಯದಿಂದ ನಿಯಂತ್ರಿಸುವುದನ್ನು ಎಮೋಷನಲ್ ಇಂಟಲಿಜೆನ್ಸ್ ಎನ್ನುತ್ತಾರೆ. ನೀವೀಗ ಆ ಮಗುವಿನ ಹಾಗೆ ಕೇವಲ ಭಾವನೆಗಳ ಹಗ್ಗವನ್ನು ಹಿಡಿದು ತೂಗಾಡುತ್ತಿದ್ದೀರಿ. ನಿಮ್ಮೊಳಗೇ ಇರುವ ಬುದ್ಧಿಗೂ ಒಂದಿಷ್ಟು ಕೆಲಸ ಕೊಡಿ. ನಿಮ್ಮನ್ನೇ ನೀವು ಒಂದಿಷ್ಟು ಪ್ರಶ್ನೆಗಳನ್ನು ಕೇಳಿಕೊಳ್ಳುವುದರ ಮೂಲಕ ಬುದ್ಧಿಯನ್ನು ಜಾಗೃತಗೊಳಿಸಿಕೊಳ್ಳಬಹುದು. ‘ನನಗಿನ್ನೂ 18 ವರ್ಷ ವಯಸ್ಸು, ಈಗಲೇ ಪ್ರೇಮ ಪ್ರೀತಿ ಎಂದು ಬದುಕನ್ನು ಮೊಟಕು ಗೊಳಿಸಿಕೊಳ್ಳಬೇಕೇ? ಅಥವಾ ವಿದ್ಯೆಯ ಕಡೆ ಮನಸ್ಸಿಟ್ಟು ಓದಿ ನನ್ನ ಅನ್ನವನ್ನು ನಾನು ಸಂಪಾದಿಸಿಕೊಳ್ಳುವಷ್ಟು ಜಾಣಳಾಗಬೇಕೇ?, ಕೇವಲ ವ್ಯಕ್ತಿಯನ್ನು ಕೆಲವು ಗಂಟೆಗಳ ಕಾಲ ಮಾತ್ರ ನೋಡಿ ‘ಅವರು ತುಂಬಾ ಒಳ್ಳೆಯವರು’ ಎನ್ನುವ ನಿರ್ಧಾರಕ್ಕೆ ಬರಲು ಹೇಗೆ ಸಾಧ್ಯ? ಪ್ರತಿ ವ್ಯಕ್ತಿಗೂ ಎರಡು ಮೂರು ಬೇರೆ ಬೇರೆ ಮುಖಗಳಿರುತ್ತವೆ. ಆದ್ದರಿಂದ ಒಬ್ಬ ವ್ಯಕ್ತಿಯನ್ನು ಸಂಪೂರ್ಣವಾಗಿ ಅರಿಯದೆ ಅವರ ಜತೆ ಜೀವಮಾನವಿಡೀ ಸುಖವಾಗಿರಬಲ್ಲೆ ಎಂದು ಹೇಗೆ ನಿರ್ಧರಿಸಿದೆ? ಹೀಗೇ ಬೇರೆ ಬೇರೆ ಆಯಾಮಗಳಿಂದ ಒಂದು ವಿಷಯವನ್ನು ನೋಡಿ. ತಂದೆತಾಯಿಯರು ಮಗಳಿಗೆ ಗಂಡನ್ನು ನೋಡುವಾಗ ಅವರ ಕುಲ, ಇತರ ಸಂಬಂಧಿಗಳ ಬಗ್ಗೆ ವಿಚಾರಣೆ, ಆತ ಮಾಡುತ್ತಿರುವ ಕೆಲಸದ ಬಗ್ಗೆ ಖಾತ್ರಿ ಏನೆಲ್ಲವನ್ನೂ ಪರಿಗಣಿಸಿ ಮಗಳನ್ನು ಕೊಡುತ್ತಾರೆ. ಆದರೂ ಕೆಲವು ಮದುವೆಗಳು ಅಪಯಶಸ್ಸನ್ನು ಕಾಣುತ್ತವೆ. ನೀವೋ First love is the best love ಅನ್ನುವ ಭ್ರಮೆಯ ಎಳೆಯನ್ನು ಹಿಡಿದು ಜೀವನದ ಕೌದಿ ಹೊಲೆಯಲು ಪ್ರಯತ್ನಿಸುತ್ತಿದ್ದೀರಿ. ಈ First love ಎನ್ನುವುದೆಲ್ಲ ಸುಳ್ಳು. ಮನಸ್ಸೇ ಪರಿಪಕ್ವವಾಗಿಲ್ಲದಾಗ ಮಾಡುವ ಪ್ರೀತಿ, ಕೇವಲ ಪ್ರಮತ್ತತೆ (ಕ್ಷಣ ಭಂಗುರ) ಅಷ್ಟೆ.

ಶಾಂತಾ ನಾಗರಾಜ್ ಅವರನ್ನು ಪ್ರತಿ ಸೋಮವಾರ ಸಂಜೆ 6 ಗಂಟೆಗೆ ಪ್ರಸನ್ನ ಆಪ್ತಸಲಹಾ ಕೇಂದ್ರ ಅರುಣಚೇತನದಲ್ಲಿ ಸಂರ್ಪಸಬಹುದು. ಸಲಹೆ ಉಚಿತ. ಸೋಮವಾರ ಮಧ್ಯಾಹ್ನ 11ರಿಂದ 1ರವರೆಗೆ ಕರೆ ಮಾಡಿ ಅಪಾಯಿಂಟ್​ವೆುಂಟ್ ಪಡೆದುಕೊಳ್ಳಬಹುದು. ಸಂಖ್ಯೆ: 9480999959. ಪತ್ರ ಬರೆಯುವವರು ವಿಜಯವಾಣಿ ಲಲಿತಾ ಪುರವಣಿಗೆ ಬರೆಯಬೇಕು.

Leave a Reply

Your email address will not be published. Required fields are marked *