ಬ್ಲ್ಯಾಕ್​ ಹೋಲ್ ಚಿತ್ರ ಬಹಿರಂಗ

ವಾಷಿಂಗ್ಟನ್: ವಿಜ್ಞಾನಿಗಳು ಇದೇ ಮೊದಲ ಬಾರಿಗೆ ಬ್ಲಾ್ಯಕ್ ಹೋಲ್ (ಕಪು್ಪರಂಧ್ರ) ಚಿತ್ರವನ್ನು ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಬುಧವಾರ ನ್ಯಾಷನಲ್ ಸೈನ್ಸ್ ಫೌಂಡೇಷನ್ ಮಾಹಿತಿ ನೀಡಿದ್ದು, 2017ರ ಏಪ್ರಿಲ್​ನಲ್ಲಿ ಟೆಲಿಸ್ಕೋಪ್​ನ ಜಾಗತಿಕ ನೆಟ್​ವರ್ಕ್ ಒಂದುಗೂಡಿ ಬ್ಲಾ್ಯಕ್ ಹೋಲ್ ಮೊದಲ ಚಿತ್ರವನ್ನು ಸೆರೆ ಹಿಡಿದಿತ್ತು. ಈ ಬಗ್ಗೆ ಅಧ್ಯಯನಗಳನ್ನು ನಡೆಸಿ ಇದರ ಮೊದಲ ಚಿತ್ರವನ್ನು ಬಹಿರಂಗಪಡಿಸಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಚಿತ್ರದಲ್ಲಿ ಬೃಹತ್ ಕಪು್ಪರಂಧ್ರ ಮತ್ತು ಎಂ80 ಗ್ಯಾಲಕ್ಸಿಯ ಮಧ್ಯಭಾಗದಲ್ಲಿ ಇದರ ನೆರಳನ್ನು ಗಮನಿಸ ಬಹುದಾಗಿದೆ. ಬಾಹ್ಯಾಕಾಶ ಬ್ಲಾ್ಯಕ್ ಹೋಲ್ ಇರುವಿಕೆಯ ಬಗ್ಗೆ ಹಲವು ದಶಕಗಳಿಂದ ವಿಜ್ಞಾನಿಗಳು ಉಲ್ಲೇಖಿಸುತ್ತ ಬಂದಿದ್ದಾರಾದರೂ ಇದಕ್ಕೆ ಈ ಚಿತ್ರ ಮೊದಲ ಸಾಕ್ಷಿಯಾಗಿದೆ.

ಭೂಮಿಯಿಂದ 55 ಮಿಲಿಯನ್ ಜ್ಯೋತಿರ್ವರ್ಷ ದೂರದಲ್ಲಿರುವ ಮೆಸ್ಸೀಯರ್ 87 ಅಥವಾ ಎಂ87 ಗ್ಯಾಲಕ್ಸಿ ಸಮೀಪದಲ್ಲಿ ಇದು ಕಂಡುಬಂದಿದೆ. ಸದ್ಯದ ಅಧ್ಯಯನಗಳ ಪ್ರಕಾರ ಈ ಕಪು್ಪರಂದ್ರ ಸೂರ್ಯನಿಗೆ ಹೋಲಿಕೆ ಮಾಡಿದರೆ 6.5 ಬಿಲಿಯನ್ ಪಟ್ಟು ದ್ರವ್ಯರಾಶಿ ಹೊಂದಿದೆ. ಈವರೆಗೆ ಬ್ಲಾ್ಯಕ್ ಹೋಲ್ ಕಲ್ಪನೆ ಇತ್ತಾದರೂ ಇದನ್ನು ನೋಡಬಹುದು ಎಂದು ಅನಿಸಿರಲಿಲ್ಲ. ಆದರೆ ಈಗ ಇದರ ಚಿತ್ರವನ್ನೂ ತೆಗೆಯಲಾಗಿದೆ ಎಂದು ಇವೆಂಟ್ ಹಾರಿಜನ್ ಟೆಲಿಸ್ಕೋಪ್ ಕೊಲಾಬರೇಷನ್​ನ ನಿರ್ದೇಶಕ ಶೆಪೆರ್ಡ್ ಡೊಲೆಮನ್ ಹೇಳಿದ್ದಾರೆ.

ಬ್ಲಾ್ಯಕ್ ಹೋಲ್ ಸೆರೆಹಿಡಿಯುವ ಸಲುವಾಗಿ ಜಾಗತಿಕ ಮಟ್ಟದ ಟೆಲಿಸ್ಕೋಪ್ ಸಂಸ್ಥೆಗಳು ಒಟ್ಟಾಗಿ ಇವೆಂಟ್ ಹಾರಿಜನ್ ಟೆಲಿಸ್ಕೋಪ್ ಕೊಲಾಬರೇಷನ್ ರೂಪಿಸಿದ್ದರು. ಅಂದಾಜು ಒಂದು ದಶಕ ಕಾಲ 200 ಸಂಶೋಧಕರು ಇದಕ್ಕಾಗಿ ಶ್ರಮಿಸಿದ್ದರು. ಜಗತ್ತಿನ 8 ರೇಡಿಯೋ ಟೆಲಿಸ್ಕೋಪ್​ಗಳ ಶಕ್ತಿಯನ್ನು ಒಂದುಗೂಡಿಸಲಾಗಿತ್ತು.