ನನ್ನ ಜಾತಿ ಜನರಿಗಾಗಿ ಕೆಲಸ ಮಾಡುವುದೇ ನನ್ನ ಮೊದಲ ಕರ್ತವ್ಯ: ರಾಜಸ್ಥಾನ ಸಚಿವೆ ಮಮತಾ ಭೂಪೇಶ್‌

ಅಲ್ವಾರ್‌ (ರಾಜಸ್ಥಾನ): ನನ್ನ ಜಾತಿಯವರ ಅಭಿವೃದ್ಧಿಗಾಗಿ ಕೆಲಸ ಮಾಡುವುದೇ ನನ್ನ ಮೊದಲ ಆದ್ಯತೆ ಎಂದು ಸಚಿವೆ ಮಮತಾ ಭೂಪೇಶ್‌ ಹೇಳಿದ್ದಾರೆ.

ಕಾಂಗ್ರೆಸ್‌ ನೇತೃತ್ವದ ಸಂಪುಟದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಅಲ್ವಾರ್‌ ಜಿಲ್ಲೆಯ ರೇನಿ ಟೌನ್‌ನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿ, ನನ್ನ ಜಾತಿಯ ಜನಗಳ ಅಭಿವೃದ್ಧಿಗಾಗಿ ಕೆಲಸ ಮಾಡುವುದೇ ನನ್ನ ಮೊದಲ ಕರ್ತವ್ಯ. ನಂತರ ಇತರೆ ಸಮಾಜದ ಬಗ್ಗೆ ಗಮನ ಹರಿಸುತ್ತೇನೆ. ನಾನು ಎಲ್ಲರ ಒಳಿತಿಗೂ ಕೆಲಸ ಮಾಡಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

ಇನ್ನು ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ 199 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 99 ಸ್ಥಾನಗಳನ್ನು ಗಳಿಸುವ ಮೂಲಕ ಸರ್ಕಾರ ರಚನೆ ಮಾಡಿತ್ತು. ಇದೀಗ ಜಾತಿ ಆಧರಿತ ಹೇಳಿಕೆ ನೀಡಿ ನೂತನ ಸಂಪುಟದ ಸಚಿವೆಯೊಬ್ಬರು ವಿವಾದಕ್ಕೆ ಸಿಲುಕಿದ್ದಾರೆ. (ಏಜೆನ್ಸೀಸ್)